ಮದೀನಾ(ವಿಶ್ವಕನ್ನಡಿಗ ನ್ಯೂಸ್): ಇಂಡಿಯಾ ಫ್ರೆಟರ್ನಿಟಿ ಫೋರಂ ಮದೀನಾ ಕರ್ನಾಟಕ ಚಾಪ್ಟರ್ ವತಿಯಿಂದ ಪ್ರೆಟರ್ನಿಟಿ ಫೆಸ್ಟ್ 22 ಅಂಗವಾಗಿ ಮುಲಾಖಾತ್ ಕಾರ್ಯಕ್ರಮವು ಮದೀನಾದ ತಖೂಮ ಇಸ್ತಿರಾದಲ್ಲಿ ವಿಜ್ರಂಭಣೆಯಿಂದ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇಂಡಿಯಾ ಫ್ರೆಟರ್ನಿಟಿ ಫೋರಂ ಕರ್ನಾಟಕ ಚಾಪ್ಟರ್ ಇದರ ಜಿದ್ದಾ ಜಿಲ್ಲಾ ಸಮಿತಿ ಅಧ್ಯಕ್ಷರಾದ ಮುಹಮ್ಮದ್ ಆರಿಫ್ ಮಾತನಾಡಿ ಬಿಡುವಿಲ್ಲದೇ ನಿರಂತರ ದುಡಿಯುವ ಅನಿವಾಸಿ ಭಾರತೀಯರು ಕೋವಿಡ್ ಮಹಾಮಾರಿ ಯಿಂದಾಗಿ ಮಾನಸಿಕ ಜರ್ಜರಿತ ರಾಗಿದ್ದು ಅವರಿಗೆ ಮಾನಸಿಕ ಸ್ಥೈರ್ಯ ಮತ್ತು ಆತ್ಮವಿಶ್ವಾಸ ತುಂಬಲು ಇಂಡಿಯಾ ಫ್ರೆಟರ್ನಿಟಿ ಫೋರಂ ಆಯೋಜಿಸಿರುವ ಪ್ರೆಟರ್ನಿಟಿ ಪೆಸ್ಟ್ ಸಹಕಾರಿಯಾಗಲಿದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಇಂಡಿಯಾ ಫ್ರೆಟರ್ನಿಟಿ ಫೋರಂ ಯಾಂಬೂ ವಲಯಾಧ್ಯಕ್ಷ ಶೌಕತ್ ಅಲಿ ಮಾತನಾಡಿ ಕಳೆದ ಎರಡು ದಶಕಗಳಲ್ಲಿ ಇಂಡಿಯಾ ಫ್ರೆಟರ್ನಿಟಿ ಫೋರಂ ಮಾಡಿರುವ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಇಲ್ಲಿ ಅನಿವಾಸಿಗಳು ಏಕಾಂಗಿಯಲ್ಲ, ಅವರ ಬೆನ್ನೆಲುಬಾಗಿ ಸಮಸ್ಯೆಗಳ ಪರಿಹಾರಕ್ಕಾಗಿ ಇಂಡಿಯಾ ಫ್ರೆಟರ್ನಿಟಿ ಫೋರಂ ಸದಾ ಸಿದ್ದವಿದೆ ಎಂದರು.
ಇಂಡಿಯಾ ಫ್ರೆಟರ್ನಿಟಿ ಫೋರಂ ಜಿದ್ದಾ ಪ್ರಾದೇಶಿಕ ಕಾರ್ಯದರ್ಶಿ ಹಾರಿಸ್ ಗೂಡಿನಬಳಿ, ಇಂಡಿಯಾ ಫ್ರೆಟರ್ನಿಟಿ ಫೋರಂ ಮದೀನಾ ಕೇರಳ ಚಾಪ್ಟರ್ ಅಧ್ಯಕ್ಷ ಮೂಸಕುಟ್ಟಿ, ತಮಿಳುನಾಡು ಚಾಪ್ಟರ್ ಅಧ್ಯಕ್ಷ ಆಶಿಕ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಡಾ. ಅಂಜುಂ ಶಕೀಲ್ ಅಹ್ಮದ್ ಬೆಂಗಳೂರು, ಮೌಲಾನಾ ಅಹ್ಮದ್ ವಸೀಂ ದೆಹಲಿ, ಅಶ್ರಫ್ ಚೋಕ್ಲಿ, ಶಹದಾಬ್ ಬಿಹಾರ ಮೊದಲಾದವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮದೀನಾ ವಲಯಾಧ್ಯಕ್ಷ ಅಬ್ದುಲ್ ಅಝೀಝ್ ಸುರಿಬೈಲ್ ಸ್ವಾಗತಿಸಿದರೆ, ಮುದಸ್ಸರ್ ಅಕ್ಕರಂಗಡಿ ಕಾರ್ಯಕ್ರಮ ನಿರೂಪಿಸಿದರು, ಅನೀಸ್ ಶೆರೀಫ್ ಧನ್ಯವಾದವಿತ್ತರು.
ಹಗ್ಗ ಜಗ್ಗಾಟ, ಗೋಣಿಚೀಲ ಓಟ, ರಸಬಸ, ಪೆನಾಲ್ಟಿ ಶೂಟೌಟ್, ಸಂಗೀತ ಕುರ್ಚಿ, ರಸಪ್ರಶ್ನೆ, ಮೊದಲಾದ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು. ಪುಟಾಣಿ ಮಕ್ಕಳಿಗಾಗಿ ನಡೆದ ಹಗ್ಗ ಜಗ್ಗಾಟ, ವಿಕೇಟ್ ಶೂಟೌಟ್ ಬಕೆಟ್ ಬಾಲ್ ಮೊದಲಾದ ವಿವಿಧ ಆಟೋಟ ಸ್ಪರ್ಧೆಗಳು ಪ್ರೇಕ್ಷಕರ ಮನರಂಜಿಸಿತು. ವಿವಿಧ ಕ್ರೀಡೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಟೀಂ ಮದೀನಾ ಅಧ್ಯಕ್ಷ ಶಾಕೀರ್, ಇಂಡಿಯನ್ ಸೋಷಿಯಲ್ ಫೋರಂನ ಮುಬಿನ್ ಮುಲ್ಕಿ, ಅಶ್ರಫ್ ತೈಯಾರ ಮೊದಲಾದವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.