ಬೆಂಗಳೂರು (www.vknews.in): ದೇಶದ ಪ್ರಮುಖ ಸಾಮಾನ್ಯ ವಿಮಾದಾರರಲ್ಲಿ ಒಂದಾದ HDFC ERGO ಜನರಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್, Click2Protect Optima Secure ಅನ್ನು ನೀಡಲು ಭಾರತದ ಪ್ರಮುಖ ಜೀವ ವಿಮೆದಾರರಲ್ಲಿ ಒಂದಾದ HDFC Life ನೊಂದಿಗೆ ಕೈಜೋಡಿಸಿದೆ. ಇದು ಗ್ರಾಹಕರಿಗೆ ಸಮಗ್ರ ರಕ್ಷಣೆಯನ್ನು ಒದಗಿಸುವ ಸಮಗ್ರ ವಿಮಾ ಯೋಜನೆಯಾಗಿದೆ.
ಜೀವ ಮತ್ತು ಆರೋಗ್ಯ ವಿಮಾ ಪರಿಹಾರಗಳ ಪ್ರಯೋಜನಗಳನ್ನು Click2Protect Optima Secure ಒಂದೇ ಸೂರಿನಡಿ ಸಂಯೋಜಿಸುತ್ತದೆ, ಆ ಮೂಲಕ ಗ್ರಾಹಕರಿಗೆ ಜಟಿಲವಲ್ಲದ ಹಣಕಾಸು ಯೋಜನೆಯನ್ನು ನೀಡುತ್ತದೆ. ಈ ಯೋಜನೆಯಲ್ಲಿ, ಟರ್ಮ್ ಲೈಫ್ ಇನ್ಶುರೆನ್ಸ್ ಕಾಂಪೊನೆಂಟ್ ಗ್ರಾಹಕರನ್ನು ಜೀವನದ ಅನಿಶ್ಚಿತತೆಗಳ ವಿರುದ್ಧ 50,000 ರೂ.ಗಳ ಕನಿಷ್ಠ ವಿಮಾ ಮೊತ್ತದೊಂದಿಗೆ ರಕ್ಷಣೆ ನೀಡುತ್ತದೆ. ಆರೋಗ್ಯ ವಿಮಾ ಘಟಕದ ಅಡಿಯಲ್ಲಿ, ಗ್ರಾಹಕರು ರೂ.5 ಲಕ್ಷಗಳಿಂದ ರೂ.2 ಕೋಟಿವರೆಗಿನ ಮೊತ್ತದ ವಿಮೆಯನ್ನು ಪಡೆಯಬಹುದು. ಈ ಯೋಜನೆಯು ‘ವೈಯಕ್ತಿಕ’ ಮತ್ತು ‘ಫ್ಯಾಮಿಲಿ ಫ್ಲೋಟರ್’ ಆಯ್ಕೆಗಳೊಂದಿಗೆ ಬರುತ್ತದೆ. ಆರೋಗ್ಯ ವಿಮೆಯನ್ನು HDFC ERGO ಮತ್ತು ಜೀವ ವಿಮೆಯನ್ನು HDFC Life ಗಳು ನೀಡುತ್ತವೆ.
ಯೋಜನೆಯ ಇತರ ಪ್ರಮುಖ ಪ್ರಯೋಜನಗಳು:
ವರ್ಧನೆಯ ಆಯ್ಕೆಗಳು:
ಬಿಡುಗಡೆಯ ಕುರಿತು ಮಾತನಾಡಿದ HDFC Life ನ MD ಮತ್ತು CEOವಿಭಾ ಪಾದಲ್ಕರ್ ಮಾತನಾಡಿ, “ಆರ್ಥಿಕ ರಕ್ಷಣೆಯು ಜವಾಬ್ದಾರಿಗಳನ್ನು ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯ ಪ್ರಾಥಮಿಕ ಅಗತ್ಯವಾಗಿದೆ. ಇತ್ತೀಚಿನ ಸಾಂಕ್ರಾಮಿಕ ರೋಗವು ಜೀವ ಮತ್ತು ಆರೋಗ್ಯ ವಿಮಾ ಉತ್ಪನ್ನಗಳ ಗಂಭೀರತೆಯನ್ನು ಒತ್ತಿಹೇಳಿದೆ. Click2Protect Optima Secure ಮೂಲಕ ನಾವು ನಮ್ಮ ಪ್ರಮುಖ ಉತ್ಪನ್ನಗಳನ್ನು ನೀಡುತ್ತಿದ್ದೇವೆ, ಇದು ಗ್ರಾಹಕರು ತಮ್ಮ ವಿಮಾ ಅಗತ್ಯತೆಗಳಿಗೆ – ಜೀವನ ಮತ್ತು ಆರೋಗ್ಯ ಎರಡಕ್ಕೂ ಒಂದು-ನಿಲುಗಡೆ-ಪರಿಹಾರವನ್ನು ಪಡೆಯಲು ಅನುವು ಮಾಡಿಕೊಡುತ್ತದೆ” ಎಂದರು.
ಹೊಸ ಉತ್ಪನ್ನದ ಬಿಡುಗಡೆ ಕುರಿತು ಮಾತನಾಡಿದ HDFC ERGO ಜನರಲ್ ಇನ್ಶೂರೆನ್ಸ್ ಕಂಪನಿಯ MD ಮತ್ತು CEO ರಿತೇಶ್ ಕುಮಾರ್, “ಸಂಯೋಜಿತ ಉತ್ಪನ್ನಗಳು ಶ್ರೇಷ್ಠವದ ಗ್ರಾಹಕ ಸ್ನೇಹಿ ಪರಿಹಾರಗಳಾಗಿವೆ, ಅಲ್ಲಿ ಗ್ರಾಹಕರು ಒಂದೇ ಯೋಜನೆಯಡಿಯಲ್ಲಿ ಎರಡು ಉತ್ಪನ್ನಗಳ ಪ್ರಯೋಜನಗಳನ್ನು ಯಾವುದೇ ತೊಂದರೆಗಳಿಲ್ಲದೆ ಆನಂದಿಸಬಹುದು. Click2Protect Optima Secure ನಮ್ಮ ಗ್ರಾಹಕರಿಗೆ ಅವರ ಎರಡೂ ನಿರ್ಣಾಯಕ ರಕ್ಷಣೆಯ ಅಗತ್ಯಗಳ ಪರಿಹಾರಕ್ಕೆ ಒಂದೇ ಪರಿಹಾರವನ್ನು ಆಯ್ಕೆ ಮಾಡಲು ಸಬಲೀಕರಿಸುತ್ತದೆ. ಈ ಯೋಜನೆಯ ಪ್ರಾರಂಭದೊಂದಿಗೆ, ನಾವು ಆರೋಗ್ಯ ಮತ್ತು ಜೀವ ವಿಮೆಯನ್ನು ಖರೀದಿಸುವ ಪ್ರಕ್ರಿಯೆಯನ್ನು ಸರಳಗೊಳಿಸಿದ್ದೇವೆ ಮತ್ತು ಸುವ್ಯವಸ್ಥಿತಗೊಳಿಸಿದ್ದೇವೆ ಮತ್ತು ನಮ್ಮ ಗ್ರಾಹಕರಿಗೆ ಎರಡು ವಿಭಿನ್ನ ಉತ್ಪನ್ನಗಳನ್ನು ಖರೀದಿಸುವ ಮತ್ತು ನಿರ್ವಹಿಸುವ ತೊಂದರೆಯನ್ನು ನಿವಾರಿಸಿದ್ದೇವೆ. ಇದು ನಮ್ಮ ಗ್ರಾಹಕರ ಮೇಲಿನ ಆರ್ಥಿಕ ಯೋಜನೆಯ ಹೊರೆಯನ್ನು ಕಡಿಮೆ ಮಾಡುತ್ತದೆ ಮತ್ತು ಅವರಿಗೆ ಅಗತ್ಯವಿರುವ ಎಲ್ಲವನ್ನೂ ಒಂದೇ ಕೊಡುಗೆಯ ಅಡಿಯಲ್ಲಿ ತರುತ್ತದೆ ”
ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು www.hdfclife.com ಗೆ ಭೇಟಿ ನೀಡಿ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.