(ವಿಶ್ವ ಕನ್ನಡಿಗ ನ್ಯೂಸ್) : ಸರ್ಕಾರಿ ಶಾಲೆ ಎಂದರೆ ನಮಗಂಥೂ ನೆಚ್ಚಿನ ಶಾಲೆ, ಅದರಲ್ಲಿ ಕನ್ನಡ ಮಾಧ್ಯಮದಲ್ಲಿ ಓದುವ ಪ್ರತಿಯೊಬ್ಬರು ತಮ್ಮದೇ ಅಭಿಮಾನವನ್ನು ಹೊಂದಿರುವದು ಸಹಜ. ನಾನು ಕೂಡ ಕನ್ನಡ ಮಾದ್ಯಮದಲ್ಲಿ ಓದಿರುವುದರಿಂದ ಅಭಿಮಾನ ಹೆಚ್ಟೆಚ್ಚು ಎಂದು ಹೇಳಬಹುದುˌ ಕನ್ನಡ ಮಾಧ್ಯಮದಲ್ಲಿ ಓದಿರುವ ಪ್ರತಿಯೊಬ್ಬರು ಸರ್ಕಾರಿ ಶಾಲೆಯ ಬಗ್ಗೆ ಹೆಮ್ಮೆ ಪಡುವಂತಹ ವಿಷಯ ಅಲ್ಲವೆ..?
ಕನ್ನಡ ಶಾಲೆಗಳನ್ನು ಹಾಜರಾತಿ ಕಡಿಮೆ ಇದೆ ಎಂದು ಮುಚ್ಚುವ ಬದಲು ಬಡ ವರ್ಗದ ಹಾಗೂ ಮಧ್ಯಮ ವರ್ಗದ ಪಾಲಿಗೆ ಆಶಾದಾಯಕವಾದ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಲಿಸುವ ಮೂಲಕ ಅವರಿಗೆ ಸ್ಫೂರ್ಥಿದಾಯಕವಾಗಬೇಕೆ ಹೊರತು, ಇಲ್ಲ ಸಲ್ಲದ ಕಾರಣ, ನೆಪಗಳನ್ನು ಒಡ್ಡುತಾ ಸರ್ಕಾರಿ ಶಾಲೆಗಳನ್ನೇ ಮುಚ್ಚುವ ಹಂತಕ್ಕೆ ಬರುವುದು ಯಾವ ನ್ಯಾಯ..? ಇತರೆ ನಮ್ಮ ನೆರೆಯ ಹೊರೆಯ ರಾಜ್ಯಗಳು ಸರ್ಕಾರಿ ಶಾಲೆಗಳನ್ನೇ ಯಾವ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲದಂತೆ ನಡೆಸುತ್ತಿರುವಾಗ ನಮ್ಮ ಕರ್ನಾಟಕದಲ್ಲಿ ಮೂಲ ಸೌಲಭ್ಯಗಳಿಗೆ ಯಾವ ಕೊರತೆ ಇದೆ ಎನ್ನುವುದು ವೈಚಾರಿಕ ನಿಲುವು.
ಕೇಂದ್ರ ಸರ್ಕಾರದಿಂದ ನೀಡುವ ಸಹಕಾರದಿಂದ ಉತ್ತಮ ಯೋಜನೆಗಳನ್ನು ರೂಪಿಸಿಕೊಂಡು ಇಡೀ ಖಾಸಗಿ ಶಾಲೆಗಳಿಗೆ ಸಾವಿರಾರು ಕೋಟಿಗಟ್ಟಲೇ ಹಣ ವ್ಯರ್ಥ ಮಾಡುವ ಬದಲು ಎಲ್ಲ ವರ್ಗದವರು ಸರ್ಕಾರಿ ಶಾಲೆಗಳಿಗೆ ಸೇರಿಸಿದರೆ ಉತ್ತಮ. ಈ ಮೊದಲು ಶಾಲೆಗಳಿಗೆ ಮಕ್ಕಳು ಬರಲು ಪ್ರಮುಖ ಕಾರಣದ ಜೊತೆಗೆ ಅನೇಕ ಉತ್ತಮ ಸೌಲಭ್ಯದ ಜೊಜೊತೆಗೆ ವಾತಾವರಣವನ್ನು ಶಿಕ್ಷಕರು ನಿರ್ಮಿಸುವುದು ತವರ ಸೇವಾ ಗೌಣ್ಯ.
ಆದರ್ಶ ವಿದ್ಯಾರ್ಥಿಗಳಾಗಬೇಕೆಂದರೆ ಆಯಾ ಶಾಲೆಯ ವಾತಾವರಣಕ್ಕೆ ತಕ್ಕಂತೆ ಬೋಧನಾ ವ್ಯವಸ್ಥೆ ಸುಸಜ್ಜಿತವಾಗಿರಬೇಕು ಎಂಬುದು ನನ್ನ ಅಭಿಮತ. ಏತನ್ಮಧ್ಯೆ ಸುಸಂದೇಶದ ಜೊತೆಗೆ ಶಿಸ್ತು ಕೂಡ ಎಲ್ಲಕಿಂತ ಅತ್ಯಗತ್ಯ. ಮಕ್ಕಳ ಪೂರಕ ಬೆಳವಣಿಗೆಗೆ ಉತ್ತಮ ಪೌಷ್ಠಿಕಾಂಶಗಳು ಮುಖ್ಯವಾಗಿವೆ. ಗ್ರಾಮೀಣ ಭಾಗದ ಮಕ್ಕಳು ಬಹು ದೂರದಿಂದ ಕಾಲ್ನಡಿಗೆಯಲ್ಲಿಯೇ ಬಂದು ಶಾಲೆಯನ್ನು ಸೇರುವುದು ಅಲ್ಲಲ್ಲಿ ಈಗಲೂ ಕಂಡು ಬರುತ್ತಿದೆ. ಹೀಗಾಗಿ ಮನೆಯಲ್ಲಿ ಊಟವನ್ನು ಮಾಡದೆ ಶಾಲೆಗೆ ಹೆಜ್ಜೆಯನ್ನು ಹಾಕುತ್ತಾರೆ. ಪಾಲಕರ ಮನೆಯ ಸಮಸ್ಯೆಗಳಿಂದ ಮಕ್ಕಳಿಗೆ ಕೂಲವೊಂದು ಸಾರಿ ಊಟವನ್ನೇ ಮಾಡಿಸಿರದ ಸ್ಥಿತಿಗಳು ನಿರ್ಮಾಣವಾಗಿವೆ.
ಜೊತೆಗೆ ಮನೆಯಲ್ಲಿ ತಮ್ಮದೇ ಆದ ಸಮಸ್ಯೆಗಳನ್ನು ಹೊದಿರುತ್ತಾರೆ. ಅದಕ್ಕಾಗಿ 2002-03ರಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಒಂದು ತಿಂಗಳಿಗೆ ತಲಾ 3 ಕೆ.ಜಿ. ಅಕ್ಕಿಯನ್ನು ಪ್ರತೀ ತಿಂಗಳು ನೀಡಲಾಗುತ್ತಿತ್ತು. ತದನಂತರದಲ್ಲಿ ರಾಜ್ಯ ಸರ್ಕಾರವು ಮಧ್ಯಾಹ್ನದ ಉಪಹಾರ ಯೋಜನೆ ಕಾರ್ಯಕ್ರಮವನ್ನು 2002-03ರಲ್ಲಿ ಮೊದಲ ಹಂತದಲ್ಲಿಯೇ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳ 1 ರಿಂದ 5 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಬಿಸಿಯೂಟ ಪ್ರಾರಂಭಿಸಲಾಯಿತು. ಇದು ಯಶಸ್ವೀಯಾದ ನಂತರ 2007-08ರಲ್ಲಿ ಈ ಯೋಜನೆಯನ್ನು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೂ ವಿಸ್ತರಿಸಲಾಯಿತು.
ಇದರಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳೆಲ್ಲರಿಗೂ ಮಧ್ಯಾಹ್ನ ಉಪಹಾರವನ್ನು ಒದಗಿಸಲಾಯಿತು. ಮಧ್ಯಾಹ್ನದ ಉಪಹಾರ ಯೋಜನೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷಿಯಾಗಿರುವದು ಎಲ್ಲರಿಗೂ ತಿಳಿದ ವಿಷಯ.ಶಾಲಾ ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆಗೆ ಮಕ್ಕಳ ಭೌತಿಕ, ದೈಹಿಕ, ಮಾನಸಿಕ ಸಮರ್ಥ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರೆ ಬಹುತೇಕ ತಪ್ಪಾಗಲಾರದು.
ಅಲ್ಲದೆ ಮಧ್ಯಾಹ್ನ ಬಿಸಿಯೂಟ ನೀಡುವುದರಿಂದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಕ್ಯಾಲೋರಿ ಹಾಗೂ 13.80 ಗ್ರಾಂ ಪ್ರೋಟೀನನ್ನು ಉನ್ನತ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಕ್ಯಾಲೋರಿ ಮತ್ತು 21 ಗ್ರಾಂ. ಪೋಟೀನನ್ನು ಒಳಗೊಂಡಂತೆ ಪೌಷ್ಠಿಕಾಂಶವು ದೊರೆಯುತ್ತದೆ. ಇದರ ಜೊತೆಗೆ ಶಾಲೆ ಬಿಟ್ಟ ಮಕ್ಕಳನ್ನು ಗಮನ ಸಳೆಯಲು 2013-14ರಲ್ಲಿ 1 ರಿಂದ 10 ನೇ ತರಗತಿ ಓದುತ್ತಿರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಎಲ್ಲಾ ಮಕ್ಕಳಗೆ 18 ಗ್ರಾಂ ಕೆನೆಭರಿತ ಹಾಲಿನ ಪುಡಿಯಿಂದ ತಯಾರಿಸಿದ 150 ಮಿ.ಲೀ. ಹಾಲನ್ನು ವಾರದಲ್ಲಿ 03 ದಿನ (ಒಂದು ದಿನ ಬಿಟ್ಟು ಒಂದು ದಿನ ) ನೀಡುವ ಯೋಜನೆಯನ್ನು ಸೆಪ್ಟಂಬರ್ ೧ ರಂದು ಕ್ಷೀರಭಾಗ್ಯ ಯೋಜನೆಗೆ ರಾಜ್ಯಾದ್ಯಂತ ಚಾಲನೆ ನೀಡಿದರು. ಮಧ್ಯಾಹ್ನ ಬಿಸಿಯೂಟದ ಜೊತೆಗೆ ಹೆಚ್ಚುವರಿ ಪೌಷ್ಟಿಕಾಂಶವುಳ್ಳ ಮಾತ್ರೆಗಳನ್ನು ಸಹ ನೀಡಲಾಗುತ್ತಿದೆ.
ಇದನ್ನು Karnataka Drugs Logistics and Warehousing Society’ ಯ ಸಹಯೋಗದೊಂದಿಗೆ ಸರಬರಾಜು ಮಾಡಲಾಗುವುದು.ಇನ್ನು ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮವನ್ನು 2006-07ನೇ ಸಾಲಿನಿಂದ ಹಮ್ಮಿಕೊಂಡಿದ್ದು, ೧ ರಿಂದ 10 ನೇ ತರಗತಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಯನ್ನು ಮಾಡುವುದು, ರಾಜ್ಯದಲ್ಲಿ ಈಗಾಗಲೇ ಸ್ವಯಂ ಸೇವಾ ಸಂಸ್ಥೆಗಳು ಮಧ್ಯಾಹ್ನ ಉಪಹಾರ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಇದರಲ್ಲಿ ರಾಜ್ಯದ 15ಜಿಲ್ಲೆಗಳಲ್ಲಿ ಸ್ವಯಂ ಸೇವಾ ಸಂಸ್ಥೆಗಳು ತಮ್ಮದೇ ಆದ 82 ಅಡುಗೆ ಕೇಂದ್ರಗಳನ್ನು ಹೊಂದಿದ್ದು, ರಾಜ್ಯದಲ್ಲಿ ಪ್ರಸ್ತುತ 80 ಸ್ವಯಂ ಸೇವಾ ಸಂಸ್ಥೆಗಳಿದ್ದು, 1 ರಿಂದ 10ನೇ ತರಗತಿಯವರೆಗಿನ 11,57,833 ವಿದ್ಯಾರ್ಥಿಗಳಿಗೆ ಬಿಸಿಯೂಟವನ್ನು ನೀಡುತ್ತಿದೆ.
ಅದರಲ್ಲಿ ಅಕ್ಷಯ ಪಾತ್ರ ಫೌಂಡೇಶನ್, ಬೆಂಗಳೂರು. ಅದಮ್ಯ ಚೇತನ, ಬೆಂಗಳೂರು ಹಾಗೂ ಅಖಿಲ ಕರ್ನಾಟಕ ಕನ್ನಡ ಕಸ್ತೂರಿ ಕಲಾ ಸಂಘ, ಬೆಂಗಳೂರು ಸಹಯೋಗದಿಂದ ನಡೆಯುತ್ತಿದೆ. ಇಷ್ಟೆಲ್ಲ ಯೋಜನೆಗಳನ್ನು ಮಾಡಿರುವ ಸರ್ಕಾರದಲ್ಲಿ ಕಡಿಮೆ ಹಾಜರಾತಿ, ಕಡಿಮೆ ಮಕ್ಕಳು ಸೇರುತ್ತಾರೆ ಎನ್ನುವ ಮಾತು ನಿಜಕ್ಕೂ ವಿಷಾದನೀಯ ಸಂಗತಿಯಾಗಿದೆ. ಅದೆನೇರಲಿ ಮದುರೈನಲ್ಲಿ ಇದೇ ತಿಂಗಳು ತಮಿಳುನಾಡಿನಲ್ಲಿ ಬೆಳಗಿನ ಉಪಾಹಾರವನ್ನೂ ಸಹ ಶಾಲೆಗಳಲ್ಲಿ ನೀಡಲು ಆರಂಭಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಉಪಾಹಾರ ಯೋಜನೆಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ರವರು ಚಾಲನೆ ನೀಡಿದ್ದು ಪ್ರಸ್ತುತ ಶಾಲಾ ಮಕ್ಕಳಿಗೆ ಹೊರೆಯನ್ನು ಕಡಿಮೆಗೊಳಿಸಿದಂತಾಗಿದೆ.
ಒಮ್ಮೆ ಸಮಾರಂಭದಲ್ಲಿ ಮಕ್ಕಳು ತಿಂಡಿ ತಿನ್ನದೇ ಶಾಲೆಗೆ ಬರೋದು ನೋಡಿದ್ದ ಪರಿಣಾಮವಾಗಿ ಇವರು ಈ ಯೋಜನೆಯನ್ನು ಜಾರಿಗೊಳಿಸಿದರು ಎಂಬ ಬಲವಾದ ಕಾರಣವು ಇದೆ. ಈ ಉಪಾಹಾರ ಯೋಜನೆಯಿಂದ ಬಡ ಮಕ್ಕಳಲ್ಲಿ ವಿಟಮಿನ್ ಕೊರತೆಯನ್ನು ಕಡಿಮೆಮಾಡಿ, ಉತ್ತಮ ಆರೋಗ್ಯ ಒದಗಿಸುವಲ್ಲಿ ಸಹಾಯವಾಗುತ್ತದೆ. ಈ ಯೋಜನೆಯಿಂದ ಮಕ್ಕಳು ಶಾಲೆಗೆ ಬರಲು ಪ್ರೇರೇಪಿಸುತ್ತದೆ ಎಂದು ಒತ್ತಿ ಹೇಳಿದರು.ಈ ಯೋಜನೆಯನ್ನು 33.56 ಕೋಟಿ ರೂಗಳಲ್ಲಿ ಪ್ರಾರಂಭಿಸಲಾಗಿದ್ದು. 1,545 ಶಾಲೆಗಳಲ್ಲಿ ಕಾರ್ಯಗತಗೊಳಿಸಲಾಗಿದೆ. ೧೯೫೫ ರಲ್ಲಿ ತಮಿಳುನಾಡಿನ ಆಗಿನ ಮುಖ್ಯಮಂತ್ರಿ ಕೆ.ಕಾಮರಾಜ್ ಅವರು ಮಧ್ಯಾಹ್ನದ ಬಿಸಿಯೂಟಕ್ಕೆ ಚಾಲನೆ ನೀಡಿದ್ದರು.
– ಜ್ಯೋತಿ.ಜಿ(ಉಪನ್ಯಾಸಕಿ ಮೈಸೂರು)
ಇಷ್ಟಲ್ಲಾ ಸವತ್ತುಗಳ ಮೂಲಕ ಸರ್ಕಾರಿ ಶಾಲೆಗಳನ್ನು ಉತ್ತಮ ಹಂತಕ್ಕೆ ಕೊಂಡೂಯ್ಯಲಾಗಿದೆ.ನಮ್ಮ ಕರ್ನಾಟಕದಲ್ಲಿಯೂ ಕೇಂದ್ರ ಸರ್ಕಾರ ಹಾಗೂ ಸರ್ಕಾರದಿಂದ ಅನುದಾನಿತ ಶಾಲೆಗಳಲ್ಲಿ ಉಪಹಾರದ ಜೊತೆಗೆ ಬಿಸಿಯೂಟ ಯೋಜನೆಯನ್ನು ಜಾರಿಗೊಳಿಸಲಾಗಿದೆ.ಆದರೆ ಸಂಪೂರ್ಣವಾಗಿ ಚಾಲ್ತಿಯಾದಾಗ ಮಾತ್ರ ಅದು ಸಾಧ್ಯ. ಅಳಿವಿನ ಅಂಚಿನಲ್ಲಿರುವ ಸರ್ಕಾರಿ ಶಾಲೆಗಳನ್ನು ಉಳಿಸುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ. ಸರ್ಕಾರ ಆದಷ್ಟು ಉತ್ತಮ ಸೌಲಭ್ಯಗಳನ್ನು ಒದಗಿಸುವಲ್ಲಿ ಮತ್ತು ಎಲ್ಲಾ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವ ಹಾಗೆ ಮಾಡುವುದೇ ಎಂಬ ನಿರೀಕ್ಷೆಯಲ್ಲಿ ರಾಜ್ಯದ ಜನರದ್ದಾಗಿದೆ. ಹೀಗಾಗಿ ತಜ್ಞರಿಂದ ಶೋಧಿಸಿ, ಪರಿಶೀಲಿಸಿ ಶಾಲಾ ಮಕ್ಕಳಿಗೆ ಬೆಳಗಿನ ಉಪಹಾರ ಬೇಕೋ ಬೇಡವೋ ಎಂಬ ತೀರ್ಮಾನದ ಯೋಚಿತ ಯೋಜನೆ ಅನುಷ್ಟಾನಗೊಂಡರ ಒಳಿತು ಎಂಬ ಅಭಿಮತ ನಮ್ಮದಾಗಿ.
– ಜ್ಯೋತಿ ಜಿ, ಮೈಸೂರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.