⏩ ಪ್ರಾರ್ಥನೆಗೆ ಮನವಿ ⏩ ಸಹಪಾಠಿಗಳಿಂದ ವಿಶೇಷ ದುಆಃ ⏩ ಮುಅಲ್ಲಿಂ ಸ್ಟಾಫ್ ಕೌನ್ಸಿಲ್ ಹಾಗೂ SKSBV ಯಿಂದ ಸಹಾಯಧನ ವಿತರಣೆ
(www.vknews.in) : ಮುಹಮ್ಮದ್ ಸುಫಿಯಾನ್.. ಮಾಡನ್ನೂರು ಮದ್ರಸದ ಒಂದನೇ ತರಗತಿಯ ವಿದ್ಯಾರ್ಥಿ. ಸಮಸ್ತ ಸಂಘಟನೆಗಳಲ್ಲಿ ಹಾಗೂ ಸಾಮಾಜಿಕ ಸೇವೆಗಳಲ್ಲಿ ತನ್ನನ್ನು ತಾನೇ ತೊಡಗಿಸಿಕೊಂಡ ಸಕ್ರೀಯ ಕಾರ್ಯಕರ್ತ ಝುಬೈರ್ ಕೊಳಂಬೆಯವರ ಮಗ. ಕಳೆದ ಕೆಲವು ದಿನಗಳಿಂದ ರಕ್ತದ ಅರ್ಬುಧಕ್ಕೆ ತುತ್ತಾಗಿ ಇದೀಗ ಪಾಂಡಿಚೇರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾನೆ. ಆರೋಗ್ಯವಂತನಾಗಿದ್ದ ಸುಫಿಯಾನ್ ದಿನನಿತ್ಯವೂ ತಪ್ಪದೇ ಮದರಸಕ್ಕೆ ಬರುತ್ತಿದ್ದ.
ಈ ಕಳೆದ ಸೆಪ್ಟೆಂಬರ್ 22ನೇ ತಾರೀಕಿನಂದು ಕೊನೆಯದಾಗಿ ಮದರಸಕ್ಕೆ ಬಂದಿದ್ದು, ಆ ತನಕ ನಡೆದ 102 ಮದರಸ ಅಧ್ಯಯನ ದಿನಗಳಲ್ಲಿ 99 ದಿನವೂ ಬಂದಿದ್ದ. ಕಲಿಕೆಯಲ್ಲೂ ಜಾಣನಿದ್ದ. ಇದ್ದಕ್ಕಿದ್ದಂತೆ ಜ್ವರ ಬರಲಾರಂಭಿಸಿ ಉಲ್ಬಣಗೊಂಡು, ಇನ್ನಿತರ ರೋಗ ಲಕ್ಷಣಗಳು ಒಮ್ಮಿಂದೊಮ್ಮೆಲೆ ಪ್ರತ್ಯಕ್ಷಗೊಂಡು ಪರೀಕ್ಷೆಗೊಳಪಡಿಸಿದಾಗ ರಕ್ತದ ಅರ್ಬುಧ ಪತ್ತೆಯಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಪಾಂಡಿಚೇರಿಯ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಕೀಮೋಥೆರಾಫಿ ನಡೆಯುತ್ತಿದೆ. ಮೂಳೆಯ ಅಸ್ತಿಮಜ್ಜೆಯ ಪರೀಕ್ಷೆಯೂ ನಡೆದಿದ್ದು, ಫಲಿತಾಂಶವು ಧನಾತ್ಮಕವಾಗಿ ಬಂದಿದ್ದು ಸಮರೋಪಾದಿಯಲ್ಲಿ ಚಿಕಿತ್ಸೆ ನಡೆಯುತ್ತಿದೆ.
ಅಡುಗೆ ಕೆಲಸ ಮಾಡಿ ಸಿಗುವ ವೇತನದಿಂದ ಕುಟುಂಬವನ್ನು ಮುನ್ನಡೆಸುತ್ತಿದ್ದ ಝುಬೈರ್ ಎಲ್ಲಾ ಕೆಲಸ ಕಾರ್ಯಗಳನ್ನು ಬಿಟ್ಟು ಪತ್ನಿ ಸಮೇತ ಪಾಂಡಿಚೇರಿಯಲ್ಲಿ ನೆಲೆಸಿ ಸರ್ವವನ್ನು ಸಮರ್ಪಿಸಿ ಪುಟ್ಟ ಮಗನು ಶೀಘ್ರ ಗುಣಮುಖವಾಗಲು ಕಾಯುತ್ತಿದ್ದು, ತಮ್ಮೆಲ್ಲರ ದುಆಃ- ಪ್ರಾರ್ಥನೆ ಗಳನ್ನು ಬೇಡುತ್ತಿದ್ದಾರೆ. ಎಲ್ಲರೂ ದುಆಃ ಮಾಡಬೇಕಾಗಿ ಮಾಡನೂರ್ ಮದರಸ ಮುಅಲ್ಲಿಂ ಕೌನ್ಸಿಲ್ ವಿನಂತಿಸುತ್ತಿದೆ. ಮಾಡನೂರ್ ಮಖಾಂ ಶರೀಫಿನಲ್ಲಿ ವಿಶೇಷ ಝಿಯಾರತ್ ನಡಸಿ ಮದರಸಾದ ಪುಟಾಣಿ ಮಕ್ಕಳು ತಮ್ಮ ಸಹಪಾಠಿ ಶೀಘ್ರ ಗುಣಮುಖನಾಗಿ ತರಗತಿಗೆ ಬಂದು ಸೇರಿಕೊಳ್ಳಲಿ ಎಂದು ಪ್ರಾರ್ಥಿಸಿದರು.
ಸಹಾಯಧನ ವಿತರಣೆ: ಸ್ವಾಭಿಮಾನದ ಬದುಕು ಕಟ್ಟಿ ಜೀವನ ಸಾಗಿಸುತ್ತಿರುವ ಝುಬೈರ್ ತನ್ನಲ್ಲೇನಾದರೂ ಇದ್ದರೆ ಕೊಡುವ ಮನಸ್ಸಿನ ಉದಾರಿ. ಕಳೆದ ಎರಡು ತಿಂಗಳಿನಿಂದ ಯಾವುದೇ ವರಮಾನವಿಲ್ಲದೆ ಇದ್ದದ್ದೆಲ್ಲವನ್ನು ಮಗನಿಗಾಗಿ ವ್ಯಯಿಸಿ, ಯಾರಲ್ಲೂ ಕೇಳದೆ ಇರುವ ಝುಬೈರ್ ನ ಪರಿಸ್ಥಿತಿಯನ್ನು ಅರಿತ ಮಾಡನ್ನೂರು ಮದರಸ ಅಧ್ಯಾಪಕರ ಒಕ್ಕೂಟ ಹಾಗೂ ಮದರಸಾ ವಿದ್ಯಾರ್ಥಿಗಳ ಸಂಘಟನೆ SKSBV ಒಟ್ಟು ಸೇರಿ 16,000/- ರೂಪಾಯಿಯ ಸಹಾಯಧನವನ್ನು ರೋಗಿಯ ಸಹೋದರ ಮದ್ರಸದ 4ನೇ ತರಗತಿ ವಿದ್ಯಾರ್ಥಿ ಮುಹಮ್ಮದ್ ಸುವೈದ್ ಮೂಲಕ ನೀಡಿದರು.
ಈ ಸಂದರ್ಭದಲ್ಲಿ ಮದ್ರಸ ಮುಖ್ಯ ಉಪಾಧ್ಯಾಯರಾದ ಅಮೀರ್ ಅರ್ಶದಿ, ಖತೀಬ್ ಉಸ್ತಾದ್ ಸಿರಾಜುದ್ದೀನ್ ಫೈಝಿ, ಇಬ್ರಾಹಿಮ್ ಝುಹ್ರೀ, ಇಬ್ರಾಹಿಮ್ ಸಅದಿ, ಹಮೀದ್ ಫೈಝಿ, ಮುಅಝ್ಝಿನ್ ಅಬೂಬಕ್ಕರ್ ಮುಸ್ಲಿಯಾರ್ ಹಾಗು SKSBV ಅಧ್ಯಕ್ಷ ಮುಹಮ್ಮದ್ ಅನಸ್, ಕಾರ್ಯದರ್ಶಿ ಸದಖತ್ತುಲ್ಲಾ, ಕೋಶಾದಿಕಾರಿ ಮುಹಮ್ಮದ್ ಶೌನಿ ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಗಳು ಹಾಜರಿದ್ದರು.
ಅಡ್ಮಿನ್ ಡೆಸ್ಕ್ SKSBV. NIM ಮಾಡನ್ನೂರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.