(ವಿಶ್ವ ಕನ್ನಡಿಗ ನ್ಯೂಸ್) : ಮಂಗಳೂರು ಮಹಾನಗರ ಪಾಲಿಕೆಯ ಇಂದಿನ ಪರಿಷತ್ ಸಭೆಯಲ್ಲಿ ನಡೆದ ಸುರತ್ಕಲ್ ವೃತ್ತಕ್ಕೆ ನಾಮಕರಣ ವಿಷಯದಲ್ಲಿ ಚರ್ಚೆ ನಡಯುವ ಸಂದರ್ಬದಲ್ಲಿ ಸುರತ್ಕಲ್ ವ್ಯಾಪ್ತಿಯ ನಗರ ಪಾಲಿಕೆ ಸದಸ್ಯರಾದ ಶ್ವೇತಾ ಪೂಜಾರಿ ಅವರು ವಿನಾ ಕಾರಣ ಟಿಪ್ಪು ಸುಲ್ತಾನ್ ರವರ ಹೆಸರನ್ನು ಎಳೆದು ಹಾಕಿ ಅವ್ಯಾಚ್ಯ ಶಬ್ದ ಬಳಕೆ ಮಾಡಿದ್ದು, ಸಂವಿಧಾನ ವಿರೋಧಿ ನಡೆಯಾಗಿದೆ. ಶ್ವೇತಾ ಪೂಜಾರಿ ರವರು ಇಂದು ಪರಿಷತ್ ಸಭೆಯಲ್ಲಿ ಟಿಪ್ಪು ಅವರ ವಿಷಯ ಪ್ರಸ್ತಾವನೆ ಇಲ್ಲದಿದ್ದರೂ ಟಿಪ್ಪು ಸುಲ್ತಾನ್ ರವರನ್ನು ಅವ್ಯಾಚ್ಯ ಪದ ಬಳಕೆ ಮಾಡಿದ್ದು ಖಂಡನೀಯ.
ಅವರ ಈ ನಡೆ ಪರಿಷತ್ ನಿಯಮಕ್ಕೆ ವಿರೋಧ. ಟಿಪ್ಪು ಸುಲ್ತಾನ ರವರು ಓರ್ವ ಚಾರಿತ್ರಿಕ ವ್ಯಕ್ತಿ, ಅವರ ಬಗ್ಗೆ ಶ್ವೇತಾ ಅವರಿಗೆ ಸಹಮತ ಇಲ್ಲದಿದ್ದರೆ ಅವರು ಮಾಡಿದ ಪದ ಬಳಕೆ ನೈತಿಕ ಶಬ್ದದ ಇತಿ ಮಿತಿ ಯೊಳಗೆ ಇರಬೇಕಿತ್ತು. ಶ್ವೇತಾ ಪೂಜಾರಿ ಅವರು ತಕ್ಷಣ ತಮ್ಮ ವರ್ತನೆಯನ್ನು ಅರಿತು ಸಾರ್ವಜನಿಕ ಕ್ಷಮೆ ಯಾಚಿಸಬೇಕು. ಅವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು.
ಕೆ.ಅಶ್ರಫ್( ಮಾಜಿ ಮೇಯರ್) ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.