(www.vknews.in) ಉಪ್ಪಿನಂಗಡಿ ಮಾದರಿ ಶಾಲೆಯ ಮಕ್ಕಳಿಗೆ ತರಗತಿ ನಡೆಸಲು ಅನಾನುಕೂಲ ಆಗುತ್ತಿದ್ದ ದುರ್ವಾಸನೆ ಮತ್ತು ಆರೋಗ್ಯ ಸಮಸ್ಯೆಗೆ ಕಾರಣ ಆಗಿದ್ದ ಹತ್ತಿರದ ವಸತಿ ಗೃಹದ ತೆರೆದ ಚರಂಡಿಯಲ್ಲಿ ಹರಿಯ ಬಿಡುತ್ತಿರುವ ಕೊಳಚೆ ನೀರಿನ ವ್ಯವಸ್ತೆಯ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ನ ಗಮನಕ್ಕೆ ಜೂನ್ ತಿಂಗಳಲ್ಲಿ ಲಿಖಿತ ವಾಗಿ ದೂರು ನೀಡಿದ್ದು ಅದರ ಬಗ್ಗೆ ಯಾವುದೇ ಶಾಶ್ವತ ಪರಿಹಾರ ಕಾಣದೆ ಇರುವುದನ್ನು ಮನಗಂಡು ಮಕ್ಕಳ ಹಕ್ಕುಗಳ ಆಯೋಗಕ್ಕೆ ಕೂಡ ದೂರನ್ನು ಸಲ್ಲಿಸಲಾಗಿತ್ತು. ಆದರೂ ಯಾವುದೇ ರೀತಿಯ ಶಾಶ್ವತ ಪರಿಹಾರವನ್ನು ಕಾಣದೆ ಇರುವ ಕಾರಣ ಆಗಸ್ಟ್ ತಿಂಗಳ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಪೋಷಕರು ಅರ್ಜಿಯನ್ನು ಸಲ್ಲಿಸಿ ಪ್ರತಿಭಟನೆ ಮಾಡಲೇ ಬೇಕಾದ ಅನಿವಾರ್ಯತೆಯನ್ನು ತಿಳಿಸಲಾಗಿತ್ತು. ಅದರ ಅನುಸಾರ ಸಪ್ಟೆಂಬರ್ ತಿಂಗಳ 1ನೇ ತಾರೀಕು ಪೋಷಕರು,ಮಕ್ಕಳು ಹಾಗೂ ಊರಿನ ಸಾಮಾಜಿಕ ಕಳಕಳಿಯ ಶಿಕ್ಷಣ ಪ್ರೇಮಿಗಳು ಪಂಚಾಯತ್ ಮುಂಬಾಗ ಪ್ರತಿಭಟನೆಯನ್ನು ಮಾಡಲಾಗಿತ್ತು, ಈ ಸಮಯದಲ್ಲಿ ಸ್ಥಳೀಯ ಪಂಚಾಯತ್ ಅಧ್ಯಕ್ಷೆ ಯ ಉಪಸ್ಥಿತಿಯಲ್ಲಿ ಚರ್ಚೆಗಳು ನಡೆದು 15 ದಿನದ ಒಳಗಾಗಿ ಶಾಶ್ವತ ಪರಿಹಾರ ಮಾಡುವ ಭರವಸೆಯನ್ನು ನೀಡಿದ್ದರು. ಆದರೆ ಸಪ್ಟೆಂಬರ್ ತಿಂಗಳ 20 ತಾರೀಖಿನ ವರೆಗೂ ಪಂಚಾಯತ್ ಅಧ್ಯಕ್ಷೆ, ಮತ್ತು ಪಂಚಾಯತ್ ಆಡಳಿತವು ಯಾವುದೇ ರೀತಿಯ ಶಾಶ್ವತ ಪರಿಹಾರ ಮಾಡದೆ ಇದ್ದ ಕಾರಣ, ಪೋಷಕರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ,ತಾಲೂಕು ಆರೋಗ್ಯಾಧಿಕಾರಿ, ಜಿಲ್ಲಾ ಕಾರ್ಯ ನಿರ್ವಹಣಾಧಿಕಾರಿ, ಜಿಲ್ಲಾಧಿಕಾರಿ,ಜಿಲ್ಲಾ ಆರೋಗ್ಯಾಧಿಕಾರಿ ಗಳಿಗೆ ದೂರು ಕೊಡುವ ಅಭಿಯಾನವನ್ನು ಮಾಡಿದ ಕಾರಣ ದಿನಾಂಕ 21 ರಂದು ಶಾಲೆಯ ಮಕ್ಕಳ ಸಮಸ್ಯೆ ಯನ್ನು ನೋಡಲು ತಾಲೂಕಿನ ಕಾರ್ಯ ನಿರ್ವಹಣಾಧಿಕಾರಿಗಳು,ತಾಲೂಕು ಆರೋಗ್ಯಾಧಿಕಾರಿಗಳು, ತಾಲೂಕು ಶಿಕ್ಷಣಾಧಿಕಾರಿಗಳು ಮತ್ತು ಸ್ಥಳೀಯ ಪಂಚಾಯತ್ ನ ಅಭಿವೃದ್ದಿ ಅಧಿಕಾರಿಗಳು,ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಉಷಾ ಮುಳಿಯ, ಉಪಾಧ್ಯಕ್ಷ ರಾದ ವಿನಾಯಕ ಪೈ ಮತ್ತು ಸದಸ್ಯರು, ಅದಲ್ಲದೆ ಶಾಲೆಯ ಪೋಷಕರು ಮತ್ತು ಅವರ ಪ್ರತಿನಿಧಿಗಳಾದ ಎಸ್ಡಿಎಂಸಿ ಸದಸ್ಯರ ತಂಡ ಎಲ್ಲರೂ ಸೇರಿ ಸಮಸ್ಯೆಯನ್ನು ನೋಡಿ ಅದರ ಬಗ್ಗೆ ಚರ್ಚಿಸಿದಾಗ, ವಸತಿ ಗೃಹದಲ್ಲಿ ಇರುವವರು ಪಂಚಾಯತ್ ಕೊಟ್ಟಂತಹ ಎಲ್ಲಾ ನಿರ್ದೇಶನಗಳನ್ನು ಕೂಡ ಪಾಲಿಸದೆ ಅಸಡ್ಡೆಯನ್ನು ತೋರಿಸಿದ ಬಗ್ಗೆ ಸಾಬೀತು ಆದ ಕಾರಣ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಗಳ ನಿರ್ದೇಶನದ ಪ್ರಕಾರ ಪಂಚಾಯತ್ ನಿಂದ ಕೊಡುತ್ತಿರುವ ನೀರಿನ ಕನೆಕ್ಷನ್ ಅನ್ನು ಸ್ಥಗಿತ ಗೊಳಿಸಲು ಪಂಚಾಯತ್ ಆಡಳಿತವು ಸಮ್ಮತಿಯನ್ನು ಸೂಚಿಸಿತು. ಅದಲ್ಲದೆ ಶಾಶ್ವತ ವಾಗಿ ಇಂಗು ಗುಂಡಿ ನಿರ್ಮಿಸುವ ವರೆಗೆ ನೀರಿನ ಕನೆಕ್ಷನ್ ಕೊಡದಿರಲು ತಾಕೀತು ಮಾಡಿದ್ದಲ್ಲದೆ ಮನೆಯವರಿಂದ ಸಾರ್ವಜನಿಕ ತೆರೆದ ಚರಂಡಿಗೆ ಕೊಳಚೆ ನೀರನ್ನು ಬಿಟ್ಟ ಸಲುವಾಗಿ ದಂಡವನ್ನು ಕೂಡ ಭರಿಸಲು ಆದೇಶವನ್ನು ನೀಡಿರುತ್ತಾರೆ. ತಡವಾಗಿ ಆದರೂ ಶಾಲೆಯ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿಯನ್ನು ತೋರಿ ಕಠಿಣ ಕ್ರಮಕ್ಕೆ ಮುಂದಾದ ತಾಲೂಕು ನಿರ್ವಹಣಾಧಿಕಾರಿ ಮತ್ತು ತಂಡಕ್ಕೆ ಶಾಲೆಯ ಪೋಷಕರು ಅಭಾರಿ ಆಗಿದ್ದಾರೆ .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.