ಕೋಲಾರ ( ವಿಶ್ವ ಕನ್ನಡಿಗ ನ್ಯೂಸ್ ): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ Auto Renewal of Student bus pass ( ಸ್ವಯಂ ನವೀಕರಣ ) ಯೋಜನೆಯನ್ನು ಜಾರಿಗೆ ತಂದಿದ್ದು , ಈಗಾಗಲೇ ಕಳೆದ ಸಾಲಿನಲ್ಲಿ ಬಸ್ ಪಾಸುಗಳನ್ನು ಪಡೆದಿರುವ ವಿದ್ಯಾರ್ಥಿಗಳು ಪ್ರಸಕ್ತ ಸಾಲಿಗೆ ಬಸ್ ಪಾಸ್ ಪಡೆಯಲು ಅರ್ಜಿ ಸಲ್ಲಿಸಿದಲ್ಲಿ ಅವರ ಮಾಹಿತಿಯಲ್ಲಿ ತರಗತಿಯನ್ನು ಹೊರತುಪಡಿಸಿ ಬೇರಾವುದೂ ಬದಲಾವಣೆ ಇಲ್ಲದಿದ್ದಲ್ಲಿ ಅಂತಹ ವಿದ್ಯಾರ್ಥಿಗಳಿಗೆ Auto Renewal of Student bus pass ಸಂಬಂಧ ವಿದ್ಯಾರ್ಥಿಯು ನೊಂದಾಯಿಸಿರುವ ದೂರವಾಣಿ ಸಂಖ್ಯೆಗೆ ಹೊಸ ಬಸ್ ಪಾಸ್ ಪಡೆಯುವಂತೆ ಎಸ್.ಎಂ.ಎಸ್ ( ನಿಮ್ಮ ವಿದ್ಯಾರ್ಥಿ ಪಾಸನ್ನು ನವೀಕರಿಸಲಾಗಿದೆ.
ದಯವಿಟ್ಟು ಈ ಹಿಂದೆ ಪಡೆದ ಬಸ್ ಪಾಸ್ ಕೌಂಟರ್ನಲ್ಲಿಯೇ , ನಿಗದಿತ ಶುಲ್ಕ ಪಾವತಿ ಮಾಡಿ ಬಸ್ ಪಾಸನ್ನು ಪಡೆದುಕೊಳ್ಳಿ ) ಎಂದು ರವಾನೆಯಾಗುತ್ತದೆ. ಸದರಿ ಎಸ್.ಎಂ.ಎಸ್ನ್ನು ಪಡೆದಿರುವ ವಿದ್ಯಾರ್ಥಿಯು ಕೌಂಟರ್ಗೆ ಹಾಜರಾಗಿ ನಿಗಧಿತ ಶುಲ್ಕ ಪಾವತಿಸಿ ಬಸ್ ಪಾಸನ್ನು ಪಡೆಯಬಹುದು ಎಂದು ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.