ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರು ತಾಲ್ಲೂಕಿನ ಲಕ್ಕೂರು ಹೋಬಳಿಯ ಸಂಪಗೆರೆ ಗ್ರಾಮದ ಮನೆ ಒಂದರಲ್ಲಿ ನಡೆದ ದರೋಡೆ ಪ್ರಕರಣವನ್ನು ಭೇದಿಸಿದ ಮಾಲೂರು ಪಟ್ಟಣ್ಣದ ಪೊಲೀಸರು ಒಬ್ಬ ಮಹಿಳೆ ಹಾಗೂ ಹೊರ ರಾಜ್ಯದ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ ಸರಿ ಸುಮಾರು 29 ಲಕ್ಷಕ್ಕಿಂತ ಅಧಿಕ ಮೊತ್ತದ ಹಣ, ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡು ತಕ್ಷಣವೇ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುವ ಘಟನೆ ನಡೆದಿದೆ.
ಮಾಲೂರು ತಾಲ್ಲೂಕಿನ ಲಕ್ಕೂರು ಹೋಬಳಿ ಗಡಿ ಗ್ರಾಮವಾದ ಸಂಪಗೆರೆಯಲ್ಲಿ ಸೆಪ್ಟೆಂಬರ್ 23 ರಂದು ಶುಕ್ರವಾರ ಸಂಜೆ ಮಂಜುನಾಥ್ , ಕವಿಕುಮಾರ್, ಎಂಬುವವರ ಮನೆಯಲ್ಲಿ ಯಾರೋ ಅಪರಿಚಿತರು ಲಗ್ನ ಪತ್ರಿಕೆ ಕೊಡುವ ನೆಪದಲ್ಲಿ ಮನೆಗೆ ಬಂದು ಮನೆಯಲ್ಲಿದ್ದ ಮಹಿಳೆಗೆ ರಾಸಾಯನಿಕ ಔಷಧಿ ಮುಖಕ್ಕೆ ಹಾಕಿ ಪ್ರಜ್ಞೆ ತಪ್ಪಿಸಿ ಬೀರುವಿನಲ್ಲಿದ್ದ 35 ಲಕ್ಷ ರೂ ನಗದು ಚಿನ್ನ ಬೆಳ್ಳಿಯ ಅಭರಣಗಳು ಕಳುವಾಗಿರುವ ಬಗ್ಗೆ ಪಟ್ಟಣ್ಣದ ಪೊಲೀಸ್ ಠಾಣೆಯಲ್ಲಿ ಮಂಜುನಾಥ್, ರವಿಕುಮಾರ್ ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಜಾಡು ಹಿಡಿದು ತನಿಖೆ ನಡೆದು ಪೊಲೀಸರು ಆರೋಪಿ ಮಮತ ಮೊಬೈಲ್ ನಂಬರ್ ಕಾಲ್ ಲಿಸ್ಟ್ ಪರಿಶೀಲನೆ ನಡೆಸಿ, ಮಂಜುನಾಥನ ಪತ್ನಿ ಮಮತ ಹಾಗೂ ಸೋದರ ಮಾವನ ಮಕ್ಕಳಾದ ತಮಿಳುನಾಡಿನ ಹೊಸೂರಿನ ಮುನಿರಾಜ್, ನಾಗೇಶ್ ಎಂಬುವವರನ್ನು ಬಂಧಿಸಿ ಕಳವು ಮಾಡಿದ್ದ 35 ಲಕ್ಷ ರೂಗಳ ಪೈಕಿ 29 ಲಕ್ಷ 20 ಸಾವಿರ ನಗದು ಹಣ ಚಿನ್ನದ 1 ಜೊತೆ ಕಿವಿಯೋಲೆ, ಮಾಟಿ, ಹ್ಯಾಗಿಂಗ್ಸ್, ಗೆಜ್ಜೆ, ನೆಕ್ಕಲೀಸು, ಬೆಳ್ಳಿಯ ಚೆಂಬು, ಲಕ್ಷ್ಮೀ ಮುಖವಾಡ, ಕುಂಕುಮ ಭರಣಿ, ಇವುಗಳನ್ನು ಆರೋಪಿಗಳಿಂದ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕೋಲಾರ ಜಿಲ್ಲಾ ವರಿಷ್ಟಧಿಕಾರಿ ದೇವರಾಜ್.ಡಿ, ಡಿ.ಎಸ್.ಪಿ ಮುರಳೀಧರ್, ನೀರಿಕ್ಷಕ ಎಸ್.ಆರ್.ಚಂದ್ರಧರ್, ಕ್ರೈಂ ಇನ್ಸಪೆಕ್ಟರ್ ರವೀಂದ್ರ ಗೌಡ, ಪ್ರೊಬೆಷನರಿ ಇನ್ಸಪೆಕ್ಟರ್ ರಾಜೇಂದ್ರ, ಪೊಲೀಸ್ ಅಧಿಕಾರಿಗಳಾದ ಮೋಹನ್ ಕುಮಾರ್, ರಮೇಶ್ ಬಾಬು, ವೆಂಕಟೇಶ್, ಆನಂದ್, ಮಂಜುನಾಥ್, ನಿರ್ಮಲ, ಚಾಲಕರಾದ ಆಂಜನೇಯ , ವೆಂಕಟೇಶ್ ಇವರನ್ನು ಶ್ಲಾಘೀಸಿದ್ದಾರೆ.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.