(www.vknews.in) ವಿಟ್ಲ ನೀರಕ್ಕಣಿ ಇಸ್ಮಾಈಲ್ ಮಾಸ್ಟರ್ ಆಕಸ್ಮಿಕ ಮರಣದ ಸುದ್ಧಿ ಕೇಳಿಬಂದಾಗ ದಿಗ್ಭ್ರಮೆಯಾಗಿತ್ತು. ಅವರು ನಡೆದು ಕೊಂಡು ಹೋಗುತ್ತಿದ್ದಾಗ ಯಾರೋ ಒಬ್ಬನ ಬುಲೆಟ್ ಬೈಕ್ ಡಿಕ್ಕಿಯಾಗಿ ತಲೆಗೆ ಮಾರಣಾಂತಿಕ ಗಾಯದಿಂದಾಗಿ ಮರಣ ಸಂಭವಿಸಿತ್ತು.
ನಾನು ಮತ್ತು ಬೇಕಲ್ ಉಸ್ತಾದರ ಪುತ್ರ ಸಾಲಿಹ್ ದೇರಳಕಟ್ಟೆಯ ಕಣಚೂರು ಆಸ್ಪತ್ರೆಗೆ ಹೋಗಿ ಅವರ ಪಾರ್ಥಿವ ಶರೀರವನ್ನು ನೋಡಿದೆವು. ಆ ಮಯ್ಯಿತ್ ನೋಡಿದಾಗ ನನಗೆ ಎಲ್ಲಿಲ್ಲದ ತಳಮಳ. ಎಷ್ಟೇ ಇದ್ದರೂ ದುನ್ಯಾ ಇಷ್ಟೇ ಎಂಬ ಭಾವ ನನ್ನನ್ನು ತೀರಾ ಕಾಡಿತು. ಬೆಳಿಗ್ಗೆ ಎದ್ದು ನೀಟಾಗಿ ಡ್ರೆಸ್ ಹಾಕಿಕೊಂಡು ಹೋಗಿದ್ದ ಮನುಷ್ಯ, ಹೆಚ್ಚೇನೂ ಪ್ರಾಯವಿಲ್ಲದ ಉತ್ತಮ ಮೈಕಟ್ಟಿನ ಪಿ. ಟಿ. ಮಾಸ್ಟರ್ ಆಸ್ಪತ್ರೆಯ ಮೋರ್ಚರಿಯಲ್ಲಿ ಮಯ್ಯಿತಾಗಿ ಮಲಗಿದ್ದು ಕಂಡಾಗ ಜಗತ್ತೇ ನೀರಸ ಎಂದೆನಿಸಿತ್ತು. ಬಹಳ ಒಳ್ಳೆಯ ವ್ಯಕ್ತಿತ್ವದವರಾಗಿದ್ದರು. ನನ್ನ ಮಕ್ಕಳ ನೆಚ್ಚಿನ ಪಿ.ಟಿ. ಮಾಸ್ಟರ್ ಕೂಡಾ ಆಗಿದ್ದ ಅವರು ಮತ್ತು ನನ್ನ ಗೆಳೆತನ ಬಹಳ ಕಾಲದಿಂದ ಇತ್ತು. ಅಲ್ ಅನ್ಸಾರ್, ಮದರಂಗಿ, ಮೊಯಿಲಾಂಜಿ ಮುಂತಾದ ನಮ್ಮ ಪತ್ರಿಕೆಗಳ ಅಭಿಮಾನಿ ಕೂಡಾ ಆಗಿದ್ದು ಹಲವಾರು ಚಂದಾದಾರರನ್ನು ಮಾಡಿಕೊಟ್ಟಿದ್ದರು. ನನ್ನ ಮಗಳ ಮದುವೆಗೂ ಬಂದಿದ್ದರು. ದೇರಳ ಕಟ್ಟೆ ಪಬ್ಲಿಕ್ ಸ್ಕೂಲ್ ನಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ವಿದ್ಯಾರ್ಥಿಗಳಿಗೂ ತುಂಬಾ ಆತ್ಮೀರಾದ ಮೇಸ್ಟರಾಗಿದ್ದರು. ಅವರ ಆಕಸ್ಮಿಕ ಅಗಲಿಕೆ ತುಂಬಾ ಜನರಿಗೆ ದುಖದ ವಾರ್ತೆಯಾಗಿದೆ. ನನಗೆ ಓರ್ವ ಆತ್ಮೀಯ, ಸಹೃದಯ ಸ್ನೇಹಿತ ನಷ್ಟವಾಗಿದ್ದಾರೆ. ಅಲ್ಲಾಹು ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ. ಮಗ್ಫಿರತ್, ಮರ್ಹಮತ್ ನೀಡಿ ಅನುಗ್ರಹಿಸಲಿ, ಅವರ ಕುಟುಂಬಕ್ಕೆ ಆಘಾತವನ್ನು ತಾಳಿಕೊಳ್ಳುವ ಶಕ್ತಿ ನೀಡಲಿ, ಆಮೀನ್ ಎಂದು ಆತ್ಮಾರ್ಥವಾಗಿ ಪ್ರಾರ್ಥಿಸುತ್ತಿದ್ದೇನೆ. ಡಿ. ಐ. ಅಬೂಬಕರ್ ಕೈರಂಗಳ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.