ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ಪುತ್ತೂರು ರೋಟರಿ ಕ್ಲಬ್ ಸೆ೦ಟ್ರಲ್ ನಿಂದ ಸೋಶಿಯಲ್ ಜಸ್ಟಿಸ್ ಡೇ ಪ್ರಯುಕ್ತ ಪುತ್ತೂರಿನಲ್ಲಿ ಕಳೆದ 13 ವರ್ಷದಿಂದ ವಕೀಲ ವೃತ್ತಿ ನಡೆಸುತ್ತಿರುವ ಕವನ್ ನಾಯ್ಕ್ ರವರು ಮಾತನಾಡಿ ಮೂಲತಃ ಮನುಷ್ಯ ಸಂಘಜೀವಿ ಆದರೆ ಹಳೆಯ ಶಿಲಾಯುಗದ ಮಾನವನ ಬದುಕು ಪ್ರಾಣಿಗಳ ಬದುಕಿಗಿಂತ ಬಿನ್ನವಾಗಿರಲಿಲ್ಲ, ತಾನು ಬದುಕುವುದಕ್ಕೆ ತಿನ್ನಬೇಕು ಎನ್ನುವ ಭಾವನೆ ಮನುಷ್ಯ ಪ್ರಾರಂಭದಲ್ಲಿ ಇತ್ತು.
ಮತ್ತೊಬ್ಬರಿಂದ ಕಿತ್ತು ತಿನ್ನುವುದು ಆಗಿನ ಕಾಲದಲ್ಲಿ ಅಪರಾಧವಾಗಿರಲಿಲ್ಲ,ತಾನು ಏನು ತನ್ನ ಬದುಕಿನ ಗುರಿ ಏನು ಅನ್ನುವ ಅರಿವು ಮನುಷ್ಯ ಪ್ರಾರಂಭದಲ್ಲಿ ಮನುಷ್ಯನಿಗಿರಲಿಲ್ಲ, ಆಗ ಸಾಮಾಜಿಕ ನ್ಯಾಯಕ್ಕೆ ಅರ್ಥವೇ ಇರಲಿಲ್ಲ,ಪ್ರಸಕ್ತ ಅಧುನಿಕತೆ ಮನುಷ್ಯನಲ್ಲಿ ಅನೇಕ ಬದಲಾವಣೆಯನ್ನು ತಂದುಕೊಟ್ಟಿದೆ, ಸ್ವಾತಂತ್ರ ಹೋರಾಟವು ನಮ್ಮನ್ನು ಸಮಗ್ರವಾಗಿ ಬೆಳೆಸಿತು,ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವುದಕ್ಕೆ ಭಾರತದ ಸಂವಿಧಾನ ಎಲ್ಲರಿಗೂ ಒಂದು ನೀತಿಯನ್ನು ಬೋಧಿಸುವಂತೆ ಮಾಡಿತು,ಎಲ್ಲರೂ ಕಡ್ದಾಯವಾಗಿ ಶಿಕ್ಷಣವನ್ನು ಪಡೆಯುವಂತಾಯಿತು,ಉಚಿತ ಶಿಕ್ಷಣದೊಂದಿಗೆ ಸಮಾಜದ ಮುಖ್ಯವಾಹಿನಿಯಲ್ಲಿ ಅನೇಕರನ್ನು ಗುರುತಿಸುವಂತೆಯೂ ಆಯಿತು,ಬಾಲ್ಯ ವಿವಾಹಕ್ಕೆ ತಡೆಯಾಯಿತು,ಸತಿಸಹಗಮನಕ್ಕೆ ಕಡಿವಾಣ ಉ೦ಟಾಯಿತು,ಜನರು ಸರಿಯಾದ ರೀತಿಯಲ್ಲಿ ಬದುಕುವ ಹಕ್ಕನ್ನು ಪಡೆದುಕೊಂಡರು ಹೀಗೆ ಸಾಮಾಜಿಕ ನ್ಯಾಯದ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸೆ೦ಟ್ರಲ್ ಅದ್ಯಕ್ಷರಾದ ರಫೀಕ್ ದರ್ಬೆ,ಕಾರ್ಯದರ್ಶಿ ಚಂದ್ರಹಾಸ ರೈ,ತಿಂಗಳ ಸಂಯೋಜಕರಾದ ಪುರುಷೋತ್ತಮ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕ್ಲಬ್ ನ ಇಂಜೀನಿಯರ್ಸ್ ಶಿವರಾಮ್ ಎಮ್ ಎಸ್ ಮತ್ತು ಪ್ರದೀಪ್ ಪೂಜಾರಿಯವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ,ಕೋಶಾಧಿಕಾರಿ ಡಾ ರಾಮಚಂದ್ರ ,ರಾಜೇಶ್ ಬೆಜ್ಜಂಗಳ,ಲಾವಣ್ಯ ನಾಯ್ಕ್ ಇನ್ನಿತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.