ಭಾರತೀಯ ವಯಸ್ಕರ ಸ್ನಾಯುಗಳನ್ನು ಸಂರಕ್ಷಿಸಿ ಬಲಪಡಿಸುವುದಕ್ಕೆ ನೆರವಾಗಲು ಎಚ್ಎಮ್ಬಿ ಇರುವ ಹೊಸ ಎನ್ಶೂರ್ ಪರಿಚಯಿಸಿದ ಅಬಾಟ್
ಬೆಂಗಳೂರು, (www.vknews.in) – ನಮಗೆಲ್ಲರಿಗೂ ವಯಸ್ಸಾಗುತ್ತದೆ ಎಂಬುದು ರಹಸ್ಯವೇನೂ ಅಲ್ಲ. ಆದರೆ, ಈ ವಯಸ್ಸಾಗುವಿಕೆಯೊಂದಿಗೆ ಸ್ನಾಯುನಷ್ಟ ಏರ್ಪಟ್ಟರೆ, ಅದು ನಮ್ಮ ಚಲನಶೀಲತೆ, ಬಲ, ಶಕ್ತಿ, ಮತ್ತು ನಿರೋಧಕತೆಯ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. 40ರಿಂದ ಆರಂಭಗೊಂಡು ವಯಸ್ಕರು, ಪ್ರತಿ ದಶಕದಲ್ಲಿ ತಮ್ಮ ಸ್ನಾಯುವಿನ 8%ನಷ್ಟು ಕಳೆದುಕೊಳ್ಳುತ್ತಾರೆ ಮತ್ತು ಈ ಪ್ರಮಾಣವು, 70 ವಯಸ್ಸಿನ ನಂತರ ದ್ವಿಗುಣಗೊಳ್ಳುತ್ತಾ ಹೋಗುತ್ತದೆ. ವಯಸ್ಕರನ್ನು ಬಲಶಾಲಿಯಾಗಿ ಮತ್ತು ಕ್ರಿಯಾಶೀಲರನ್ನಾಗಿ ಇಡುವುದಕ್ಕೆ ನೆರವಾಗಲು, ಜಾಗತಿಕ ಆರೋಗ್ಯಶುಶ್ರೂಷಾ ಸಂಸ್ಥೆಯಾದ ಅಬಾಟ್, ಭಾರತೀಯರು ವೃದ್ಧರಾಗುತ್ತಿದ್ದಂತೆ ಅವರಿಗೆ ಬೆಂಬಲ ಒದಗಿಸುವ ಹೊಸ ಫಾರ್ಮುಲೇಶನ್ ಆದ ಎಚ್ಎಮ್ಬಿ ಇರುವ ಹೊಸ ಎನ್ಶೂರ್ ನ ಪರಿಚಯವನ್ನು ಇಂದು ಘೋಷಿಸಿತು.
10 ಭಾರತೀಯರ ಪೈಕಿ ನಾಲ್ವರು ಅಸಮರ್ಪಕ ಸ್ನಾಯು ಆರೋಗ್ಯ ಸಮಸ್ಯೆಯಿಂದ ಬಳಲುತ್ತಾರೆ ಮತ್ತು ಇದು ಅನೇಕ ವಿಧಗಳಲ್ಲಿ ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಏರ್ಪಡಿಸುತ್ತದೆ. ಸ್ನಾಯು ನಷ್ಟದಿಂದ ಕುಂಠಿತಗೊಂಡ ಶಕ್ತಿ ಮಟ್ಟಗಳು ಮತ್ತು ಚಲನಶೀಲತೆ, ಬೀಳುವ ಅಥವಾ ಮುರಿದುಕೊಳ್ಳುವ ಅಪಾಯಗಳು ಹೆಚ್ಚಾಗುವುದು, ಸೋಂಕಿನ ದೀರ್ಘಾವಧಿ ಲಕ್ಷಣಗಳು, ಮತ್ತು ಕಾಯಿಲೆ ಅಥವಾ ಶಸ್ತ್ರಚಿಕಿತ್ಸೆಯಿಂದ ವಿಪರೀತ ನಿಧಾನ ಚೇತರಿಕೆ ಮುಂತಾದವು ಏರ್ಪಡುತ್ತದೆ. , ಸರಿಯಾದ ಪೋಷಣೆ ಮತ್ತು ವ್ಯಾಯಾಮ, ವಯೋ-ಸಂಬಂಧಿತ ಸ್ನಾಯು ನಷ್ಟವನ್ನು ಪರಿವರ್ತಿಸುವುದಕ್ಕೆ ಅಥವಾ ತಡೆಗಟ್ಟುವುದಕ್ಕೆ ನೆರವಾಗಬಹುದು.
ಹೊಸ ಎನ್ಶೂರ್, ವಿಜ್ಞಾನ-ಆಧಾರಿತ ಪೌಷ್ಟಿಕ ಪೂರಕಾಹಾರವಾಗಿದ್ದು, ಉನ್ನತ ಗುಣಮಟ್ಟದ ಪ್ರೋಟೀನ್, ಕ್ಯಾಲ್ಶಿಯಮ್ ಮತ್ತು ವಿಟಮಿನ್ ಡಿ ಮುಂತಾದ 2 ಪ್ರಮುಖ ಪೋಷಕಾಂಶಗಳಿಂದ ಕೂಡಿದ್ದು ಸ್ನಾಯು ಮತ್ತು ಮೂಳೆಗಳ ಶಕ್ತಿಯನ್ನು ಹೆಚ್ಚಿಸುವುದಕ್ಕೆ ನೆರವಾಗುತ್ತದೆ. ಈಗ ಇದರಲ್ಲಿ ಎಚ್ಎಮ್ಬಿ ಅಥವಾ -hydroxy-β-methyl butyrate ಎಂಬ ವಿಶೇಷವಾದ ಮತ್ತು ವಿಶಿಷ್ಟವಾದ ಅಂಶವೂ ಇದ್ದು ಇದು ಸ್ನಾಯು ನಷ್ಟವನ್ನು ತಡೆಗಟ್ಟಿ ಬಲ ಮತ್ತು ಶಕ್ತಿಯನ್ನು ಮರಳಿ ಪಡೆದುಕೊಳ್ಳಲು ನೆರವಾಗುತ್ತದೆ.
”ಎಚ್ಎಮ್ಬಿ ಅಥವಾ β-hydroxy-β-methyl butyrate, ಸ್ನಾಯು ವಿಭಜನೆಯನ್ನು ನಿಧಾನಗೊಳಿಸಿ ಸ್ನಾಯು ಮಾಸ್ ನಿರ್ಮಾಣಗೊಳಿಸುವ ಮೂಲಕ ಸ್ನಾಯುಗಳನ್ನು ಸಮತೋಲನದಲ್ಲಿರಿಸಿಕೊಳ್ಳಲು ನೆರವಾಗುತ್ತದೆ.”ಎಂದು ಹೇಳಿದರು, ಸುಪ್ರಸಿದ್ಧ ಎಂಡೋಕ್ರಿನಾಲಜಿಸ್ಟ್ ಡಾ. ಶಶಾಂಕ್ ಜೋಶಿ. “ದೇಹವು, ಲ್ಯೂಸೀನ್ ಎಂಬ ಅವಶ್ಯಕ
ಅಮೈನೋ ಆಮ್ಲವನ್ನು ವಿಭಜಿಸಿದಾಗ ಎಚ್ಎಮ್ಬಿ ನೈಸರ್ಗಿಕವಾಗಿ ಉತ್ಪತ್ತಿಯಾಗುತ್ತದೆ ಮತ್ತು ಇದನ್ನು ಅವೊಕಾಡೊ, ಗ್ರೇಪ್ಫ್ರೂಟ್, ಕಾಲಿಫ್ಲವರ್ ಮುಂತಾದ ಆಹಾರಗಳಲ್ಲಿ ಸಣ್ಣ ಪ್ರಮಾಣದಲ್ಲಿ ಕಾಣಬಹುದು. ಆದರೂ, ಕುಂಠಿತಗೊಳ್ಳುತ್ತಿರುವ ಸ್ನಾಯುವಿನ ಆರೋಗ್ಯಕ್ಕೆ ಆಧಾರ ಒದಗಿಸಲು ಆಹಾರದ ಮೂಲಕ ಸಾಕಷ್ಟು ಪ್ರಮಾಣದ ಎಚ್ಎಮ್ಬಿಯನ್ನು ಪಡೆದುಕೊಳ್ಳುವುದು ಕಷ್ಟ. ಆದ್ದರಿಂದಲೇ, ಪೌಷ್ಟಿಕ ಪೂರಕಾಹಾರಗಳನ್ನು ಸೇವಿಸುವಂತೆ ಅನೇಕ ವೇಳೆ ಸೂಚಿಸಲಾಗುತ್ತದೆ. ಉತ್ತಮ ಪೌಷ್ಟಿಕತೆ ಮತ್ತು ದೈಹಿಕ ಚಟುವಟಿಕೆ, ಒಟ್ಟಾರೆ ಆರೋಗ್ಯಕ್ಕೆ ಬೆಂಬಲ ಒದಗಿಸುವುದಕ್ಕೆ ಮುಖ್ಯವಾದ ಸ್ನಾಯು ಮತ್ತು ಮೂಳೆಯ ಆರೋಗ್ಯವನ್ನು ಕಾಪಾಡಲು ನೆರವಾಗಬಹುದು.”
ಸ್ನಾಯುವಿನ ವಿಷಯ ಏಕಷ್ಟು ಮುಖ್ಯ
ಒಟ್ಟೂ ದೇಹದ ತೂಕದ 40% ಮೂಳೆಗಳ ಸ್ನಾಯುಗಳಾಗಿದ್ದು, ಇವು ಎಲ್ಲಾ ದೇಹದ ಪ್ರೋಟೀನ್ಗಳ ಪೈಕಿ 50%ರಷ್ಟನ್ನು ಹೊಂದಿರುತ್ತವೆ. ಸ್ನಾಯುಗಳು, ದೇಹದ ಕಾರ್ಯಾಚರಣೆಗೆ ಮುಖ್ಯವಾದ ಜೀವಕೋಶಗಳಾಗಿದ್ದು, ನಾವು ಯಾವ ರೀತಿ ವೃದ್ಧಾಪ್ಯ ಹೊಂದುತ್ತೇವೆ, ಚಟುವಟಿಕೆಯಿಂದಿರುತ್ತೇವೆ ಮತ್ತು ಸ್ವತಂತ್ರವಾಗಿರುತ್ತೇವೆ ಎಂಬುದನ್ನು ತಿಳಿಸುತ್ತದೆ. ವಸ್ತುಗಳನ್ನು ಎತ್ತಿಕೊಳ್ಳುವುದು, ಜಾರ್ ನ ಮುಚ್ಚಳ ತೆರೆಯುವುದು, ಅಥವಾ ಕುರ್ಚಿಯಿಂದ ಮೇಲಕ್ಕೇಳುವುದು ಮುಂತಾದ ಪ್ರತಿನಿತ್ಯದ ಕೆಲಸಗಳಿಗೆ ಮುಖ್ಯವಾಗಿರುವುದರ ಜೊತೆಗೆ ಆರೋಗ್ಯಕರ ಸ್ನಾಯುಗಳು ಅಂಗಾಂಗಗಳ ಕಾರ್ಯಾಚರಣೆ, ತ್ವಚೆಯ ಆರೋಗ್ಯ, ನಿರೋಧಕಶಕ್ತಿ, ಮತ್ತು ಜೀರ್ಣಕ್ರಿಯೆಗೂ(ಮೆಟಬಾಲಿಸಮ್) ಕೂಡ ಬಹಳ ಮುಖ್ಯ. ಆದ್ದರಿಂದ, ವಯಸ್ಸಾಗುತ್ತಿದ್ದಂತೆ, ಸರಿಯಾದ ಪೋಷಣೆ ಮತ್ತು ವ್ಯಾಯಾಮದೊಂದಿಗೆ ಸ್ನಾಯುಮಾಸ್ ಕಾಪಾಡಿಕೊಳ್ಳುವುದು ಆನಂದಮಯವಾದ ಹಾಗೂ ಆರೋಗ್ಯಕರ ಜೀವನವನ್ನು ಸುದೀರ್ಘಗೊಳಿಸುವುದಕ್ಕೆ ಮುಖ್ಯವಾದುದಾಗಿದೆ.
”ವಯಸ್ಸಾಗುವುದು ಅನಿವಾರ್ಯ, ಆದರೆ, ಸ್ನಾಯು ನಷ್ಟ ಮತ್ತು ದೌರ್ಬಲ್ಯಕ್ಕೆ ವಯಸ್ಸಾಗುವ ಅಗತ್ಯವಿಲ್ಲ.”ಎಂದು ಹೇಳಿದರು, ಭಾರತದಲ್ಲಿ ಅಬಾಟ್ ನ್ಯೂಟ್ರಿಶನ್ನ ಜನರಲ್ ಮ್ಯಾನೇಜರ್ ಸ್ವಾತಿ ದಲಾಲ್. “ಒವಯಸ್ಸಾಗುವಿಕೆಯಲ್ಲಿ ಸ್ನಾಯುವಿನ ನಷ್ಟವು ಬಹಳ ಅಪರೂಪಕ್ಕೆ ಚರ್ಚಿಸಲಾಗುವ ವಿಷಯವಾಗಿದ್ದು, ನಮಗೆ ವಯಸ್ಸಾಗುತ್ತಿದ್ದಂತೆ ನಮ್ಮ ಸ್ನಾಯುಗಳು ನಮ್ಮ ಆರೋಗ್ಯದ ಮೇಲೆ ಬೀರುವ ಪ್ರಭಾವವನ್ನು ಕೆಲವೇ ಕೆಲವು ವಯಸ್ಕರು ಮಾತ್ರ ಮನಗಂಡಿದ್ದಾರೆ. ವಿಜ್ಞಾನ-ಆಧಾರಿತ ಪೋಷಣೆಯ ಸಂಶೋಧನೆಯಲ್ಲಿ ಅಬಾಟ್ ಅಗ್ರಸ್ಥಾನದಲ್ಲಿದ್ದು, ಈಗ ಎಚ್ಎಮ್ಬಿ ಇರುವ ಹೊಸ ಎನ್ಶೂರ್ ಪರಿಚಯಿಸುವ ಮೂಲಕ ಭಾರತೀಯ ವಯಸ್ಕರು ಚುರುಕಾಗಿರುವುದಕ್ಕೆ ನಾವು ನೆರವಾಗುತ್ತೇವೆ ಎಂದು ಆಶಿಸುತ್ತೇವೆ.”
ವಯೋ-ಸಂಬಂಧಿತ ಸ್ನಾಯು ನಷ್ಟದ ಕುರಿತು ಜಾಗೃತಿ ಮೂಡಿಸಲು ಮತ್ತು ಆರಂಭದಲ್ಲೇ ತಮ್ಮ ಸ್ನಾಯುಗಳನ್ನು ಬಲಪಡಿಸಿಕೊಳ್ಳುವಂತೆ ಜನರಿಗೆ ಪ್ರೇರಣೆ ಒದಗಿಸಲು, ಅಬಾಟ್, ಮಾಜಿ ಭಾರತೀಯ ಕ್ರಿಕೆಟ್ ಆಟಗಾರ ಹಾಗೂ ಭಾರತೀಯ ರಾಷ್ಟ್ರ ತಂಡದ ಕಪ್ತಾನ ರಾಹುಲ್ ದ್ರಾವಿಡ್ ಅವರೊಂದಿಗೆ #MusclesMatter ಪ್ರಚಾರಕ್ಕಾಗಿ ಸಹಭಾಗಿತ್ವ ಏರ್ಪಡಿಸಿಕೊಂಡಿದೆ. ಸ್ನಾಯುವಿನ ವಯಸ್ಸಿನ ಪರೀಕ್ಷೆ ಮತ್ತು ಮಾಹಿತಿಯನ್ನು ಒಳಗೊಂಡಿರುವ ಪ್ರಚಾರವು ಡಿಜಿಟಲ್ ಮಾಧ್ಯಮ ವೇದಿಕೆಗಳಾದ್ಯಂತ ಪ್ರಸಾರಗೊಂಡು ಸಮುದಾಯ ತೊಡಗಿಕೊಳ್ಳುವಿಕೆಯತ್ತ ಗುರಿಯಿರಿಸಿದೆ.
”ಆರೋಗ್ಯವಾಗಿರುವುದು ಮತ್ತು ಸ್ವಸ್ಥವಾಗಿರುವುದು ನನ್ನ ಜೀವನದ ಅತಿಮುಖ್ಯ ಅಂಶವಾಗಿದೆ ಮತ್ತು ನಾನು ಸದಾ ಸ್ವಾಸ್ಥ್ಯ-ಮೊದಲು ಜೀವನಶೈಲಿಯನ್ನು ಶಿಫಾರಸು ಮಾಡುತ್ತಾ ಬಂದಿದ್ದೇನೆ.”ಎಂದು ಹೇಳಿದರು, ಸುಪ್ರಸಿದ್ಧ ಭಾರತೀಯ ಕ್ರಿಕೆಟ್ ಪಟು ರಾಹುಲ್ ದ್ರಾವಿಡ್. “ವಯಸ್ಸಾಗುತ್ತಿರುವಾಗ ತಮ್ಮ ದೇಹದಲ್ಲಿ ಏರ್ಪಡುವ ಬದಲಾವಣೆಗಳನ್ನು ಅನೇಕರು ಅರ್ಥಮಾಡಿಕೊಳ್ಳುವುದಿಲ್ಲ ಅಥವಾ ಪೋಷಣೆ ಮತ್ತು ವ್ಯಾಯಾಮದ ವಿಷಯ ಬಂದಾಗ ತಮ್ಮ ದೇಹಕ್ಕೆ ಏನು ಅಗತ್ಯ ಎಂಬುದನ್ನೂ ತಿಳಿದುಕೊಂಡಿರುವುದಿಲ್ಲ. ಆರೋಗ್ಯ-ಮೊದಲು ವ್ಯಕ್ತಿಯಾಗಿ,ಸ್ನಾಯು ಹಾಗೂ ಮೂಳೆ ಎರಡಕ್ಕೂ ಪರಿಪೂರ್ಣವಾದ, ಸಮತುಲಿತ ಪೋಷಣೆಯ ಲಾಭಗಳನ್ನು ಪ್ರದರ್ಶಿಸುವುದಕ್ಕಾಗಿ, ಹೊಸ ಎನ್ಶೂರ್ #MusclesMatter ಪ್ರಚಾರದ ಭಾಗವಾಗಿರುವುದಕ್ಕೆ ನನಗೆ ಬಹಳ ಸಂತೋಷವಾಗುತ್ತಿದೆ.”
ಚಾಕೊಲೇಟ್ ಮತ್ತು ವನಿಲ್ಲಾ ಸ್ವಾದಗಳಲ್ಲಿ ಲಭ್ಯವಿರುವ ಎನ್ಶೂರ್ ಎಚ್ಎಮ್ಬಿಯನ್ನು ಭಾರತದ ಪ್ರಮುಖ ಫಾರ್ಮಸಿಗಳಲ್ಲಿ ಕಾಣಬಹುದು. ಹೆಚ್ಚಿನ ಮಾಹಿತಿಗಾಗಿ https://ensureindia.in//ಗೆ ಭೇಟಿ ನೀಡಿ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.