ಮಲಪ್ಪುರಂ (ವಿಶ್ವ ಕನ್ನಡಿಗ ನ್ಯೂಸ್) : ಮೂರು ಮತ್ತು ನಾಲ್ಕು ವರ್ಷದ ಮಕ್ಕಳು ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಿರೂರಿನಲ್ಲಿ ನಡೆದಿದೆ. ಸಾಯನ್ ನೌಶಾದ್ ಮತ್ತು ನಜಿಲಾ ದಂಪತಿಯ ಪುತ್ರ ಅಮನ್ ಸಯಾನ್ (3) ಮತ್ತು ರಶೀದ್-ರೈಹಾನತ್ ದಂಪತಿಯ ಪುತ್ರಿ ರಿಯಾ (4) ಮೃತಪಟ್ಟವರು. ಮನೆ ಸಮೀಪದ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ. ಮನೆಯಲ್ಲಿ ಊಟ ಮಾಡುತ್ತಿದ್ದ ಮಕ್ಕಳು ಏಕಾಏಕಿ ಹೊರಗೆ ಹೋಗಿದ್ದಾರೆ ಎಂದು ವರದಿಯಾಗಿದೆ.
ಮಕ್ಕಳು ನಾಪತ್ತೆಯಾದ ಬಳಿಕ ಕೆರೆಗೆ ಬಿದ್ದು ಶವವಾಗಿ ಪತ್ತೆಯಾಗಿದ್ದಾರೆ. ಮೃತ ದೇಹಗಳನ್ನು ತಿರೂರ್ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಊಟ ಮಾಡುತ್ತಿದ್ದ ಮಕ್ಕಳು ಕೆರೆ ಬಳಿ ಹೇಗೆ ಬಂದರು ಎಂಬುದು ನಿಗೂಢವಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.