ಹೈದರಾಬಾದ್ (ವಿಶ್ವ ಕನ್ನಡಿಗ ನ್ಯೂಸ್) : ಟಿ ಆರ್ ಎಸ್ ನ ನಾಲ್ಕು ಶಾಸಕರಿಗೆ ಪಕ್ಷ ಬದಲಿಸಲು ಬಿಜೆಪಿ ಹಣದ ಆಮಿಷ ಒಡ್ಡಿರುವ ವಿಚಾರವು ಚರ್ಚೆಯಲ್ಲಿರುವಾಗಲೇ, ಶಾಸಕರು ಹಾಗು ಸ್ವಾಮೀಜಿಯೊಬ್ಬರು ಮಾತಾಡಿರುವ ಆಡಿಯೋ ವೈರಲ್ ಆಗಿದೆ.
ಶಾಸಕ ರೋಹಿತ್ ರೆಡ್ಡಿ ಹಾಗು ರಾಮಚಂದ್ರ ಭಾರತಿ ಸ್ವಾಮೀಜಿ ಸಂಭಾಷಣೆ ನಡೆಸಿರುವ ಈ ಆಡಿಯೋದಲ್ಲಿ, ನೀವು ಬಿಜೆಪಿಗೆ ಸೇರಿದರೆ ನಮ್ಮ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಇಡಿ ಹಾಗೂ ಸಿಬಿಐ ದಾಳಿಗಳು ಆಗದಂತೆ ನೋಡಿಕೊಳ್ಳುತ್ತಾರೆ. ಇನ್ನಿಬ್ಬರು ಶಾಸಕರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ. ನವೆಂಬರ್ 2ರಂದು ಹೈದರಾಬಾದ್ ಗೆ ಬಂದಾಗ ಹೆಸರು ಬಹಿರಂಗಪಡಿಸುತ್ತೇನೆ ಎಂದು ಸ್ವಾಮೀಜಿ ಜೊತೆ ಮಾತನಾಡಿರುವ ಆಡಿಯೋ ಲೀಕ್ ಆಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.