ಸೊಹಾರ್(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಒಮಾನ್ ಸೊಹಾರ್ ಝೋನ್ ವತಿಯಿಂದ ಮಾನವೀಯತೆಯ ಮಹಾನಾಯಕ ಎಂಬ ಧ್ಯೇಯ ವಾಕ್ಯದೊಂದಿಗೆ ಬ್ರಹತ್ ಮೀಲಾದ್ ಕಾನ್ಫರೆನ್ಸ್ ಹಾಗೂ ಇಹ್ಸಾನ್ ಕನ್ವೆನ್ಶನ್-2022 ನಾಳೆ ತಾರೀಕು 21-10-2022 ರ ಶುಕ್ರವಾರ ರಾತ್ರಿ ಫಲಜ್ ನ ಫುಡ್ ಸ್ಟುಡಿಯೋ ರೆಸ್ಟೋರೆಂಟ್ ಸಭಾಂಗಣದಲ್ಲಿ ನಡೆಯಲಿದೆ.
ಮಗ್ರಿಬ್ ನಮಾಝನ ನಂತರ ಇಕ್ಬಾಲ್ ಮದನಿಯವರ ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ಮತ್ತು ಮಕ್ಕಳ ಸಾಹಿತ್ಯ ವೇದಿಕೆ ನಡೆಯಲಿದೆ.
ಸಮಯ 8 ಗಂಟೆಗೆ KCF ಅಂತರಾಷ್ಟ್ರೀಯ ಸಮಿತಿಯ ಶಿಕ್ಶಣ ವಿಭಾಗದ ಕಾರ್ಯದರ್ಶಿಗಳಾಗ ಸೈಯಿದ್ ಆಬಿದ್ ಅಲ್ ಹೈದ್ರೋಸಿ ತಂಗಳ್ ರವರ ದುಆದೊಂದಿಗೆ ಪ್ರಾರಂಭವಾಗುವ ಸಭಾ ಕಾರ್ಯಕ್ರಮದಲ್ಲಿ ಸೊಹಾರ್ ಝೋನ್ ಅಧ್ಯಕ್ಷರಾದ ಉಮರುಲ್ ಫಾರೂಕ್ ಕುಕ್ಕಾಜೆಯವರು ಅಧ್ಯಕ್ಷತೆ ವಹಿಸಲಿದ್ದಾರೆ. ಸೊಹಾರ್ ಝೋನ್ ಮೀಲಾದ್ ಸ್ವಾಗತ ಸಮಿತಿಯ ಚೆಯರ್ಮೇನ್ ಆದ ಸಿದ್ದೀಕ್ ಮಾಬ್ಳಿ ಸುಳ್ಯ ರವರು ಸ್ವಾಗತ ಮಾಡಲಿದ್ದಾರೆ. ಕಾರ್ಯಕ್ರಮವನ್ನು ಉಮರ್ ಸಖಾಫಿ ಎಡಪ್ಪಾಲ ರವರು ಉಧ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಇಹ್ಸಾನ್ ಕರ್ನಾಟಕದ EO ಆದ ಮುಹಮ್ಮದ್ ಅನ್ವರ್ ಅಸ್ ಅದಿ ಉಸ್ತಾದರು ಮುಖ್ಯಪ್ರಭಾಷಣ ಮಾಡಲಿದ್ದಾರೆ. ಖ್ಯಾತ ಅರಬೀ ಮದ್ಹ್ ಹಾಡುಗಾರರಾದ ಮಜ್ದಿ ಅಲ್ ಬಲೂಷಿ ಸುಲ್ತಾನತ್ ಓಫ್ ಒಮಾನ್ ಇವರಿಂದ ಅರಬೀ ನಶೀದ ಮೂಡಿಬರಲಿದೆ.
ಮುಖ್ಯ ಅತಿಥಿಗಳಾಗಿ KCF ಒಮಾನ್ ಅಧ್ಯಕ್ಷರಾದ ಜನಾಬ್ ಅಯ್ಯೂಬ್ ಕೋಡಿ, KCF ಒಮಾನ್ ಪ್ರಧಾನ ಕಾರ್ಯದರ್ಶಿಗಳಾದ ಸ್ವಾದಿಕ್ ಹಾಜಿ ಸುಳ್ಯ, KCF ಒಮಾನ್ ಕೋಶಾಧಿಕಾರಿ ಆರಿಫ್ ಕೋಡಿ, KCF INC ಸಾಂತ್ವನ ವಿಭಾಗದ ಕಾರ್ಯದರ್ಶಿಗಳಾದ ಇಕ್ಬಾಲ್ ಬೊಳ್ಮಾರ್ ಬರ್ಕ, KCF INC ಇಹ್ಸಾನ್ ವಿಭಾಗದ ಕಾರ್ಯದರ್ಶಿಗಳಾದ ಹಂಝ ಹಾಜಿ ಕನ್ನಂಗಾರ್, DKSC ಒಮಾನ್ ಅಧ್ಯಕ್ಷರಾದ ಹಾಜಿ ಮೋನಬ್ಬ ಅಬ್ದುಲ್ ರಹ್ಮಾನ್, ಅಬ್ದುಲ್ ರಝಾಕ್ ಝೈನಿ, ಜನಾಬ್ ಮುಹಮ್ಮದ್ ರಫೀಕ್, ಜನಾಬ್ ಸಿಖಂದರ್ ಇಕ್ಬಾಲ್, ಜನಾಬ್ ರಫೀಕ್ ಚೆನ್ನೈ, KCF ಒಮಾನ್ ಸಂಘಟನಾಧ್ಯಕ್ಷರಾದ ಉಬೈದುಲ್ಲಾ ಸಖಾಫಿ ಮಿತ್ತೂರು, ಇಬ್ರಾಹೀಂ ಹಾಜಿ ಅತ್ರಾಡಿ, ಝುಬೈರ್ ಸಅದಿ ಪಾಟ್ರುಕೋಡಿ, ಕಲಂದರ್ ಬಾಷ ತೀರ್ಥಹಳ್ಳಿ, ಇಕ್ಬಾಲ್ ಎರ್ಮಾಳ್, ಇರ್ಫಾನ್ ಕೂರ್ನಡ್ಕ, ಮುಅಲ್ಲಿಮ್ ಹಬೀಬುಲ್ಲಾಹ್ ಅದನಿ, ಸಲೀಮ್ ಮಿಸ್ಬಾಯಿ, ಶಫೀಕ್ ಮಾರ್ನಬೈಲು, ಹುಸೈನ್ ತೀರ್ಥಹಳ್ಳಿ, ಜಸೀಮ್ ಅಹ್ಮದ್ ಹಾಗೂ ಇನ್ನಿತರ ಗಣ್ಯ ವೆಕ್ತಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.