13 ಸಂಸ್ಥೆಗಳಿಗೆ ವಿಸ್ತರಣೆಗೊಂಡ ಜಿಇ ಏರೋಸ್ಪೇಸ್ನ ಭಾರತೀಯ ಸರಬರಾಜು ಸರಪಳಿ
ಜಿಇ ಏರೋಸ್ಪೇಸ್ ನ “ಭಾರತದಲ್ಲಿ ತಯಾರಿಸಿ(ಮೇಕ್ ಇನ್ ಇಂಡಿಯಾ)” ತಂತ್ರವು ಐದು ವರ್ಷಗಳಲ್ಲಿ ಸ್ಥಳೀಯ ಸೋರ್ಸಿಂಗ್ ವ್ಯಯವು 20 ಪಟ್ಟು ಹೆಚ್ಚಾಗಲು ನೆರವಾಗಿದೆ..
ಬೆಂಗಳೂರು, (www.vknews.in): ಈ ವಾರ ತಾನು ಭಾರತದ ಡಿಫ್ಎಕ್ಸ್ಪೋ(DefExpo)ದಲ್ಲಿ ಭಾಗವಹಿಸಲು ಸಜ್ಜಾಗುತ್ತಿರುವ ಸಮಯದಲ್ಲೇ ಜಿಇ ಏರೋಸ್ಪೇಸ್, ತನ್ನ ಭಾರತೀಯ ಏರೋ-ಇಂಜಿನ್ ಸರಬರಾಜು ಸರಪಳಿಯು, ಜಿಇದ ಪುಣೆ ಮಲ್ಟಿಮೋಡಲ್ ಉತ್ಪಾದನಾ ಘಟಕದ ಜೊತೆಗೆ, 13 ಸಂಸ್ಥೆಗಳಿಗೆ ವಿಸ್ತರಣೆಗೊಂಡಿದೆ ಎಂದು ಘೋಷಿಸಿತು.
ಬೆಳೆಯುತ್ತಿರುವ ಅಧಿಕಮೌಲ್ಯದ ಸಂಘಟನೆ, ಸಂಕೀರ್ಣವಾದ ಏರೋ-ಇಂಜಿನ್ ಉತ್ಪಾದನಾ ಕೆಲಸಕ್ಕಾಗಿ ಭಾರತೀಯ ಸಂಸ್ಥೆಗಳು ಜಾಗತಿಕವಾಗಿ ಸ್ಪರ್ಧಾತ್ಮಕವಾಗುತ್ತಿವೆ. ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್, ಮಹಿಂದ್ರಾ ಏರೋಸ್ಟ್ರಕ್ಚರ್, ಗೋದ್ರೆಜ್ ಒಳಗೊಂಡಂತೆ ಹೆಸರಾಂತ ಭಾರತೀಯ ಸಂಸ್ಥೆಗಳು* ಜಿಇ ಏರೋ-ಇಂಜಿನ್ ಸಾಧನಗಳ ಉತ್ಪಾದನಾ ಲೈನ್ ಸ್ಥಾಪಿಸಿವೆ. ಈ ಸಾಧನಗಳನ್ನು ಜಿಇದ ಉತ್ಪಾದನಾ ಘಟಕಗಳಿಂದ ಭಾರತಕ್ಕೆ ರಫ್ತು ಮಾಡಲಾಗುತ್ತದೆ. ಭಾರತದ ಅತ್ಯಂತ ನವೀನವಾದ ಪ್ರಪ್ರಥಮ ದೇಶೀಯ ವಿಮಾನ ಕ್ಯಾರಿಯರ್ ಆದ ವಿಕ್ರಾಂತ್ಗೆ ಶಕ್ತಿ ನೀಡುವ ಜಿಇದ LM2500 ಮರೀನ್ ಇಂಜಿನ್ಗಾಗಿ ಹಿಂದುಸ್ತಾನ್ ಏರೋನಾಟಿಕ್ಸ್ ಅಸ್ವೆಂಬ್ಲಿ ಲೈನ್ ಸ್ಥಾಪಿಸಿದೆ. ಬೆಳೆಯುತ್ತಿರುವ ಈ ಸಾಮಥ್ರ್ಯಗಳು, ಸ್ಥಳೀಯ ಸೋರ್ಸಿಂಗ್ ವ್ಯಯದಲ್ಲಿ ಜಿಇ ಏರೋಸ್ಪೇಸ್ನ ಹೆಚ್ಚಳಿಕೆಯೊಂದಿಗೆ ಹೊಂದಿಕೆಯಾಗಿ ಕಳೆದ ಐದು ವರ್ಷಗಳಲ್ಲಿ ಇದು 20 ಪಟ್ಟು ಬೆಳೆದಿದೆ.
ತಮ್ಮ ಸ್ವಾವಲಂಬನೆಯ ಗುರಿಗಳನ್ನು ಸಾಧಿಸಲು(ಸ್ಥಳೀಯವಾಗಿ ಇದನ್ನು ಆತ್ಮ-ನಿರ್ಭರ ಭಾರತ ಎಂದು ಕರೆಯಲಾಗುತ್ತದೆ) ಜಿಇ ಏರೋಸ್ಪೇಸ್ ಹಾಗೂ ಅದರ ಭಾರತೀಯ ಭಾಗೀದಾರ ಸಂಸ್ಥೆಗಳು ಭಾರತಕ್ಕೆ ಅಗತ್ಯವಾದ ಏರೋ-ಇಂಜಿನ್ ಉತ್ಪಾದನಾ ಮೂಲಸೌಕರ್ಯ ಸ್ಥಾಪಿಸುವ ಪ್ರಕ್ರಿಯೆಯಲ್ಲಿವೆ. “ಭಾರತೀಯ ಸಂಸ್ಥೆಗಳು ಜಿಇ ಏರೋಸ್ಪೇಸ್ನೊಂದಿಗೆ ಸಹಭಾಗಿತ್ವ ಏರ್ಪಡಿಸಿಕೊಳ್ಳಲು ಮತ್ತು ಏರೋ-ಇಂಜಿನ್ ಮಾರುಕಟ್ಟೆಸ್ಥಳವನ್ನು ಸೇರಲು ಅತ್ಯಂತ ಕಾತರವಾಗಿವೆ. “ಗುಣಮಟ್ಟದ ಮೇಲೆ ಗಮನ ಕೇಂದ್ರೀಕರಣವನ್ನು ನಿಭಾಯಿಸುವ ಸಮಯದಲ್ಲೇ, ಏರೋ-ಇಂಜಿನ್ ಉತ್ಪಾದನೆಗೆ ಅಗತ್ಯವಾದ ಸಂಕೀರ್ಣ ಉತ್ಪಾದನೆ ಮತ್ತು ವಿಶೇಷ ಪ್ರಕ್ರಿಯೆಗಳಲ್ಲಿ ನೈಪುಣ್ಯತೆಯ ಸಾಮಥ್ರ್ಯವನ್ನು ಅವು ಪ್ರದರ್ಶಿಸಿವೆ.”ಎಂದು ಹೇಳಿದರು, ಜಿಇದ ಮಿಲಿಟರಿ ಏವಿಯೇಶನ್ ವಿಭಾಗದ ಏಶ್ಯಾ ಪ್ರದೇಶದ ಮಾರಾಟಗಳ ವಿಭಾಗದ ಉಪಾಧ್ಯಕ್ಷ ಯೂಂಗ್ಜಿ ಕಿಮ್.
ಬೆಳೆಯುತ್ತಿರುವ ತನ್ನ ಭಾರತೀಯ ಏರೋ-ಇಂಜಿನ್ ಉತ್ಪಾದನಾ ಕೈಗಾರಿಕಾ ಬೇಸ್ಗೆ ಬೆಂಬಲ ಒದಗಿಸುವ ಸಲುವಾಗಿ, ಜಿಇ ಏರೋಸ್ಪೇಸ್, ಭಾರತದಲ್ಲಿರುವ ಉತ್ಪಾದನಾ ಕಾರ್ಯಪಡೆಗೆ ತೀವ್ರವಾದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಕಳೆದ ಎರಡು ವರ್ಷಗಳಲಿಈ ಜಿಇ-ನಿಧಿನೆರವಿನ ಕಾರ್ಯಕ್ರಮವು, ವಿವಿಧ ಭಾಗೀದಾರ ಸಂಸ್ಥೆಗಳ 150ಕ್ಕಿಂತ ಹೆಚ್ಚಿನ ಉತ್ಪಾದನಾ ಸಿಬ್ಬಂದಿಗೆ ತರಬೇತಿ ಒದಗಿಸಿದ್ದು ಈ ತರಬೇತಿ ಹೊಂದಿದ ನೌಕರರು ನಂತರ, ಭಾರತದಲ್ಲಿರುವ ಜಿಇ ಸರಬರಾಜುದಾರ ಸಂಸ್ಥೆಗಳ ಪೈಕಿ ಒಂದರಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. “ನಮ್ಮ ಬೆಳೆಯುತ್ತಿರುವ ಭಾರತೀಯ ಕೈಗಾರಿಕಾ ಬೇಸ್ನ ಜೊತೆಗೂಡಿ, ಜಿಇದ ಭಾರತೀಯ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವು ಭಾರತದಲ್ಲಿ ತಯಾರಿಸಿಗೆ ನಾವು ನೀಡುತ್ತಿರುವ ಬೆಂಬಲಕ್ಕೆ ಪುರಾವೆಯಾಗಿದೆ.”ಎಂದು ಕಿಮ್ ಸೇರಿಸಿದರು.
1000ಕ್ಕಿಂತ ಹೆಚ್ಚಿನ ಜಿಇದ ಏವಿಯೇಶನ್ ಸಂಶೋಧಕರು ಹಾಗೂ ಇಂಜಿನಿಯರ್ಗಳು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಐಐಟಿ-ಮದ್ರಾಸ್, ಐಐಟಿ-ಕಾನ್ಪುರ, ಮತ್ತು ಐಐಟಿ-ಪಾಟ್ನದಂತಹ ಮುಂಚೂಣಿ ಶೈಕ್ಷಣಿಕ ಸಂಸ್ಥೆಗಳೊಂದಿಗೆ ದೀರ್ಘ ಸಂಪರ್ಕ ಹೊಂದಿದ್ದಾರೆ.
*ಸಂಪಾದಕರಿಗೆ ಟಿಪ್ಪಣಿ: ಭಾರತದಲ್ಲಿ ಜಿಇದ ಏವಿಯೇಶನ್ ಹೆಜ್ಜೆಗುರುತು, ಮಿಲಿಟರಿ ವೈಮಾನಿಕ ಸಾಧನಗಳು, ವಾಣಿಜ್ಯ ವೈಮಾನಿಕ ಇಂಜಿನ್ಗಳು, ಸಾಗರಸಂಬಂಧಿತ ಕಾರ್ಯಾಚರಣೆಗಳು, ಏವಿಯಾನಿಕ್ಸ್, ನಿರ್ವಹಣೆ, ಉತ್ಪನ್ನ ಅಭಿವೃದ್ಧಿ ಮತ್ತು ಸಂಶೋಧನೆಯ ಜೊತೆಗೆ ಸ್ಥಳೀಯ ಉತ್ಪಾದನೆಯನ್ನು ಒಳಗೊಂಡಿದೆ. ಭಾರತದಲ್ಲಿ ಜಿಇದ ಸರಬರಾಜು ಸರಪಳಿ ಭಾಗೀದಾರರು ಇವುಗಳನ್ನು ಒಳಗೊಂಡಿದೆ:
ಜಿಇ ಏರೋಸ್ಪೇಸ್ ಕುರಿತು..
ಜಿಇದ(GE (NYSE: GE) ಕಾರ್ಯಾಚರಣೆಯ ಘಟಕವಾದ ಜಿಇ ಏರೋಸ್ಪೇಸ್, ಜೆಟ್ ಇಂಜಿನ್ಗಳು, ವಾಣಿಜ್ಯ ಹಾಗೂ ಮಿಲಿಟರಿ ವಿಮಾನಗಳಿಗಾಗಿ ಸಹಸಾಧನಗಳು ಮತ್ತು ಸಿಸ್ಟಮ್ಗಳ ವಿಶ್ವ-ಮುಂಚೂಣಿ ಸರಬರಾಜುದಾರ ಸಂಸ್ಥೆಯಾಗಿದೆ. ಈ ಕೊಡುಗೆಗಳಿಗೆ ಬೆಂಬಲ ನೀಡಲು ಜಿಇ ಏರೋಸ್ಪೇಸ್ ಜಾಗತಿಕ ಸೇವಾ ಕಾರ್ಯಜಾಲವನ್ನು ಹೊಂದಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಇಲ್ಲಿ ಭೇಟಿಯಾಗಿ: www.GEAerospace.com
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.