ಚಾವಿ – ಸಹಯೋಗದ ಕ್ಯಾನ್ಸರ್ ಸಂಶೋಧನೆಯನ್ನು ತ್ವರೆಗೊಳಿಸಲು ಸ್ಥಾಪಿಸಲಾಗಿರುವ ಭಾರತದ ಪ್ರಪ್ರಥಮ ಆಂಕಾಲಜಿ ಇಮೇಜ್ ಬ್ಯಾಂಕ್
ಕೋಲ್ಕತ್ತಾದ ಟಾಟಾ ಮೆಡಿಕಲ್ ಸೆಂಟರ್ ಮತ್ತು ಖರಗ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಹಭಾಗಿತ್ವದಲ್ಲಿ ಈ ಇಮೇಜ್ ಬ್ಯಾಂಕನ್ನು ಪರಿಕಲ್ಪಿಸಲಾಗಿದೆ
ಬೆಂಗಳೂರು, (www.vknews.in): ಕೋಲ್ಕತ್ತಾದ ಟಾಟಾ ಮೆಡಿಕಲ್ ಸೆಂಟರ್ ಮತ್ತು ಖರಗ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ), ಭಾರತದ ಪ್ರಪ್ರಥಮ, ಸಂಪೂರ್ಣವಾಗಿ ವಿವರಿಸಲಾದ, ಸಂಬಂಧಪಡುವಂತಹ, ಗುರುತುರಹಿತಗೊಳಿಸಲಾದ (ಡೀ-ಐಡೆಂಟಿಫೈಡ್) ಇಮೇಜ್ ಬ್ಯಾಂಕ್ ಚಾವಿ(CHAVI)ಯನ್ನು ಪ್ರಾರಂಭಿಸಿವೆ. ಭಾರತದ ಎರಡು ಪ್ರೀಮಿಯರ್ ಸಂಸ್ಥೆಗಳ ತನ್ನ ವಿಧದಲ್ಲೇ ಮೊಟ್ಟಮೊದಲನೆಯದಾದ ಸಂಶೋಧನಾ ಸಹಭಾಗಿತ್ವವನ್ನು ಇಂದು ಕೋಲ್ಕತ್ತಾದಲ್ಲಿ ಉದ್ಘಾಟಿಸಲಾಯಿತು. ಚಾವಿ (CHAVI – Comprehensive Archive of Imaging)ದ ಪ್ರಾರಂಭವು ಭಾರತದಲ್ಲಿ ಕ್ಯಾನ್ಸರ್ ಸಂಶೋಧನೆಗೆ ಶಿಖರವರ್ಧನೆಯಾಗಲಿದ್ದು, ಜಗತ್ತಿನಾದ್ಯಂತದ ವಿಜ್ಞಾನಿಗಳು ಸಂಶೋಧನಾ ಉದ್ದೇಶಗಳಿಗಾಗಿ ಬಳಸಿಕೊಳ್ಳುವುದಕ್ಕಾಗಿ ಅವರಿಗೆ ಗುರುತುರಹಿತಗೊಳಿಸಲಾದ ರೋಗಿ ಇಮೇಜ್ಗಳಿಗೆ ಮತ್ತು ಅವಶ್ಯಕ ವೈದ್ಯಕೀಯ ಮಾಹಿತಿಗೆ ಉಚಿತ ಪ್ರವೇಶಾವಕಾಶ ಒದಗಿಸಲಿದೆ.
ಉದ್ಘಾಟನಾ ಸಮಾರಂಭದಲ್ಲಿ ಸಮೃದ್ಧವಾದ ಚರ್ಚಾಗೋಷ್ಟಿಯನ್ನು ಏರ್ಪಡಿಸಲಾಗಿದ್ದು, ಕೋಲ್ಕತ್ತಾದ ಟಾಟಾ ಮೆಡಿಕಲ್ ಸೆಂಟರ್ನನಿರ್ದೇಶಕ ಡಾ. ಅರುಣ್ ಪಿ., ಟಾಟಾ ಮೆಡಿಕಲ್ ಸೆಂಟರ್ ನ ಮಾಜಿ ನಿರ್ದೇಶಕ ಡಾ. ಮಾಮ್ಮೇನ್ ಚಂಡಿ, ಐಐಟಿ ಖರಗ್ಪುರದ ಎಐ ಮತ್ತು ಕಂಪ್ಯೂಟರ್ ವಿಜ್ಞಾನ ವಿಭಾಗದ ಮಾಜಿ ನಿರ್ದೇಶಕ ಹಾಗೂ ಪ್ರೊಫೆಸರ್ ಪ್ರೊ. ಪಾರ್ಥ ಪ್ರತಿಮ್ ಚಕ್ರಬರ್ತಿ., ಐಐಟಿ ಖರಗ್ಪುರದ ಡೀನ್ ಔಟ್ರೀಚ್ ಪ್ರೊ. ಜಯಂತ ಮುಖರ್ಜೀ ಒಳಗೊಂಡ ತಜ್ಞರ ಅಧ್ಯಕ್ಷತೆ ವಹಿಸಿ ಹಾಗೂ ಮುಂಬೈನ ಎಸಿಟಿಆರ್ ಇಸಿ, ಮುಂಬೈನ ಟಾಟಾಮೆಮೊರಿಯಲ್ ಹಾಸ್ಪಿಟಲ್, ಲಕ್ನೌದ ಸಂಜಯ್ ಗಾಂಧಿ ಪೋಸ್ಟ್ ಗ್ರಾಜುಯೇಟ್ ಇನ್ಸ್ಟಿಟ್ಯೂಟ್, ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನ ವಿಭಾಗೀಯ ಮುಖ್ಯಸ್ಥರುಗಳು ಮತ್ತು ಕ್ಯಾನ್ಸರ್ ಹಾಗೂ ವೈದ್ಯಕೀಯದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದ ಇತರ ನಿಪುಣರು ಭಾಗವಹಿಸಿದ್ದರು. ಟಾಟಾ ಮೆಡಿಕಲ್ ಸೆಂಟರ್ ನ ಡಾ. ಸಂಜೊಯ್ ಚಟರ್ಜೀ, ಇಂದ್ರನೀಲ್ ಮಲ್ಲಿಕ್, ಮತ್ತು ಡಾ. ಸಂತಮ್ ಚಕ್ರಬರ್ತಿಯವರುಗಳೂ ಕೂಡ ಪ್ರಾರಂಭೋತ್ಸವದಲ್ಲಿ ಹಾಜರಿದ್ದರು.
ಚಾವಿ (CHAVI)s ವಿಶೇಷವಾಗಿ ಭಾರತದ ಆಂಕಲಾಜಿಕಲ್ ಇಮೇಜಿಂಗ್ಗಾಗಿಯೇ ನಿಬದ್ಧಗೊಳಿಸಲಾಗಿರುವ ಪ್ರಪ್ರಥಮ ಇಮೇಜಿಂಗ್ ಬಯೋಬ್ಯಾಂಕ್ ಆಗಿದೆ. ಈ ಯೋಜನೆಯನ್ನು, ಕೋಲ್ಕತ್ತಾದ ಟಾಟಾ ಮೆಡಿಕಲ್ ಸೆಂಟರ್ ಮತ್ತು ಖರಗ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ) ನಡುವಣ ಸಂಶೋಧನಾ ಸಹಯೋಗವಾಗಿ ವಿನ್ಯಾಸಗೊಳಿಸಲಾಗಿದ್ದು ಇದು ಭಾರತದ ಡಿಜಿಟಲ್ ಗ್ರಂಥಾಲಯ(National Digital Library of India (NDLI))ದ ಭಾಗವಾಗಿರುತ್ತದೆ. ದೇಶಾದ್ಯಂತ ಲಭ್ಯವಿರುವಂತಹ ಇಮೇಜ್ ಬಯೋಬ್ಯಾಂಕ್ ಅಭಿವೃದ್ಧಿಪಡಿಸಿ ಪ್ರಮುಖ ಭಾರತೀಯ ಕ್ಯಾನ್ಸರ್ ಸಂಸ್ಥೆಗಳಲ್ಲಿ ಭವಿಷ್ಯತ್ತಿನ ಸಹಯೋಗಾತ್ಮಕ ಸಂಶೋಧನೆಗೆ ಅಡಿಪಾಯ ಹಾಕುವುದು ಇದರ ಉದ್ದೇಶವಾಗಿದೆ. ಈ ಯೋಜನೆಯು, ಸಂಶೋಧಕರು, ಶಿಕ್ಷಣತಜ್ಞರು, ಮತ್ತು ಉದ್ಯಮ ತಜ್ಞರು ಚಾವಿದಲ್ಲಿ ಲಭ್ಯವಿರುವ ಇಮೇಜಿಂಗ್ ಮಾಹಿತಿಯ ಸಂಪತ್ತನ್ನು ಬಳಸಿಕೊಳ್ಳಲು ಅವಕಾಶ ಒದಗಿಸುತ್ತದೆ.
ಕೋಲ್ಕತ್ತಾದ ಟಾಟಾ ಮೆಡಿಕಲ್ ಸೆಂಟರ್ನ ಡಾ. ಅರುಣ್ ಪಿ., “ಡಿಜಿಟಲ್ ಇಮೇಜಿಂಗ್ನಿಂದ ಪಡೆದುಕೊಳ್ಳುವ ಮಾಹಿತಿಯು ರೋಗಿಶುಶ್ರೂಷೆಗೆ ಅತಿಮುಖ್ಯವಾಗಿದ್ದು ಇಂದಿನ ತಂತ್ರಜ್ಞಾನದೊಂದಿಗೆ ರೋಗಿ ಫಲಿತಾಂಶಗಳನ್ನು ಸುಧಾರಿಸಲು ಭವಿಷ್ಯತ್ತಿನ ಸಂಶೋಧನೆಗಾಗಿ ಅದು ಆಧಾರವಾಗಿಯೂ ಇರಲಿದೆ. ಅದು, ಪ್ರಸ್ತುತದ ಚಿಕಿತ್ಸಾ ಪ್ರೊಟೊಕಾಲ್ನ ಸಾಮಥ್ರ್ಯ ಮೌಲ್ಯಮಾಪನಕ್ಕೂ ಅವಕಾಶ ಮಾಡಿಕೊಡುತ್ತದೆ. ಐಐಟಿ ಖರಗ್ಪುರದ ಸಹೋದ್ಯೋಗಿಗಳ ಸಹಯೋಗದೊಂದಿಗೆ ಟಾಟಾ ಮೆಡಿಕಲ್ ಸೆಂಟರ್ ಅಭಿವೃದ್ಧಿಪಡಿಸಿರುವ ಚಾವಿ, ಉಚಿತವಾಗಿ ಲಭ್ಯವಿರುವ ಸವಿವರ ಡಿಜಿಟಲ್ ಆಂಕಲಾಜಿಕಲ್ ಇಮೇಜಿಂಗ್ ಬಳಸಿಕೊಂಡು ಎಐ-ರೇಡಿಯೋಮಿಕ್ ಸಂಶೋಧನೆಯನ್ನು ವರ್ಧಿಸಲು ನಮಗೆ ಒಂದು ವೇದಿಕೆ ಒದಗಿಸುತ್ತದೆ.”ಎಂದರು.
ಐಐಟಿ ಖರಗ್ಪುರದ ಮಾಜಿ ನಿರ್ದೇಶಕ ಹಾಗೂ ಐಐಟಿ ಖರಗ್ಪುರದ ಕಂಪ್ಯೂಟರ್ ವಿಜ್ಞಾನ ಇಲಾಖೆಯ ಪ್ರಾಚಾರ್ಯರಾದ ಪ್ರೊ. ಪಾರ್ಥ ಪ್ರತಿಮ್ ಚಕ್ರಬರ್ತಿ, “ರೋಗಿಫಲಿತಾಂಶಗಳಲ್ಲಿ ಸುಧಾರಣೆಗಳಿಗೆ ನೆರವಾಗುವ ಸಲುವಾಗಿ ಪೂರಕವಾದ ಮಾಹಿತಿಗೆ ಅವಕಾಶ ಒದಗಿಸುವ ಮೂಲಕ ಕ್ಯಾನ್ಸರ್ ಇಮೇಜ್ಗಳ ವಿಶಿಷ್ಟವಾದ ಸಮಗ್ರ ಡಿಜಿಟಲ್ ಆರ್ಕೈವ್ ಆಗಿ ಚಾವಿಯನ್ನು ನಾವು ಪರಿಕಲ್ಪಿಸಿದೆವು. ಟಾಟಾ ಮೆಡಿಕಲ್ ಸೆಂಟರ್ ಹಾಗೂ ಐಐಟಿ ಖರಗ್ಪುರದ ನಡುವಿನ ನಾವು ಸ್ಥಾಪಿಸಿರುವ ಈ ಸಹಯೋಗೀಯ ಕಾರ್ಯವು ಈಗ ಒಂದು ಮುಖ್ಯ ಹಂತ ತಲುಪಿದೆ-ಈ ರೆಪಾಸಿಟರಿಯನ್ನು ಕಾರ್ಯಸ್ಥಗೊಳಿಸಲಾಗಿದೆ. ಇದು ಈಗ ಜಗತ್ತಿನಾದ್ಯಂತ ಸಂಸ್ಥೆಗಳ ನಡುವೆ ಮಹತ್ತರವಾದ ಸಹಯೋಗಕ್ಕೆ ಅವಕಾಶ ಒದಗಿಸಲಿದೆ. ಭಾರತದ ಇಂತಹ ಪ್ರಪ್ರಥಮ ಉಚಿತ ಪ್ರವೇಶಾವಕಾಶವಿರು ಡಾಟಾಬ್ಯಾಂಕ್ ಆದ ಚಾವಿ ಈ ಪ್ರದೇಶದಿಂದ ಈ ಹಿಂದೆ ಲಭ್ಯವಿರದಿದ್ದ ಮಾಹಿತಿಯ ಬಳಕೆಗೆ ಅವಕಾಶ ಒದಗಿಸುವುದರ ಜೊತೆಗೆ, ರೇಡಿಯೋಮಿಕ್ ಸಂಶೋಧನೆಯಲ್ಲಿ ದೇಶೀಯ ವೈವಿಧ್ಯತೆಯನ್ನು ಸೇರಿಸಿ ರೋಗಿ ಶುಶ್ರೂಷೆಯನ್ನು ಸುಧಾರಿಸುವುದಕ್ಕಾಗಿ ಲಭ್ಯವಿರುವ OMICS ಮಾಹಿತಿಗೆ ಪೂರಕವಾಗಿರುತ್ತದೆ ಎಂದು ಆಶಿಸುತ್ತೇವೆ.”ಎಂದರು.
ಐಐಟಿ ಖರಗ್ಪುರದ ಡೀನ್ ಔಟ್ರೀಚ್ ಮತ್ತು ಐಐಟಿ ಖರಗ್ಪುರದ ಕಂಪ್ಯೂಟರ್ ವಿಜ್ಞಾನ ಇಲಾಖೆಯ ಪ್ರಾಚಾರ್ಯರಾದ ಪ್ರೊ. ಜಯಂತ ಮುಖರ್ಜೀ, “ಐಐಟಿ ಖರಗ್ಪುರ ಹಾಗೂ ಕೋಲ್ಕತ್ತಾದ ಟಾಟಾ ಮೆಡಿಕಲ್ ಸೆಂಟರ್ ನಡುವಣ ಒಂದು ಸಂಶೋಧನಾ ಸಹಯೋಗದಡಿ ಅಭಿವೃದ್ಧಿಪಡಿಸಲಾಗಿರುವ ರೇಡಿಯಾಲಾಜಿಕಲ್ ಇಮೇಜ್ ಡಾಟಾಬ್ಯಾಂಕ್ ಆದ ‘Comprehensive Digital Archive of Cancer Imaging’ (CHAVI), ಕಾರ್ಯಸ್ಥಗೊಂಡು ಮೆಡಿಕಲ್ ಇಮೇಜಿಂಗ್ ಹಾಗೂ ಆಂಕಾಲಜಿ ಕ್ಷೇತ್ರಗಳ ಸಂಶೋಧಕರಿಗೆ ಲಭ್ಯವಾಗುತ್ತಿರುವುದು ಬಹಳ ಸಂತೋಷದ ವಿಷಯ. ಎಐ ಮತ್ತು ಮಶೀನ್ ಲರ್ನಿಂಗ್(ಯಂತ್ರ ಕಲಿಕೆ)ನ ಈ ಯುಗದಲ್ಲಿ ಜ್ಞಾನದ ಅನುಸರಣೆಗೆ ಮಾಹಿತಿ(ಡಾಟಾ) ಬಹಳ ಮುಖ್ಯವಾಗಿದ್ದು ಚಾವಿ, ಈ ಮುಖ್ಯವಾದ ಅಂಶವನ್ನು ಸಂಶೋಧಕರಿಗೆ ಒದಗಿಸಿ ಅವರುಗಳ ನಡುವೆ ಸಹಯೋಗಾತ್ಮಕ ಸಂಶೋಧನೆಗೆ ಒಂದು ಉಜ್ವಲ ಪರಿಸರವ್ಯವಸ್ಥೆಯ ನಿರ್ಮಾಣಕ್ಕೆ ಅನುವು ಮಾಡಿಕೊಡಲಿದೆ.”ಎಂದು ಹೇಳಿದರು.
ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವಿಜ್ಞಾನ ಮತ್ತು ಇಂಜಿನಿಯರಿಂಗ್ ಸಂಶೋಧನಾ ಮಂಡಳಿ (SERB)ಯ ಕಾರ್ಯದರ್ಶಿ ಡಾ. ಸಂದೀಪ್ ವರ್ಮ, ‘‘ಭಾರತದ ಪ್ರಪ್ರಥಮ ಸಂಪೂರ್ಣ ಸವಿವರ ಕ್ಯಾನ್ಸರ್ ಇಮೇಜ್ ಬ್ಯಾಂಕ್ ಆದ ಚಾವಿಯನ್ನು ಟಾಟಾ ಮೆಡಿಕಲ್ ಸೆಂಟರ್ ಮತ್ತು ಐಐಟಿ ಖರಗ್ಪುರ ಅಭಿವೃದ್ಧಿಪಡಿಸಿದೆ ಎಂದು ತಿಳಿದು ನನಗೆ ಬಹಳ ಹರ್ಷವಾಗಿದೆ. ಇಂತಹ ಅಭಿವೃದ್ಧಿಯ ಬಗ್ಗೆ ತಿಳಿದುಕೊಂಡಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಡಾ. ಸಂಜೊಯ್ ಚಟರ್ಜಿ, ಪ್ರೊ ಪಿ ಪಿ ಚಕ್ರಬರ್ತಿ ಹಾಗೂ ಅವರ ತಂಡದ ಪ್ರಥಮ ಪ್ರಯತ್ನದ ಹಿಂದಿರುವ ಶ್ರಮವನ್ನು ನಾವು ಶ್ಲಾಘಿಸುತ್ತೇವೆ.”ಎಂದರು.
ಗುರುತುರಹಿತವಾದ ಭೌಗೋಳಿಕ ವೈದ್ಯಕೀಯ, ರೋಗಪತ್ತೆ, ಮಾಲಿಕ್ಯುಲರ್, ಜೈವಿಕ, ಚಿಕಿತ್ಸೆಯ ಏಕೀಕೃತ, ತತ್ಸಂಬಂಧಿತ ಹಾಗೂ ವಿಶಾಲ ಡಾಟಾ ಬೇಸ್ ಮತ್ತು ಎಲ್ಲಾ ರೋಗಿಗಳಿಗೂ ಫಲಿತಾಂಶ ಡಾಟಾಬೇಸ್ ಚಾವಿಯನ್ನು ವಿಶಿಷ್ಟಗೊಳಿಸಿದೆ. ಈ ಡಾಟಾಬೇಸ್, ವಿವಿದ ಕ್ಯಾನ್ಸರ್ ನಿವೇಶನಗಳಾದ್ಯಂತ ಇಮೇಜ್ ಸೆಟ್ಗಳನ್ನು ಶೋಧಿಸುವುದಕ್ಕೆ ಒಂದು ಶಕ್ತಿಶಾಲಿಯಾದ ಸಾಧನವಾಗಿದೆ. ಇದು ಒಬ್ಬ ಆಸಕ್ತ ಸಂಶೋಧಕರಿಗೆ, ಕ್ಯಾನ್ಸರ್ ನಿವೇಶನ-ನಂಬಲನರ್ಹವಾದ ರೀತಿಯಲ್ಲಿ ರೇಡಿಯಾಲಾಜಿಕಲ್ ಇಮೇಜ್ಗಳನ್ನು ಸಂಭಾವ್ಯವಾಗಿ ಪ್ರಶ್ನಿಸುವುದಕ್ಕೆ ಅವಕಾಶ ಒದಗಿಸುತ್ತದೆ. ಆಂಕಾಲಜಿಯು, ಕೇವಲ ರೋಗಪತ್ತೆಗೆ ಮಾತ್ರವಲ್ಲದೆ, ಚಿಕಿತ್ಸೆ ಹಾಗೂ ಚಿಕಿತ್ಸಾನಂತರದ ಅನುಸರಣೆಗೂ ಇಮೇಜ್ಗಳ ಮೇಲೆ ಅಪಾರವಾಗಿ ಅವಲಂಬಿತವಾಗಿರುವ ಕ್ಷೇತ್ರವಾಗಿದೆ. ಚಾವಿಯ ಮೂಲಕ ಜಗತ್ತಿನಾದ್ಯಂತ ಇರುವ ಕೇಂದ್ರಗಳು, ರೇಡಿಯೋಮಿಕ್ ಸಂಶೋಧನೆಯನ್ನು ವರ್ಧಿಸಿಕೊಳ್ಳಲು ಮತ್ತು ಸಹಯೋಗಾತ್ಮಕ ಸಂಶೋಧನೆಯನ್ನು ಸುಧಾರಿಸಲು ಉಚಿತವಾಗಿ ಇಮೇಜ್ಗಳನ್ನು ಅಪ್ಲೋಡ್ ಮಾಡಿಕೊಂಡು, ಕ್ಯಾನ್ಸರ್ ಶುಶ್ರೂಷೆಗೆ ನೆರವಾಗುವುದರ ಜೊತೆಗೆ ಕ್ಯಾನ್ಸರ್ಗಳನ್ನು ನಿಯಂತ್ರಿಸಲು ಇನ್ನೂ ಉತ್ತಮ ತಂತ್ರಗಳನ್ನು ಆವಿಷ್ಕರಿಸಬಹುದು.
ಚಾವಿ ಕುರಿತಾದ ಹೆಚ್ಚಿನ ವಿವರಗಳಿಗಾಗಿ ವೆಬ್ಸೈಟ್ಗೆ ಭೇಟಿ ನೀಡಿ: – https://chavi.ai/
ಟಾಟಾ ಮೆಡಿಕಲ್ ಸೆಂಟರ್ ಕುರಿತಾದ ಹೆಚ್ಚಿನ ವಿವರಗಳಿಗಾಗಿ ವೆಬ್ಸೈಟ್ಗೆ ಭೇಟಿ ನೀಡಿ: – https://tmckolkata.com/in/
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.