(www.vknews.in)ಮಂಗಳೂರು ಮಹಾನಗರ ಪಾಲಿಕೆಯ ತಾರೀಕು 29 ಅಕ್ಟೋಬರ್ ನ ಪರಿಷತ್ ಸಭೆಯಲ್ಲಿ ಶಿವಾಜಿ ಪುತ್ತಳಿ ಯನ್ನು ಪಂಪ್ವೆಲ್ ವೃತ್ತದಲ್ಲಿ ಸ್ಥಾಪನೆ ಗೊಳಿಸಬೇಕು ಎಂದು ಸ್ಥಳೀಯ ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಭರತ್ ಶೆಟ್ಟಿ ಪ್ರಸ್ತಾವನೆ ಸಲ್ಲಿಸುತ್ತಿದ್ದು ಇದಕ್ಕೆ ಸಾರ್ವಜನಿಕ ವಿರೋಧವಿದೆ ಮತ್ತು ಹಾಲಿ ವಿರೋಧ ಪಕ್ಷ ಸದ್ರಿ ಪ್ರಸ್ತಾವನೆಯನ್ನು ವಿರೋಧಿಸ ಬೇಕಿದೆ , ಆ ಸ್ಥಾನದಲ್ಲಿ ಕರ್ನಾಟಕ,ಕನ್ನಡ ಭಾಷೆ,ಸಂಸ್ಕೃತಿ ಉಳಿವಿನ ಭಾಗವಾಗಿ, ಮಂಗಳೂರು ಸುಂದರ ನಗರೀಕರಣದ ಭಾಗವಾಗಿಯೂ, ಮನಪಾ, ಮಂಗಳೂರಿನ ಪ್ರತಿಷ್ಠಿತ ಪಂಪ್ವೆಲ್ ಆವೃತ್ತಕ್ಕೆ ಕರ್ನಾಟಕದ ಹೆಮ್ಮೆಯ ಪುತ್ರ,ಅವಿಭಜಿತ ಮೈಸೂರು ರಾಜ್ಯದ ನಿವಾಸಿ,ಕನ್ನಡ ಭಾಷಾ ಹೋರಾಟಗಾರ,ಕವಿ,ಸಾಹಿತಿ,ಗಡಿನಾಡ ಕನ್ನಡಿಗ ಕಯ್ಯಾರ ಕಿಞ್ಞಣ್ಣ ರೈ ಅವರ ಪುತ್ತಳಿಯನ್ನು ಸ್ಥಾಪಿಸಬೇಕು ಎಂದು ಮಾಜಿ ಮೇಯರ್ ಕೆ.ಅಶ್ರಫ್ ಅಭಿಪ್ರಾಯ ಪಟ್ಟಿದ್ದಾರೆ. ಕಯ್ಯಾರ ಕಿಞ್ಞಣ್ಣ ರೈ ಅವರು ಕರ್ನಾಟಕ ಏಕೀಕರಣ ಸಮಿತಿ ಯ ಪರವಾಗಿ ಅಹನಿರ್ಶಿ ದುಡಿದ ಓರ್ವ ಸೇನಾನಿ ಆಗಿದ್ದಾರೆ. ಕರ್ನಾಟಕದ ಸಂಸ್ಕೃತಿ,ಭಾಷೆ,ನುಡಿ ಯ ಪರ ತನ್ನ ಅಂತಿಮ ಉಸಿರು ಇರುವವರೆಗೂ ಹೋರಾಟ ಮಾಡಿದ ಮೇಧಾವಿ ಆಗಿದ್ದು ಅವರ ಸವಿ ನೆನಪಿಗೆ ಮಂಗಳೂರು ನಗರ ಪಾಲಿಕೆ ಅವರ ಪುತ್ತಳಿ ಸ್ಥಾಪಿಸಿ ಗೌರವ ನೀಡಬೇಕಿದೆ. ಮನಪಾ ಪರಿಷತ್ ಸಭೆಯಲ್ಲಿ ಶಿವಾಜಿ ಪುತ್ತಳಿ ಸ್ಥಾಪನೆ ವಿಷವನ್ನು ಪ್ರಸ್ತಾವನೆ ಸಲ್ಲಿಸುವುದು ಕನ್ನಡಿಗರಿಗೆ ಮಾಡುವ ಅನ್ಯಾಯವಾಗಿದೆ.ಬೆಳಗಾವಿ ಗಡಿಯಲ್ಲಿ ಕನ್ನಡದ ದ್ವಜ,ಸಂಸ್ಕೃತಿ ಗಳನ್ನು ನಾಶಪಡಿಸುವ ಪ್ರಯತ್ನ ನಡೆಯುತ್ತಿದ್ದರೂ ಮಂಗಳೂರಿನ ಕೆಲವು ಅಧಿಕಾರ ಧಾಹಿ ಜನಪ್ರತಿನಿಧಿಗಳು ರಾಜ್ಯದ ಜನರ ಭಾವನೆಗಳ ಮೇಲೆ ಚೆಲ್ಲಾಟ ವಾಡುವುದು ಖಂಡನೀಯ. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ತೀವ್ರ ಹೋರಾಟ ನಡೆಸಲಾಗುವುದು.
ಕೆ.ಅಶ್ರಫ್(ಮಾಜಿ ಮೇಯರ್) ಮಂಗಳೂರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.