ಗುಂಡ್ಲುಪೇಟೆ (vknews.in): ಮಾಧ್ಯಮಗಳು ಸಂಪೂರ್ಣವಾಗಿ ಸರ್ಕಾರದ ಕೈಯಲ್ಲಿವೆ. ವಿರೋಧಪಕ್ಷದ ಹೋರಾಟವನ್ನು ಪ್ರಸಾರ ಮಾಡಲಾಗುತ್ತಿಲ್ಲ. ಸದನಗಳಲ್ಲೂ ಸಹ ನಮ್ಮ ನಿಲುವನ್ನು ಆಲಿಸಲಾಗುತ್ತಿಲ್ಲ. ನಮ್ಮ ಧ್ವನಿವರ್ಧಕಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಆದುದರಿಂದ ನಮಗೆ ಉಳಿದಿದ್ದು ಒಂದೇ ದಾರಿ ಅಂದರೆ ಪಾದಯಾತ್ರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ನಾವು ಭಾರತ್ ಜೋಡೊ ಯಾತ್ರೆಯನ್ನು ಕೈಗೊಂಡಿದ್ದೇವೆ. ಪಾದಯಾತ್ರೆಯಲ್ಲಿ ಲಕ್ಷಾಂತರ ಜನರು ಪಾಲ್ಗೊಳ್ಳುತ್ತಿದ್ದಾರೆ. ಜನರು ತಮ್ಮ ಸಮಸ್ಯೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಈ ಪಾದ ಯಾತ್ರೆ ಭಾರತೀಯರ ಕೂಗು. ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಆಡಳಿತ ಪಕ್ಷದವರು ದೇಶದಲ್ಲಿ ದ್ವೇಷವನ್ನು ಹರಡುತ್ತಿದ್ದಾರೆ. ನಾವು ಅದರ ವಿರುದ್ಧ ಹೋರಾಡುತ್ತಿದ್ದೇವೆ. ನಮ್ಮ ಯಾತ್ರೆಯಲ್ಲಿ ಕರ್ನಾಟಕದ ಜನರು ೨೧ ದಿನ ಹೀಗೆ ಪಾಲ್ಗೊಳ್ಳಬೇಕು ಎಂದು ಹೇಳಿ ಧನ್ಯವಾದಗಳನ್ನು ಅರ್ಪಿಸುತ್ತಾ ರಾಹುಲ್ ಗಾಂಧಿ ಸಮಾವೇಶವನ್ನು ಗುಂಡ್ಲುಪೇಟೆಯಲ್ಲಿ ಮುಕ್ತಾಯಗೊಳಿಸಿನೀಡಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.