(ವಿಶ್ವ ಕನ್ನಡಿಗ ನ್ಯೂಸ್) : ನಿತ್ಯ ಆಹಾರ ನೀಡುತಿದ್ದ ವ್ಯಕ್ತಿಯೋರ್ವರು ಮೃತಪಟ್ಟಾಗ ಅವರನ್ನು ಎಬ್ಬಿಸಲು ಕೋತಿ ನಡೆಸಿದ ಪ್ರಯತ್ನ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೃದಯ ವಿದ್ರಾವಕ ದೃಶ್ಯವು ಶ್ರೀಲಂಕಾದ ಬ್ಯಾಟಿಕಲೋವಾದಲ್ಲಿ ನಡೆದಿದೆ. ಪೀತಾಂಬರಂ ರಾಜನ್(56) ಈ ಕೋತಿಗೆ ನಿತ್ಯವೂ ಆಹಾರ ನೀಡುತ್ತಿದ್ದರು.
ಪೀತಾಂಬರಂ ರಾಜನ್ ಅವರ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕೆ ಮನೆಯೊಳಗೆ ಇಟ್ಟಾಗ ಕೋತಿ ಪೀತಾಂಬರನ ಪಕ್ಕಕ್ಕೆ ಬಂದಿತ್ತು. ಕೋತಿಯು ಮೃತದೇಹದ ಬಳಿ ಜಿಗಿದು ಪೀತಾಂಬರಂ ಉಸಿರಾಡುತ್ತಿದೆಯೇ ಎಂದು ಅವರ ಮುಖದ ಮೇಲೆ ಕೈಯಿಟ್ಟು ನಂತರ ಮುಖಕ್ಕೆ ಹೊಡೆದು ಎಬ್ಬಿಸಲು ಪ್ರಯತ್ನಿಸಿತು.
ಪೀತಾಂಬರರು ಈ ಕೋತಿಗೆ ಕೆಲಕಾಲ ನಿಯಮಿತವಾಗಿ ಆಹಾರ ನೀಡಿದ್ದರು. ಈ ಕಾರಣಕ್ಕಾಗಿಯೇ ಪ್ರೀತಿಯ ವ್ಯಕ್ತಿಯನ್ನು ಕೊನೆಯ ಬಾರಿಗೆ ನೋಡಲು ಕೋತಿ ಧಾವಿಸಿತು. ಕೋತಿ ಪೀತಾಂಬರ ಅವರ ಶವದ ಬಳಿ ಬಹಳ ಹೊತ್ತು ಕುಳಿತು ನೋಡಿದವರೆಲ್ಲರ ಕಣ್ಣಲ್ಲಿ ನೀರು ತರಿಸಿತು.
A monkey pays tribute after the death of its feeding master in #Batticaloa மட்டக்களப்பில் உணவு வழங்கிய எஜமான் உயிரிழந்ததையடுத்து அஞ்சலி செலுத்திய குரங்கு #lka #Srilanka pic.twitter.com/4ucQijenas — Priyatharshan 🌏 (@priyatharshan1) October 19, 2022
A monkey pays tribute after the death of its feeding master in #Batticaloa
மட்டக்களப்பில் உணவு வழங்கிய எஜமான் உயிரிழந்ததையடுத்து அஞ்சலி செலுத்திய குரங்கு #lka #Srilanka pic.twitter.com/4ucQijenas
— Priyatharshan 🌏 (@priyatharshan1) October 19, 2022
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.