ಚಿಕ್ಕಬಳ್ಳಾಪುರ,(ವಿಶ್ವ ಕನ್ನಡಿಗ ನ್ಯೂಸ್): ಕರ್ನಾಟಕ ರಾಜ್ಯದಲ್ಲಿ 25-30 ಸಾವಿರ ಕಾಟೇಜ್ ಬೇಸಿನಗಳಿವೆ ಅದರಲ್ಲಿ ಶೇಕಡಾ 10% ಮಾತ್ರ ಸ್ವಯಂ ಚಾಲಿತ ರೀಲಿಂಗ್ ಯಂತ್ರಗಳಿವೆ ಇನ್ನುಳಿದಂತೆ ಶೇ.90% ಸ್ವಯಂ ತಂತ್ರಜ್ಞಾನವನ್ನು ಹೊಂದಿ ರೇಷ್ಮೆ ನೂಲು ಉತ್ಪಾದನೆ ಮಾಡುತ್ತಿದ್ದಾರೆ ಸರ್ಕಾರ ಸಣ್ಣ ಮತ್ತು ಮಧ್ಯಮ ರೀಲರ್ಸ್ಗಳಿಗೆ ಆರ್ಥಿಕ ನೆರವು ನೀಡಿ ತಂತ್ರಜ್ಞಾನವನ್ನು ಮೇಲ್ದಜೇಗೇರಿಸಿ ಗುಣಮಟ್ಟದ ರೇಷ್ಮೆ ಉತ್ಪಾದನೆಗೆ ಅನುಕೂಲ ಕಲ್ಪಿಸಬೇಕೆಂದು ರಾಜ್ಯ ರೇಷ್ಮೆ ನೂಲು ಬಿಚ್ಚಾಣಿಕೆದಾರರ ಮುಖಂಡ ಮೊಹ್ಮದ್ ಅನ್ವರ್ ಆಗ್ರಹಿಸಿದ್ದಾರೆ.
ಸಿಲ್ಕ್ ಅಸೋಸಿಯೇಷನ್ ಆಫ್ ಇಂಡಿಯಾದ ಆಶ್ರಯದಲ್ಲಿ ಬೆಂಗಳೂರಿನಲ್ಲಿ ಭಾರತೀಯ ರೇಷ್ಮೆ ಕೃಷಿ ಪ್ರಸ್ತುತ ಸ್ಥಿತಿ ಮತ್ತು ಭವಿಷ್ಯದ ಸವಾಲುಗಳ ಕುರಿತು ರಾಷ್ಟ್ರೀಯ ಸೆಮಿನಾರ್ನಲ್ಲಿ ದೇಶದ ವಿಭಿನ್ನ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿ ರೇಷ್ಮೆ ಉದ್ಯಮದ ಅಭಿವೃಧ್ಧಿಗೆ ಸಂಬಂಧಿಸಿದಂತೆ ವಿಚಾರಗಳನ್ನು ಮಂಡಿಸಿದ್ದಾರೆ ಸಂಘಟನೆಯ ಅಧ್ಯಕ್ಷ ವಿ.ಬಾಲಾಸುಭ್ರಮಣ್ಯಂ, ಗೌರವಾಧ್ಯಕ್ಷ ಸಿ.ನಾರಾಯಣಸ್ವಾಮಿ, ಕಾರ್ಯದರ್ಶಿ ಎಂ.ರಾಮಚಂದ್ರಗೌಡ ಹಾಗೂ ಖಜಾಂಚಿ ಮುಸ್ತಫಾ ಅಲೀಖಾನ್ ಅವರ ನಾಯಕತ್ವದಲ್ಲಿ ನಡೆದ ಸೆಮಿನಾರ್ನಲ್ಲಿ ಎಲ್ಲರು ಅತ್ಯುತ್ತಮವಾಗಿರುವ ವಿಷಯಗಳನ್ನು ಮಂಡಿಸಿ ಸರ್ಕಾರದ ಗಮನಸೆಳೆಯುವ ಕೆಲಸವನ್ನು ಮಾಡಿದ್ದಾರೆ ಎಂದರು.
ಪ್ರತಿನಿತ್ಯ ರೇಷ್ಮೆ ಗೂಡು ಖರೀದಿಗೆ 15 ಕೋಟಿ ರೂಗಳು ಬಂಡವಾಳ ಅಗತ್ಯವಾಗಿದೆ ಪ್ರಸ್ತುತ ಮಾರುಕಟ್ಟೆಯಲ್ಲಿ ರೇಷ್ಮೆ ನೂಲು ಮತ್ತು ಗೂಡಿಗೆ ಗುಣಮಟ್ಟವನ್ನು ಆಧರಿಸಿ ದರ ನಿಗದಿಪಡಿಸಬೇಕು ಜೊತೆಗೆ ರೇಷ್ಮೆ ಉದ್ಯಮದ ಮಾರುಕಟ್ಟೆ ವ್ಯವಸ್ಥೆಯನ್ನು ಬಲಪಡಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ಅವರು ದೇಶದಲ್ಲಿ ಪ್ರತಿವರ್ಷ ರೇಷ್ಮೆ ಉದ್ಯಮದಲ್ಲಿ ತೊಡಗಿರುವ ಬೆಳೆಗಾರರಿಗೆ ಉತ್ಪಾದನೆ ಮಾಡುವ ಪ್ರತಿ ಗೂಡಿಗೆ ಗ್ರಾಮ ಗ್ರಾಮ ಲೆಕ್ಕ ಹಾಕಿ 4 ಸಾವಿರ ಕೋಟಿ ರೂಗಳನ್ನು ಪಾವತಿ ಮಾಡುವ ವ್ಯವಸ್ಥೆ ಯಾವುದಾದರೂ ಒಂದು ಉದ್ಯಮ ಇದೆ ಅಂದರೇ ಅದು ರೇಷ್ಮೆ ಉದ್ಯಮ ಮಾತ್ರ ಈ ಉದ್ಯಮವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ವಾರ್ಷಿಕ 15 ಸಾವಿರ ಕೋಟಿ ವಹಿವಾಟು ನಡೆಯುತ್ತಿದೆ ಕರ್ನಾಟಕದಲ್ಲಿ ಪ್ರತಿನಿತ್ಯ ರೇಷ್ಮೆ ನೂಲು ಬಿಚ್ಚಾಣಿಕೆದಾರರು ಗೂಡು ಖರೀದಿ ಮಾಡಿ ರೇಷ್ಮೆ ಬೆಳೆಗಾರರಿಗೆ 10-15 ಕೋಟಿ ರೂಗಳ ಹಣವನ್ನು ಪಾವತಿ ಮಾಡುತ್ತಿದ್ದಾರೆ ರಾಜ್ಯದಲ್ಲಿ ರೇಷ್ಮೆ ನೂಲು ಬಿಚ್ಚಾಣಿಕೆದಾರರು, ರೇಷ್ಮೆ ಬೆಳೆಗಾರರು, ನೇಕಾರರು, ಹುರಿಕಾರರು ಸೇರಿದಂತೆ ಸರಿಸುಮಾರು 5 ಲಕ್ಷ ಜನ ರೇಷ್ಮೆ ಉದ್ಯಮವನ್ನು ನೆಚ್ಚಿಕೊಂಡು ಜೀವನವನ್ನು ನಡೆಸುತ್ತಿದ್ದಾರೆ ಕಳೆದ 10 ವರ್ಷಗಳ ಅವಧಿಯಲ್ಲಿ ರೀಲರ್ಸ್ಗಳಿಗೆ ಕ್ರೇಡಿಟ್ ಫ್ಲೋ ಆಗಿಲ್ಲವೆಂದು ದೂರಿದರು.
ಕೇಂದ್ರ ಸರ್ಕಾರ ಚೀನಾ ದೇಶದಿಂದ 4 ಸಾವಿರ ಮೆಟ್ರಿಕ್ ಟನ್ ರೇಷ್ಮೆಯನ್ನು ಆಮದು ಮಾಡಿಕೊಳ್ಳುತ್ತಿದೆ ಆದರೆ ಸರ್ಕಾರ ಗುಣಮಟ್ಟದ ರೇಷ್ಮೆ ಗೂಡು ಉತ್ಪಾದನೆ ಮಾಡಲು ಒತ್ತು ನೀಡಿ ಸಣ್ಣ ರೇಷ್ಮೆ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ವರ್ಗದ ರೀಲರುಗಳಿಗೆ ಬಂಡವಾಳಕ್ಕಾಗಿ ಆರ್ಥಿಕ ನೆರವು ನೀಡುವ ಜೊತೆಗೆ ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸುವ ಕ್ರಮಗಳು ಕೈಗೊಂಡರೇ ಚೀನಾ ದೇಶದಿಂದ ರೇಷ್ಮೆ ಆಮದು ಮಾಡಿಕೊಳ್ಳುವ ವ್ಯವಸ್ಥೆ ತಪ್ಪುತ್ತದೆ ಎಂದರು.
ಸರ್ಕಾರ ಮೊದಲು ಒಂದು ಕೆಜಿ ರೇಷ್ಮೆ ನೂಲಿಗೆ 70 ರೂಗಳ ಪ್ರೋತ್ಸಾಹಧನವನ್ನು ನೀಡುತ್ತಿತ್ತು ಆದರೆ ಕಳೆದ ಮಾರ್ಚ ತಿಂಗಳಲ್ಲಿ 30 ರೂಗಳನ್ನು ನೀಡುವುದಾಗಿ ಹೇಳಿದೆ ಆದರೆ 30 ರೂಗಳ ಪ್ರೋತ್ಸಾಹಧನ ಪಡೆಯಲು 60 ರೂಪಾಯಿ ಖರ್ಚು ಮಾಡುವ ಸ್ಥಿತಿ ನಿರ್ಮಾಣವಾಗಿದ್ದು ಹೀಗಾಗಿ ಇದುವರೆಗೆ ರಾಜ್ಯದಲ್ಲಿ ರೇಷ್ಮೆ ಪ್ರೋತ್ಸಾಹಧನ ಪಡೆಯಲು ಯಾರೂ ಮುಂದಾಗುತ್ತಿಲ್ಲ ಈ ಯೋಜನೆಯಿಂದ ಯಾರೂ ಸಹ ಪ್ರೋತ್ಸಾಹಧನವನ್ನು ಪಡೆದಿಲ್ಲ ಸರ್ಕಾರ ಕೂಡಲೇ ಒಂದು ಕೆಜಿಗೆ ನೂಲಿಗೆ ಕನಿಷ್ಠ ನೂರುಗಳ ಪ್ರೋತ್ಸಾಹಧನವನ್ನು ನಿಗದಿಪಡಿಸಿ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯಿಂದ ರೇಷ್ಮೆ ಖರೀದಿ ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸಿ ಅದಕ್ಕಾಗಿ 30 ಕೋಟಿ ರೂಗಳ ಅನುದಾನವನ್ನು ಮೀಸಲಿಡಬೇಕು ಜೊತೆಗೆ ಕೆಎಸ್ಎಂಬಿ ಮೂಲಕ ವರ್ಷಾದ್ಯಂತ ರೇಷ್ಮೆಯನ್ನು ಅಡ ಇಟ್ಟುಕೊಂಡು ಹಣ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು
ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಮಳೆಯ ಪ್ರಭಾವದಿಂದಾಗಿ ರಾಮನಗರದಲ್ಲಿ ರೇಷ್ಮೆ ಉದ್ಯಮದಲ್ಲಿ ತೊಡಗಿರುವ ನೂಲು ಬಿಚ್ಚಾಣಿಕೆದಾರರು ಮಳೆಯ ಆರ್ಭಟಕ್ಕೆ ಮನೆಮಠ ಹಾಗೂ ಆಸ್ತಿಯನ್ನು ಕಳೆದುಕೊಂಡಿದ್ದಾರೆ ಆದರೆ ಸರ್ಕಾರ ಇದುವರೆಗೆ ಅವರಿಗೆ ಪರಿಹಾರವನ್ನು ನೀಡಲು ಮುಂದಾಗಿಲ್ಲ ಕೂಡಲೇ ಅವರಿಗೆ ಪರಿಹಾರ ನೀಡಿ ರೇಷ್ಮೆ ಉದ್ದಿಮೆಯಲ್ಲಿ ಮತ್ತೊಮ್ಮೆ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದ ಅವರು 2011 ರೀಲರ್ಸ್ಗಳಿಗೆ ಬಡ್ಡಿರಹಿತ ಸಾಲ ನೀಡುವ ಯೋಜನೆಯನ್ನು ಘೋಷಣೆ ಮಾಡಲಾಗಿತ್ತು ಆದರೆ ಯೋಜನೆಯ ಕೇವಲ ಘೋಷಣೆಗೆ ಸೀಮಿತವಾಗಿದೆ ಅನುಷ್ಠಾನಕ್ಕೆ ಬಂದಿಲ್ಲ ಜೊತೆಗೆ 2016-17ನೇ ಆಯವ್ಯಯದಲ್ಲಿ ರೀಲರ್ಸ್ಗಳ ಅಭಿವೃದ್ಧಿಗಾಗಿ 167 ಕೋಟಿ ರೂಗಳ ಹಣವನ್ನು ಮೀಸಲಿಟ್ಟರು ಅದರಿಂದಲೂ ಸಹ ಯಾರಿಗೂ ಒಂದು ರೂಪಾಯಿಯ ಅನುಕೂಲ ಆಗಿಲ್ಲ ಎಂದು ದೂರಿದರು
ಬಾಕ್ಸ್: ದೇಶದಲ್ಲಿ ಉತ್ಪಾದನೆಯಾಗುವ ರೇಷ್ಮೆ ಬೈಪ್ರಾಡಕ್ಟ್ಸ್ನ 2 ರಿಂದ 3 ಸಾವಿರ ಕೋಟಿ ರೂಗಳ ವಹಿವಾಟು ಆಗುತ್ತಿದೆ ಚೀನಾ ದೇಶ ಈ ಉತ್ಪನ್ನಗಳನ್ನು ಖರೀದಿ ಮಾಡಿ ಯೂರೋಪ್ ಮತ್ತಿತರರ ರಾಷ್ಟ್ರಗಳಿಗೆ ರಫ್ತು ಮಾಡಿ ಆದಾಯವನ್ನುಗಳಿಸುತ್ತಿದೆ ಅದನ್ನು ನಮ್ಮ ದೇಶದಲ್ಲಿ ಅಭಿವೃಧ್ಧಿಗೊಳಿಸಿದರೆ ಅದರ ಮೂಲಕವೂ ಶೇ.25 ಲಾಭ ಹೆಚ್ಚಾಗುತ್ತದೆ ಅದರಿಂದ ನಿರುದ್ಯೋಗಿ ಸಮಸ್ಯೆ ನಿವಾರಣೆ ಮಾಡುವ ಜೊತೆಗೆ ರೇಷ್ಮೆ ಬೆಳೆಗಾರರಿಗೆ ಇದರಿಂದ ಅನುಕೂಲವಾಗುತ್ತದೆ.
ವರದಿ: ತೇ.ಮೀಂ.ಅನ್ಸಾರಿ ಚಿಕ್ಕಬಳ್ಳಾಪುರ
ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.