(www.vknews.in) ಬಿಲ್ಡಪ್ ಕಾಸರಗೋಡು ವತಿಯಿಂದ ಅನ್ನದಾತರ ಗೌರವಾರ್ಪಣಾ ಇಂದು ನಡೆಯಲಿದೆ. ಅವರವರಿಗೆ ಬೇಕಾದ ಆಹಾರವನ್ನು ತಾವಾಗಿಯೇ ಉತ್ಪಾದಿಸುವಲ್ಲಿ ಪ್ರತಿಯೊಂದು ಕುಟುಂಬವು ಶ್ರಮಿಸೋದು ಅತ್ಯಗತ್ಯ ಹಾಗೂ ಪ್ರತಿಯೊಂದು ಮನೆಯೂ ಉತ್ಪಾದನಾ ವಲಯದಲ್ಲಿ ಕೃಷಿ ಘಟಕಗಳಾಗಿ ಮಾರ್ಪಾಡುಗೊಳ್ಳುವ ಅವಶ್ಯಕತೆಯನ್ನು ಬಿಲ್ಡಪ್ ಕಾಸರಗೋಡು ಸೊಸೈಟಿ ಎಂಬ ಸ್ವಯಂಸೇವಾ ಸಂಸ್ಥೆ ಮನಗಂಡಿರುತ್ತದೆ.
ಕರೋನಾ ಸಮಯದಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ಆಹಾರ ಧಾನ್ಯಗಳು, ಹಣ್ಣುಹಂಪಲು ಮತ್ತು ತರಕಾರಿಗಳನ್ನು ಉತ್ಪಾದಿಸಲು ಪ್ರಯತ್ನಿಸಿದ್ದರು. ಕಾಸರಗೋಡು ಜಿಲ್ಲೆ ಎಲ್ಲಾ ಕ್ಷೇತ್ರಗಳಲ್ಲೂ ಸ್ವಾವಲಂಬನೆ ಸಾಧಿಸಬೇಕೆಂಬ ಉದ್ದೇಶದೊಂದಿಗೆ ಉತ್ಪಾದನಾ ವಲಯದಲ್ಲಿ ಹಲವು ಯೋಜನೆಗಳನ್ನು ರೂಪಿಸಿದ್ದು ಪ್ರವಾಸಿಗಳ ಪಾಲುದಾರಿಕೆಯೊಂದಿಗೆ ಹೂಡಿಕೆಗಳನ್ನು ನಿರೀಕ್ಸಿಸುತ್ತಿದೆ.
ಕೃಷಿ ಕ್ಷೇತ್ರದಲ್ಲಿ ಜಿಲ್ಲೆಯ ಪ್ರತಿಯೊಬ್ಬರನ್ನು ಉತ್ತೇಜಿಸುವ ಸಲುವಾಗಿ ಬಿಲ್ಡಪ್ ಕಾಸರಗೋಡು, ರೋಹಿಣಿ ಅಗ್ರೋಸೈನ್ಸ್ನೊಂದಿಗೆ ಸೇರಿಕೊಂಡು ಜಿಲ್ಲೆಯ ಸುಮಾರು 25 ರೈತರನ್ನು ವಿವಿಧ ಮಾದರಿ ಕೃಷಿಗಳಲ್ಲಿ ನೀಡಿದ ಕೊಡುಗೆಗಳಿಗಾಗಿ ಸನ್ಮಾನಿಸಲು ನಿರ್ಧರಿಸಲಾಗಿದೆ. ಇದೇ ಭಾನುವಾರ, ಸೆಪ್ಟೆಂಬರ್ 25ರ ಬೆಳಿಗ್ಗೆ 10 ಗಂಟೆಗೆ ಹೊಸಂಗಡಿ ಮಜ್ಜಿಬೈಲು ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಸಮಾರಂಭ ನಡೆಯಲಿದೆ.
ಮಂಜೇಶ್ವರ ಕ್ಷೇತ್ರದ ಶಾಸಕರಾದ ಎ ಕೆ ಎಂ ಅಶ್ರಫ್ ಸಮಾರಂಭವನ್ನು ಉದ್ಘಾಟಿಸಲಿದ್ದು, ಶ್ರೀ ಕೂಕುಲ್ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಲಿದ್ದಾರೆ. ಸೊಸೈಟಿ ಪ್ರಧಾನ ಕಾರ್ಯದರ್ಶಿ ಡಾ. ಶೇಖ್ ಬಾವಾ, ಮುಖ್ಯ ಪೋಷಕ ಅಬ್ದುಲ್ ಖಾದರ್ ಸಲಿಂ ಸನ, ರೋಹಿಣಿ ಆಗ್ರೋ ಸೈನ್ಸ್ ಅಧ್ಯಕ್ಷ ಡಾ. ಅನಿಲ್ ಕುಮಾರ್, ಪ್ರಚಾರಕಿ ಶ್ರೀಮತಿ ಶ್ರೀಲತಾ, ಕೃಷಿ ಇಲಾಖೆ ಉಪನಿರ್ದೇಶಕ ಆನಂದ್, ಕೃಷಿ ಇಲಾಖೆ ಉಪಾಧ್ಯಕ್ಷ ದಯಾಕರ ಮಾಡ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಶ್ರೀಮತಿ ಜೀನ ಲೆವಿನಾ ಮೊಂತೋರೊ, ಶ್ರೀಮತಿ ಸುಂದರಿ ಆರ್ ಶೆಟ್ಟಿ, ಹಿಂದೂಸ್ತಾನ್ ಬಿಲ್ಡರ್ ಅಧ್ಯಕ್ಸ ಡಾ. ಮುಹಮ್ಮದ್ ಇಬ್ರಾಹಿಂ ಪಾವೂರ್, ಮಜ್ಜಿಬೈಲು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಸ ಶ್ರೀ ಎಂ.ಸಂಜೀವ ಶೆಟ್ಟಿ, ಬಿಲ್ಡಪ್ ಕಾಸರಗೋಡು ಉಪಾಧ್ಯಕ್ಷ ಶ್ರೀ ರವೀಂದ್ರನ್ ಕಣ್ಣಂಗಾಯಿ, ಕೋಶಾಧಿಕಾರಿ ಡಾ.ರಶ್ಮಿ ಪ್ರಕಾಶ್, ಉಪಾಧ್ಯಕ್ಷ ಶ್ರೀ ಅನೂಪ್ ಕಳನಾಡ್, ಕಾರ್ಯಕಾರಿ ಸದಸ್ಯರಾದ ಶ್ರೀ ಸಾದಿಕ್ ಮಂಜೇಶ್ವರ ಹಾಗು ಶ್ರೀ ರಫೀಕ್ ಮಾಸ್ಟರ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ವ್ಯವಸ್ಥಿತ ನಿರ್ವಹಣೆಗಾಗಿ ಪ್ರವಾಸಿ ಘಟಕ ಉಪಾಧ್ಯಕ್ಸ ಡಾ. ಅಬ್ದುಲ್ ರಹಿಮಾನ್ ಬಾವ, ದುಬೈ ಸಂಚಾಲಕ ಶ್ರೀ ಅಕ್ರಮ್ ಲಟ್ವಾನ್, ಸೌದಿ ಸಂಚಾಲಕ ಶ್ರೀ ಕಬೀರ್ ಮಂಜೇಶ್ವರ ಹಾಗು ಶ್ರೀ ಅಬ್ದುಲ್ ಲತೀಫ್ ಸುಂಕದಕಟ್ಟೆ ಸರ್ವ ಸಹಕಾರ ನೀಡಿರುತ್ತಾರೆ.
ಸ್ವೀಕರಿಸಿದ ಅರ್ಜಿಗಳನ್ನು ತೀರ್ಪುಗಾರರ ಸಮಿತಿ ಪರಿಶೋಧಿಸಿ ಮೂರು ವಿಭಾಗಗಳಾಗಿ ವಿಂಗಡಿಸಿದ್ದು, ಮೊದಲನೆಯದರಲ್ಲಿ ಮೂವರು, ಎರಡನೇ ವಿಭಾಗದಲ್ಲಿ ಆರು ಮಂದಿ ಹಾಗು ಮೂರನೇ ವಿಭಾಗದಲ್ಲಿ ಹದಿನೈದು ಮಂದಿ ಪ್ರಶಸ್ತಿಗಳನ್ನು ಸ್ವೀಕರಿಸಲಿದ್ದಾರೆ.
ಶ್ರೀ ಶಶಿಧರ ಆರ್.ಕೆ ಕುಂಜತೂರ್ (ಕರ್ಷಕೋತಮ), ಶ್ರೀಮತಿ ರಮ್ಲತ್ ಎನ್. ಬಿ (ಕರ್ಷಕ ತಿಲಕ), ಶ್ರೀ ಉದಯ ಎಂ ಬಾಯಾರ್ (ಯುವ ರೈತ), ಶ್ರೀ ಸಾಜನ್ ಮ್ಯಾಥ್ಯೂ ಕಲ್ಲರ್(ಕೇರ ಕೇಸರಿ), ಶ್ರೀ ದಿನೇಶ್ ಅಂಜರೆ (ಹರಿತ ಮಿತ್ರ), ಶ್ರೀಮತಿ ಉಷಾ ನಾರಾಯಣನ್ ನಾಯರ್ ಪೆರಿಯ (ಉದ್ಯಾನ ಶ್ರೇಷ್ಠ), ಶ್ರೀ ಸತ್ಯನಾರಾಯಣ ಬಾಳೇರಿ (ಕರ್ಷಕ ಜ್ಯೋತಿ), ಶ್ರೀ ರವೀಂದ್ರನ್ ಕೊಡಕ್ಕಾಡ್ (ಶ್ರಮಶಕ್ತಿ), ಶ್ರೀ ಸದಾಶಿವ ಬಿ ಚೇರ್ಗೋಳಿ (ಶ್ರಮಶಕ್ತಿ) ಮತ್ತು ಹದಿನೈದು ಮಂದಿ ಗೆ ವಿಶೇಷ ತೀರ್ಪುಗಾರರ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು.
ಕೃಷಿ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಮತ್ತು ಆಧುನಿಕ ಕೃಷಿ ವಿಧಾನಗಳು ಎಂಬ ವಿಷಯದಲ್ಲಿ ವಿಚಾರ ಸಂಕಿರಣ ನಡೆಯಲಿದೆ. ಎಲ್ಲರ ಸಹಕಾರ ಮತ್ತು ಸಹಭಾಗಿತ್ವವನ್ನು ಕೋರಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.