ದುಬೈ(ವಿಶ್ವಕನ್ನಡಿಗ ನ್ಯೂಸ್): ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇ ರಾಷ್ಟೀಯ ಸಮಿತಿ ವತಿಯಿಂದ ಪರ್ಲ್ ಕ್ರೀಕ್ ಹೋಟೆಲ್ ಸಭಾಂಗಣದಲ್ಲಿ ನಡೆದ ಇಶ್ಕೇ ತ್ವಯ್ಬ 2022 ಬ್ರಹತ್ ಮೀಲಾದ್ ಸಮಾವೇಶವು ಮರ್ಕಜ್ ತಅಲೀಮುಲ್ ಇಹ್ಸಾನ್ ಮೂಳೂರು ಇದರ ಕಾರ್ಯಧ್ಯಕ್ಷರು ಡಿ.ಕೆ.ಎಸ್.ಸಿ ಜಿಲ್ಲಾ ಸಮಿತಿ ಅಧ್ಯಕ್ಷರೂ ಸಯ್ಯದ್ ಕೆ.ಎಸ್.ಆಟಕ್ಕೋಯ ತಂಘಳ್ ಕುಂಬೋಳ್ ಅವರ ಸುಪುತ್ರರು ಆದ ಸಯ್ಯದ್ ಅಹಮದ್ ಮುಖ್ತಾರ್ ತಂಘಳ್ ಕುಂಬೋಳ್ ಅವರ ನೇತೃತ್ವದಲ್ಲಿ ನಡೆಯಿತು. ಅಬ್ದುಲ್ ರಶೀದ್ ಹನೀಫಿ, ಹಮೀದ್ ಮುಸ್ಲಿಯಾರ್ ಮತ್ತು ಉಲಮಾ ತಂಡದಿಂದ ಮೌಲೂದ್ ಹಾಗು ಬುರ್ದಾ ಮಜ್ಲಿಸ್ ನಡೆಯಿತು.
ಮೀಲಾದ್ ಸಮಾವೇಶ ಇದರ ಸಭಾ ಕಾರ್ಯಕ್ರಮವು ಡಿ.ಕೆ.ಎಸ್.ಸಿ ಒರ್ಗನೈಷರ್ ಮುಹಮ್ಮದ್ ಅಶ್ರಫ್ ಅಹ್ಸನಿ ಅಲ್ ಅಪ್ಲಲಿ ಅವರ ಕಿರಾಹತ್ ನೊಂದಿಗೆ ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟೀಯ ಸಮಿತಿ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಸಜಿಪ ರವರು ಸ್ವಾಗತಿಸಿದರು. ಮುಈನುಸ್ಸುನ್ನ ಇದರ ನಿರ್ದೇಶಕರಾದ ಕೆ.ಎಂ.ಮುಸ್ತಫಾ ನಯೀಮಿ ಹಾವೇರಿ ಅವರು ಡಿ.ಕೆ.ಎಸ್.ಸಿ ಇದರ ಪ್ರವರ್ತನೆಯನ್ನು ಅನುಭವದೊಂದಿಗೆ ಸಭೆಗೆ ವಿವರಿಸುತ್ತಾ ಸಭೆಯನ್ನು ಉದ್ಘಾಟಿಸಿದರು. ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟೀಯ ಸಮಿತಿ ನೇತಾರರಾದ ಎಂ.ಇ.ಮೂಳೂರು ರವರು ತನ್ನ ಪ್ರಾಸ್ತಾವಿಕ ಭಾಷಣದಲ್ಲಿ ಡಿ.ಕೆ.ಎಸ್.ಸಿ ಬೆಳೆದು ಬಂದ ಬಗ್ಗೆ ವಿವರವಾಗಿ ವಿವರಿಸುತ್ತಾ ಮುಂದೆ ಡಿ.ಕೆ.ಎಸ್.ಸಿ ಗೆ ಇರುವ ಹಲವು ಯೋಜನಗಳ ಅಗತ್ಯತೆಯನ್ನು ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಗಳಾಗಿ ಆಗಮಿಸದ ಕರ್ನಾಟಕ ಸರಕಾರದ ಮಾಜಿ ಎಂ.ಎಲ್.ಸಿ ಹಾಗು ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷರೂ ಆದ ಹಾಜಿ.ಕೆ.ಎಸ್.ಮುಹಮ್ಮದ್ ಮಸೂದ್ ಅವರು ಡಿ.ಕೆ.ಎಸ್.ಸಿ ಬ್ರೋಷರ್ ಅನ್ನು ಬಿಡುಗಡೆಗೊಳಿಸದರು. ಈ ಸಭೆಯಲ್ಲಿ ಡಿ.ಕೆ.ಎಸ್.ಸಿ ವತಿಯಿಂದ ಹಾಜಿ.ಕೆ.ಎಸ್.ಮುಹಮ್ಮದ್ ಮಸೂದ್, ಡಿ.ಕೆ.ಎಸ್.ಸಿ ಸ್ಥಾಪಕ ಸದಸ್ಯರು ಪ್ರಸ್ತುತ ಡಿ.ಕೆ.ಎಸ್.ಸಿ ಜಿಲ್ಲಾ ಸಮಿತಿ ಕೋಶಾಧಿಕಾರಿಯೂ ಆದ ಹಾಜಿ. ಝಯಿನುದ್ದೀನ್ ಮುಕ್ವೆ ಹಾಗು ಶೇಖ್ ಖಲೀಫಾ ಮೆಡಿಕಲ್ ಸಿಟಿಯಲ್ಲಿ ಆರ್ಥೋಪೆಡಿಕ್ ಕನ್ಸಲ್ಟೆಂಟ್ ಆಗಿ ಸೇವೆಯನ್ನು ಮಾಡುತ್ತಿರುವ ವೈದ್ಯಕೀಯ ಸೇವೆನೆಯಲ್ಲಿ ಹಲವು ಪ್ರಶಸಿಗಳನ್ನು ಪಡೆದುಕೊಂಡಿರವ ನಮ್ಮ ಜೆಲ್ಲೆಯವರೇ ಆದ ಡಾ.ಇರ್ಷಾದ್ ವಾಹಿದ್ ಅಹ್ಮದ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಡಾ.ಇರ್ಷಾದ್ ರವರು ಡಿ.ಕೆ.ಎಸ್.ಸಿ ಸಂಘಟನೆಯು ಸಮಾಜದ ವಿದ್ಯಾಭ್ಯಾಸಕ್ಕಾಗಿ ಶ್ರಮಿಸುತ್ತಿರುವ ಸೇವೆಯನ್ನು ಶ್ಲ್ಯಾಘಿಸುತ್ತಾ ತಾನು ತಮ್ಮೊಂದಿಗೆ ಸದಾ ಸಹಕರಿಸುವ ಭರವಸೆಯನ್ನು ಈ ಸಂದರ್ಭದಲ್ಲಿ ನೀಡಿದರು.
ಈ ಮಹತ್ತರವಾದ ಮುತ್ತು ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈವ ಸಲ್ಲಮ ತಂಘಳ್ ರವರ ಜನ್ಮ ದಿನದ ಭಾಗವಾಗಿ ಮೀಲಾದ್ ಸಮಾವೇಶ ದಲ್ಲಿ ಇಶ್ಕೇ ತ್ವಯ್ಬಾ ಭಕ್ತಿನಿರಿತ ಪ್ರಭಾಷಣ ಹಾಗು ದುಃವಾ ವನ್ನು ಸಯ್ಯದ್ ಅಹಮದ್ ಮುಕ್ತಾರ್ ತಂಘಳ್ ರವರು ನೆರವೇರಿಸಿ ಸಭಿಕರ ಹ್ರದಯ ತಟ್ಟುವಂತೆ ಮಾಡಿತು. ವೇದಿಕೆಯಲ್ಲಿ ಡಿ.ಕೆ.ಎಸ್.ಸಿ ಸೆಂಟ್ರಲ್ ಕಮಿಟಿ ಉಪಾಧ್ಯಕ್ಷರಾದ ಹಾಜಿ.ಇಕ್ಬಾಲ್ ಕಣ್ಣಂಗಾರ್, ಡಿ.ಕೆ.ಎಸ್.ಸಿ ಸಲಹೆಗಾರರಾದ ಹಾಜಿ.ಅಬೂಸ್ವಾಲಿ ಮಂಗಳೂರು, .ಡಾ.ಮುಹಮ್ಮದ್ ಹಾಶೀರ್, ಡಿ.ಕೆ.ಎಸ್.ಸಿ ಉಪಾದ್ಯಕ್ಷರದ ಅಬ್ದುಲ್ ಲತೀಫ್ ಮುಲ್ಕಿ, ಕೆ.ಸಿ.ಎಫ್. ನೇತಾರರಾದ ಅಬ್ದುಲ್ ಅಝೀಝ್ ಅಹ್ಸನಿ , ಅಬ್ದುಲ್ ಅಝೀಝ್ ಲತೀಫಿ, ಇಬ್ರಾಹಿಂ ಮದನಿ ಉಸ್ತಾದ್ ದಾರನ್ನೂರು ಕಾಶಿಪಟ್ನ ನೇತಾರರಾದ ಶಂಸುದ್ದೀನ್ ಸೂರಲ್ಪಾಡಿ, ಕೆ.ಐ.ಸಿ ನೇತಾರರಾದ ಷರೀಫ್ ಕೊಡ್ನೀರ್ ರವರು ಉಪಸ್ಥಿತರಿದ್ದರು.
ಅಕ್ಬರ್ ಅಲಿ ಸುರತ್ಕಲ್ ಅವರು ಡಿ.ಕೆ.ಎಸ್.ಸಿ ಹಾಡನ್ನು ಹಾಡಿದರು.ಕಾರ್ಯಕ್ರಮ ನಿರ್ವಹಣೆಯನ್ನು ಷರೀಫ್ ಬೊಲ್ಮಾರ್ ಹಾಗು ವಹಾಬ್ ಕಂಚಿಲ್ ಕುಂಜ ರವರು ನೆರವೇರಿಸಿದರು. ಯೂಸುಫ್ ಅರ್ಲಪದವು ಧನ್ಯವಾದ ಸಮರ್ಪಿಸಿದರು. ಕಾರ್ಯಕರ್ಮವು ಮೀಲಾದ್ ಸ್ವಾಗತ ಸಮಿತಿ ನೇತಾರರಾದ ಶುಕೂರ್ ಮಣಿಲ, ಇಸ್ಮಾಯಿಲ್ ಬಾಬಾ, ಇಬ್ರಾಹಿಂ ಹಾಜಿ ಕಿನ್ಯ , ಶಮೀರ್ ಕೊಳ್ನಾಡ್, ಲತೀಫ್ ತಿಂಗಳಾಡಿ , ನಜಿರ್ ಕುಪ್ಪಟ್ಟಿ, ಸಿದ್ದಿಕ್ ಉಳ್ಳಾಲ ಶಬೀರ್ ಕೊಳ್ನಾಡ್, ರಫೀಕ್ ಸತ್ತಿಕಲ್, ರಿಯಾಜ್ ಮೂಡುತೋಟ, ತೌಫಿಕ್ ಕುಂದಾಪುರ, ರಪೀಕ್ ಮುಲ್ಕಿ, ಅಬ್ದುಲ್ಲಾ ಪೆರುವಾಯಿ, ಸುಲೈಮಾನ್ ಮೂಳೂರು, ಮುಹಮ್ಮದಲಿ ಮೂಡುತೋಟ ಹಾಗು ರಾಷ್ಟ್ರಿಯ ಸಮಿತಿ ಮತ್ತು ಯುನಿಟ್ ನೇತಾರರ ಉಸ್ತುವಾರಿಯಲ್ಲಿ ನಡೆಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.