ಬೆಂಗಳೂರು (www.vknews.in): ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆ ಸಮೂಹವಾಗಿರುವ ಮದರ್ ಹುಡ್ ಹಾಸ್ಪಿಟಲ್ಸ್ ಮೈಸೂರು ನಗರದಲ್ಲಿ ತನ್ನ 19 ನೇ ಆಸ್ಪತ್ರೆಯನ್ನು ಆರಂಭಿಸಿದೆ. ಈ ಆಸ್ಪತ್ರೆಯನ್ನು ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮದರ್ ಹುಡ್ ಹಾಸ್ಪಿಟಲ್ಸ್ ನ ಸಿಇಒ ವಿಜಯರತ್ನ ವೆಂಕಟರಾಮನ್ ಮತ್ತು ವೈದ್ಯರ ತಂಡದ ಸದಸ್ಯರು ಉಪಸ್ಥಿತರಿದ್ದರು. ಬೆಂಗಳೂರಿನಿಂದ ಹೊರಗೆ ಆರಂಭವಾಗಿರುವ ಮೊದಲ ಮದರ್ ಹುಡ್ ಆಸ್ಪತ್ರೆ ಇದಾಗಿದೆ. ಬೆಂಗಳೂರಿನಲ್ಲಿ 7 ಆಸ್ಪತ್ರೆಗಳನ್ನು ಹೊಂದಿದೆ.
ಮೈಸೂರು ಹೃದಯ ಭಾಗದಲ್ಲಿ ಆರಂಭವಾಗಿರುವ ಮದರ್ ಹುಡ್ ಆಸ್ಪತ್ರೆಯು ಮಹಿಳೆಯರ ಆರೋಗ್ಯ ಆರೈಕೆ ಪ್ರೌಢಾವಸ್ಥೆಯಿಂದ ಋತುಬಂಧದವರೆಗೆ, ನವಜಾತ ಶಿಶುಗಳ ಆರೈಕೆ & ಮಕ್ಕಳ ಆರೈಕೆಗೆ ಸಮಗ್ರ ಸೌಲಭ್ಯವನ್ನು ಹೊಂದಿದೆ. ಇಲ್ಲಿ ನುರಿತ ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು, ನಿಯೋನ್ಯಾಟೋಲಾಜಿಸ್ಟ್ ಗಳ ತಂಡವಿದ್ದು, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಮೂಲಸೌಕರ್ಯವನ್ನು ಹೊಂದಿದೆ.
ಆಸ್ಪತ್ರೆ ಉದ್ಘಾಟನೆ ಮಾಡಿ ಮಾತನಾಡಿದ ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, “ಮೈಸೂರು ನಗರದಲ್ಲಿ ಮದರ್ ಹುಡ್ ಹಾಸ್ಪಿಟಲ್ಸ್ ಅನ್ನು ಆರಂಭಿಸುತ್ತಿರುವ ಈ ಸಂದರ್ಭದಲ್ಲಿ ನಾನು ಉಪಸ್ಥಿತನಿರುವುದು ಸಂತಸ ತಂದಿದೆ. ನಮ್ಮ ಸಮಾಜಕ್ಕೆ ನಿರ್ಣಾಯಕ ಸ್ಥಂಭಗಳಾಗಿದ್ದಾರೆ. ಇವರು ಪ್ರತಿ ಕುಟುಂಬದ ಆರೋಗ್ಯದ ಮೂಲಾಧಾರವಾಗಿದ್ದಾರೆ. ಅವರ ಒಳಗೊಳ್ಳುವಿಕೆ, ಕ್ರಿಯಾತ್ಮಕ ಮತ್ತು ನಿರ್ಣಯಿಸದ ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳಬೇಕು. ಮಹಿಳೆಯರು ಮತ್ತು ಮಕ್ಕಳ ಆರೋಗ್ಯದಲ್ಲಿ ಅವರ ಪರಿಣತಿಯೊಂದಿಗೆ ನಮ್ಮ ನಗರದಲ್ಲಿ ಮದರ್ ಹುಡ್ ಆಸ್ಪತ್ರೆಗಳನ್ನು ನಾವು ಸಂತೋಷದಿಂದ ಸ್ವಾಗತಿಸುತ್ತೇವೆ ಮತ್ತು ಆಸ್ಪತ್ರೆಯವರಿಗೆ ಶುಭ ಹಾರೈಸುತ್ತೇನೆ’’ ಎಂದರು.
ಮದರ್ ಹುಡ್ ಆಸ್ಪತ್ರೆಯ ಸಿಇಒ ವಿಜಯರತ್ನ ವೆಂಕಟರಾಮನ್ ಅವರು ಮಾತನಾಡಿ, “ಮದರ್ ಹುಡ್ ಆಸ್ಪತ್ರೆಯಲ್ಲಿ ನಾವು ಯಾವಾಗಲೂ ನಮ್ಮ ರೋಗಿಗಳು ಮತ್ತು ಅವರ ಕುಟುಂಬಗಳಿಗೆ ನಿರೀಕ್ಷೆಗೂ ಮೀರಿದ ಆರೋಗ್ಯ ರಕ್ಷಣೆ ಸೇವೆಗಳ ಅನುಭವ ನೀಡುವ ಗುರಿಯನ್ನು ಹೊಂದಿದ್ದೇವೆ. ಮಹಿಳೆಯರು ಮತ್ತು ಮಕ್ಕಳಿಗೆ ಮನೆಯ ಮತ್ತು ಆರಾಮದಾಯಕ ವಾತಾವರಣದ ಅಗತ್ಯವಿರುತ್ತದೆ. ಇಂತಹ ವಾತಾವರಣವನ್ನು ನಾವು ಕಲ್ಪಿಸುತ್ತಿದ್ದೇವೆ. ನಮ್ಮ ಮೈಸೂರು ಕೇಂದ್ರವನ್ನು ಆರಂಭಿಸುವುದರೊಂದಿಗೆ 1 ಮತ್ತು 2 ಶ್ರೇಣಿ ನಗರಗಳ ನಡುವೆ ಇರುವ ಆರೋಗ್ಯ ರಕ್ಷಣೆ ಸೇವೆಗಳ ಅಂತರವನ್ನು ಕಡಿಮೆ ಮಾಡಲಿದ್ದೇವೆ ಎಂಬ ವಿಶ್ವಾಸವಿದೆ. ನಾವು ಈ ಆಸ್ಪತ್ರೆಯನ್ನು ಕೇವಲ ಈ ನಗರದ ರೋಗಿಗಳನ್ನು ಗಮನದಲ್ಲಿಟ್ಟುಕೊಳ್ಳುವುದಿಲ್ಲ. ಇದರ ಜೊತೆಗೆ ನೆರೆಯ ಕೊಡಗು, ಚಾಮರಾಜನಗರ, ಚಿಕ್ಕಮಗಳೂರು, ಹಾಸನದಂತಹ ನಗರಗಳ ಜನರಿಗೂ ಇಲ್ಲಿ ಸೇವೆ ಒದಗಿಸುತ್ತೇವೆ’’ ಎಂದರು.
“ಮದರ್ ಹುಡ್ ಹಾಸ್ಪಿಟಲ್ಸ್ ಮಹಿಳಾ ಆರೋಗ್ಯ ಸೇವೆಗಳ ಸಂಪೂರ್ಣ ಸ್ಟಾಕ್ ಅನ್ನು ನೀಡುತ್ತದೆ. ಇದರ ಜೊತೆಗೆ ಬಲವಾದ ಎನ್ಐಸಿಯು ಮಟ್ಟದ 3 ಸೌಲಭ್ಯವನ್ನು ಆಸ್ಪತ್ರೆಯ ಪ್ರಬಲ ಸ್ತಂಭಗಳಲ್ಲಿ ಒಂದಾಗಿದೆ. ಇದು ಉತ್ತಮ ಗುಣಮಟ್ಟದ ಸಂಸ್ಥೆಯಾಗಿದೆ. ನಮ್ಮ ಆಸ್ಪತ್ರೆಯಲ್ಲಿ ಪ್ರಸವ ಆರೈಕೆ, ಸ್ತ್ರೀರೋಗ, ಲ್ಯಾಪರೋಸ್ಕೋಪಿಕ್ ಸರ್ಜರಿ, ಸಂತಾನೋತ್ಪತ್ತಿ, ಮಕ್ಕಳ ತಜ್ಞರು, ನಿಯೋನ್ಯಾಟೋಲಾಜಿ ಸೇರಿದಂತೆ ಇನ್ನಿತರೆ ಕ್ಷೇತ್ರಗಳಲ್ಲಿ ಅತ್ಯಂತ ಅನುಭವ ಹೊಂದಿದ ವೈದ್ಯರ ತಂಡವಿದೆ. ಮೈಸೂರು ಮತ್ತು ಅಕ್ಕಪಕ್ಕದ ಪ್ರದೇಶಗಳ ಜನರಿಗೆ ತಡೆರಹಿತ ಮತ್ತು ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವಲ್ಲಿ ನಾವು ಸಿದ್ಧರಾಗಿದ್ದೇವೆ’’ ಎಂದು ಅವರು ತಿಳಿಸಿದರು.
ಮದರ್ ಹುಡ್ ಹಾಸ್ಪಿಟಲ್ಸ್ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಸೇವೆಯಲ್ಲಿ ಒಂದು ದಶಕದ ಪರಂಪರೆಯನ್ನು ಹೊಂದಿದೆ. ಇದು ರಾಜ್ಯದಲ್ಲಿಯೇ ಪ್ರಬಲವಾದ ನವಜಾತ ಶಿಶುಗಳ ಆಸ್ಪತ್ರೆಗಳಲ್ಲಿ ಒಂದಾಗಿದೆ. ಇಲ್ಲಿ ಗಂಭೀರ ಸ್ವರೂಪದ ಅಸ್ವಸ್ಥರಿಗೆ, ಚೇತರಿಸಿಕೊಳ್ಳುವ, ನವಜಾತ ಶಿಶುಗಳಿಗೆ ಅತ್ಯಾಧುನಿಕವಾದ ಆರೈಕೆಯನ್ನು ನೀಡಲಾಗುತ್ತದೆ. ಮದರ್ ಹುಡ್ ಹಾಸ್ಪಿಟಲ್ ನಲ್ಲಿನ ನಿಯೋನಾಟಲ್ ಕೇರ್ ಯೂನಿಟ್ (NICU) ಲೆವೆಲ್ III ಘಟಕವಾಗಿದೆ ಮತ್ತು ಮೈಸೂರು ಕೇಂದ್ರದಲ್ಲಿಯೂ ಇದೇ ಸೌಲಭ್ಯ ದೊರೆಯುತ್ತದೆ. ಇದುವರೆಗೆ ಮದರ್ ಹುಡ್ NICU 14,000 ಕ್ಕೂ ಅಧಿಕ ನವಜಾತ/ ಅವಧಿ ಪೂರ್ವ ಜನನ ಹೊಂದಿದ ಶಿಶುಗಳಿಗೆ ಚಿಕಿತ್ಸೆ ನೀಡಿದೆ. ಇವರಲ್ಲಿ ಶೇ.40 ಕ್ಕೂ ಹೆಚ್ಚು ಶಿಶುಗಳು ಕರ್ನಾಟಕದ ಕೊಪ್ಪಳ, ಹುಬ್ಬಳ್ಳಿ, ಚಿಕ್ಕಮಗಳೂರು, ಚಿತ್ರದುರ್ಗ, ಬಳ್ಳಾರಿ, ಹಾಸನ, ಗದಗ ಮತ್ತು ನೆರೆ ರಾಜ್ಯಗಳ ಅನಂತಪುರ, ಕಡಪಕ್ಕೆ ಸೇರಿದ್ದವಾಗಿವೆ. ಈ ಶಿಶುಗಳನ್ನು ನಿಯೋನಾಟಲ್ ಟ್ರಾನ್ಸ್ ಪೋರ್ಟ್ –`NICU ಆನ್ ವ್ಹೀಲ್ಸ್ ಮೂಲಕ ಕರೆ ತರಲಾಗಿತ್ತು.
“ಮಕ್ಕಳಿಗೆ ತಮ್ಮ ಭ್ರೂಣದ ಹಂತದಿಂದ ಅವರ ಹದಿಹರೆಯ ಮತ್ತು ಯುವ ಪ್ರೌಢಾವಸ್ಥೆಯವರೆಗೆ ನಿಖರವಾದ ರೋಗ ನಿರ್ಣಯ ಮತ್ತು ಚಿಕಿತ್ಸೆಯ ಅಗತ್ಯವಿದೆ. ಅದೇ ರೀತಿ, ಸ್ತ್ರೀಯರ ಆರೋಗ್ಯಕ್ಕೆ ಪ್ರೌಢಾವಸ್ಥೆಯಿಂದ ಹೆಣ್ತನ ಮತ್ತು ವೃದ್ಧಾಪ್ಯದ ಮೂಲಕ ಅವರ ಸಂತಾನೋತ್ಪತ್ತಿ ಆರೋಗ್ಯಕ್ಕೆ ವಿಶೇಷ ಕಾಳಜಿಯ ಅಗತ್ಯವಿದೆ. ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಿಯಮಿತ ಮೌಲ್ಯಮಾಪನಗಳು ಮತ್ತು ಸಕಾಲಿಕ ತಪಾಸಣೆಗಳು ನಿರ್ಣಾಯಕವಾಗಿರುತ್ತವೆ. ದುರಾದೃಷ್ಟವಶಾತ್, ಮಹಿಳೆಯರು ತಮ್ಮ ಸಂತಾನೋತ್ಪತ್ತಿ ಆರೋಗ್ಯವನ್ನು ನಿರ್ಲಕ್ಷಿಸುತ್ತಿದ್ದಾರೆ ಮತ್ತು ಅಗತ್ಯ ಬಿದ್ದಾಗ ಮಾತ್ರ ವೈದ್ಯರನ್ನು ಭೇಟಿ ಮಾಡುತ್ತಾರೆ. ನಮ್ಮ ಮೈಸೂರು ಆಸ್ಪತ್ರೆಯಲ್ಲಿ ಆರಂಭಿಕ ರೋಗನಿರ್ಣಯ ಮತ್ತು ಚಿಕಿತ್ಸೆಗಾಗಿ ತಡೆಗಟ್ಟಬಹುದಾದ ಸ್ತ್ರೀರೋಗ ಆರೋಗ್ಯ ತಪಾಸಣೆಗಳ ಪ್ರಾಮುಖ್ಯತೆಯ ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದ್ದೇವೆ’’ ಎಂದು ಮದರ್ ಹುಡ್ ಹಾಸ್ಪಿಟಲ್ಸ್ ನ ಸಿಇಒ ವಿಜಯರತ್ನ ವಿ. ತಿಳಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.