(www.vknews.in) ಮಡಿಕೇರಿ : ಕಿಂಬರ್ಲಿ ರಿಕ್ರಿಯೇಶನ್ಸ್ ಇದರ ವತಿಯಿಂದ ಮಡಿಕೇರಿ ದಸರಾ ಜನೋತ್ಸವದ ಯುವ ದಸರ ವನ್ನು ಯುವ ಕಲೋತ್ಸವ ಎಂಬ ಹೆಸರಿನಿಂದ ವಿಭಿನ್ನವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಕಾರ್ಯಕ್ರಮ ಆಯೋಜಕರಾದ ಕೆ. ಜಿ. ಮದನ್ ರವರು ತಿಳಿಸಿದ್ದಾರೆ. ಅಕ್ಟೊಬರ್ 1 ರಂದು ಬೆಳಿಗ್ಗೆ 10 ಗಂಟೆ ಗೆ ಜಾಗೃತಿ ಮೋಟೊ ರ್ರ್ಯಾಲೀ, ಸೂಪರ್ ಬೈಕ್ ಗಳ ಪ್ರದರ್ಶನದೊಂದಿಗೆ ವಿಭಿನ್ನ ಪ್ರಯತ್ನ ವಾಗಿ ಪ್ರಕೃತಿ ಮತ್ತು ಸಾಮಾಜಿಕ ಕಳಕಳಿ ಯೊಂದಿಗೆ ಆಧುನಿಕತೆ ಹಾಗೂ ಸಂಸ್ಕೃತಿಯ ಮಿಶ್ರಣದ ದೊಂದಿಗೆ ಯುವಕಲೋತ್ಸವ ಆಚರಿಸಲಾಗುವುದು. ನಗರದ ಗಾಂಧಿ ಮೈದಾನದಲ್ಲಿ ರಿಮೋ ಟ್ ಕಾರ್ ಹಾಗೂ ರೋಬೋಟ್ ಗಳ ಪೈಪೋಟಿ ಪ್ರದರ್ಶನ ನಡೆಯಲಿದೆ. ಸಂಜೆ 3 ಗಂಟೆಗೆ ನೃತ್ಯ ಸ್ಪರ್ಧೆ ನಡೆಯಲಿದ್ದು ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಸಮರೋಪ ಸಮಾರಂಭ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಗುವುದು.. ಸಿನಿಮಾ ರಂಗದ ತಾರೆಯರು ಕ ಯುವ ಕಲೋತ್ಸವ ದಲ್ಲಿ ಭಾಗವಹಿಸಲಿದ್ದಾರೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.