(www.vknews.in) : ದ.ಕ. ಜಿಲ್ಲೆಯ ವಿದ್ಯಾಪ್ರೇಮಿಗಳ ಅಭಿಮಾನದ ಸಂಕೇತವಾಗಿರುವ ನೂರುಲ್ ಹುದಾದಲ್ಲಿ ನಾಲ್ಕು ದಿನಗಳ ಕಾಲ ನಡೆಯುತ್ತಿರುವ ವಿದ್ಯಾರ್ಥಿ ಫೆಸ್ಟ್ ನೂರ್ ಶೋ ಎಂಬ ಅಮೋಘ, ಅತ್ಯಾಕರ್ಷಕ ಕಾರ್ಯಕ್ರಮ ಇಂದು ಶುಭಾರಂಭಗೊಳ್ಳಲಿದೆ. ನಾಡಿನ ಮತ್ತು ಪರವೂರ ಆಸಕ್ತರಯ ಕಾತರದಿಂದ ಕಾಯುತ್ತಿದ್ದ ಆ ಶುಭದಿನಗಳು ಆಸನ್ನವಾದ ಈ ಸಂದರ್ಭದಲ್ಲಿ ನಾಡಿನೆಲ್ಲೆಡೆ ಸಂಭ್ರಮದ ವಾತಾವರಣ ನೆಲೆಸಿದೆ. ಮಾಡನ್ನೂರು ನೂರುಲ್ ಅಂದರೆ ಹಾಗೇನೆ, ಅದರ ಎಲ್ಲಾ ಕಾರ್ಯಕ್ರಮಗಳೂ ವಿಶೇಷ, ವೈವಿಧ್ಯಮಯ, ಜ್ಞಾನೋದ್ದೀಪಕ, ಪಂಡಿತ- ಪಾಮರ ಬೇಧಮನ್ಯೆ ಸರ್ವರಿಗೂ ಅತ್ಯಾಕರ್ಷಕ.
ಇದೀಗ ಶುಭಾರಂಭಗೊಂಡು ನಾಲ್ಕು ದಿನಗಳ ಕಾಲ ಸಾವಿರಾರು ಪ್ರೇಕ್ಷಕರಿಗೆ ಅಮೋಘ ರಸದೌತಣ ನೀಡುತ್ತಿರುವ ನೂರ್ ಶೋ ವಿದ್ಯಾರ್ಥಿ ಫೆಸ್ಟ್ ಕೂಡಾ ಜಿಲ್ಲೆಯಲ್ಲಿ, ರಾಜ್ಯದಲ್ಲಿ ಎಲ್ಲೂ ಕಾಣಸಿಗದ ಅತಿ ವಿಶಿಷ್ಠ ಕಾರ್ಯಕ್ರಮಗಳೊಂದಿಗೆ ಜನಮನದಲ್ಲಿ ಉಲ್ಲಾಸದ ಸಿಂಚನಗೆರೆಯುತ್ತಿದೆ. ಚಿಂತನೆಗೆ ಹಚ್ಚುತ್ತದೆ. ಜ್ಞಾನದ, ಬುದ್ಧಿಶಕ್ತಿಯ, ಚತುರತೆಯ, ಚಾಣಾಕ್ಷತನದ ಒಳಸುಳಿಗಳನ್ನು ತೆರೆದು ಕಣ್ಮನ ಅರಳಿಸಿ ಹೃನ್ಮನ ಉದ್ದೀಪನಗೊಳ್ಳುವಂತಹ ಅತಿ ವಿಶಿಷ್ಠವಾದ ಅತ್ಯಮೋಘ ಕಾರ್ಯಕ್ರಮಗಳು. ಕಣ್ಣಿಗೆ ಹಬ್ಬವೂ ಕಿವಿಗೆ ಇಂಪೂ ಮನಸ್ಸಿಗೆ ರಂಜನೆಯೂ, ಜ್ಞಾನ, ಸುಜ್ಞಾನ, ಧಾರ್ಮಿಕಾಧ್ಯಾತ್ಮಿಕ ಸೆಳೆತವೂ ಮೂಡುವ ನಯನ ಮನೋಹರವಾದ ಸ್ಪರ್ಧೆಗಳು, ಸಾಹಿತ್ಯಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಸಾಂಗ್ಯಗಳು!!
ನೂರುಲ್ ಹುದಾದ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಒಬ್ಬರನ್ನೊಬ್ಬರು, ಒಂದು ಸಂಘದಿಂದ ಇನ್ನೊಂದು ಸಂಘ ಮೀರಿಸುವ ಸ್ಪರ್ಧೆ, ಪೈಪೋಟಿ, ಬೌದ್ಧಿಕ, ಜ್ಞಾನೋದ್ದೀಪಕ ಪ್ರದರ್ಶನಗಳನ್ನು ಕಾಣುವುದೇ ಕಣ್ಣಿಗೊಂದು ಹಬ್ಬ, ಹೃದಯಕ್ಕೆ ಸಿಂಚನ. ಇಲ್ಲಿ ಚತುರ್ದಿನಗಳಲ್ಲಿ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿ ಮೈಮರೆಸಿ ಅದ್ಭುತ ಲೋಕಕ್ಕೆ ಕೊಂಡೊಯ್ಯುತ್ತಿರುವ ವಿಶಿಷ್ಠ ಕಾರ್ಯಕ್ರಮಗಳಲ್ಲಿ ಕೆಲವು ಹೀಗಿವೆ: ಅರಬಿ, ಇಂಗ್ಲಿಷ್, ಹಿಂದಿ, ಉರ್ದು , ಮಲಯಾಳಂ ಹಾಗೂ ಕನ್ನಡ ಎಂಬೀ ಆರು ಭಾಷೆಗಳಲ್ಲಿ ನಡೆಯುವ ಕಾರ್ಯಕ್ರಮಗಳು: ಪ್ರೈಂ ಟೈಂ ಡಿಬೇಟ್, ಸೈನ್ಸ್ ಮಾಸ್ಟರ್, ಸ್ಪೋಟ್ ಟ್ರಾನ್ಸ್ಲೇಷನ್, ಗ್ರಾಮರ್ ಕ್ವಿಜ್, ಫೇಸ್ ಟು ಫೇಸ್, ಜಲ್ಸತ್ತುಲ್ ಅಖೀದ, ಮುನಾಳರ, ಪ್ರೋಗ್ರಾಮ್ ಸೆಟ್ಟಿಂಗ್ ,ಜಿಯೋ ಜಯೆಂಟ್, ಬುರ್ದಾ ಮಜ್ಲಿಸ್ ಮಹ್ಫಿಲೇ ಇಶ್ಕ್ ದಫ್ ಫ್ಲವರ್ ಶೋ ಹಾಡು ಭಾಷಣ ನ್ಯೂಸ್ ರೀಡಿಂಗ್ ಮ್ಯಾತ್ಸ್ ಟ್ಯಾಲೆಂಟ್ ಡಿಬೇಟ್.
ಇಂದಿನ ದಿನ ಆರಂಭಗೊಂಡು ಚತುರ್ದಿನಗಳ ಕಾಲ ಮುಂದುವರಿಯುತ್ತಿರುವ ನೂರ್ ಶೋ ವಿದ್ಯಾರ್ಥಿ ಫೆಸ್ಟ್ ನ ವೈಶಿಷ್ಟ್ಯಗಳನ್ನು ಅಂದಾಜಿಸಲು ಈ ಒಂದು ವಿಷಯ ಸಾಕು: ಅದೇನೆಂದರೆ; 10 ವೇದಿಕೆಗಳು 200 ಪ್ರೋಗ್ರಾಮ್ಸ್ 4 ಟೀಮುಗಳು ಜಿಬ್ರಾಲ್ಟರ್ ಮಲಾಖ ,ಹೊರ್ಮುಝ್ ಬೋಸ್ ಪೊರುಸ್ ಭಾಗವಹಿಸುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ: 320 !! ಸುಬ್ಹಾನಲ್ಲಾಹ್ ! ಇಂತಹ ವಿಪುಲ, ವಿಸ್ತಾರವಾದ, ಉಲ್ಲಾಸ ಭರಿತ, ವೈಜ್ಞಾನಿಕ, ಜ್ಞಾನೋದ್ಧೀಪಕ ಕಾರ್ಯಕ್ರಮಗಳು ರಾಜ್ಯದ ಬೇರೆ ಎಲ್ಲಿಯೂ ನಡೆಯುತ್ತಿಲ್ಲ ಅಂದರೂ ಅತಿಶಯೋಕ್ತಿಯಲ್ಲ.
ಇದು ಮಾಡನ್ನೂರು ನೂರುಲ್ ಹುದಾ ಎಂಬ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಆಡಳಿತ ಸಮಿತಿ ಮತ್ತು ಎಲ್ಲಾ ವಿಧ ಸಹಕಾರ ನೀಡುತ್ತಿರುವ ರಕ್ಷಕ ಶಿಕ್ಷಕ ಸಮಿತಿ, ದೀನೀ ಪ್ರೇಮಿಗಳ ಹಾಗೂ ಇಲ್ಲಿನ ಅಧ್ಯಾಪಕ ವೃಂದದ ಇಚ್ಛಾಶಕ್ತಿ, ಅರ್ಪಣಾಪ್ರಜ್ಞೆ, ಕಾರ್ಯಕ್ಷಮತೆಗಳಿಗೆ ಸಾಕ್ಷಿಯಾಗಿದೆ. ಶಿಕ್ಷಣ ಸಂಸ್ಥೆಯ ಅಭ್ಯುದಯವನ್ನೇ ಜೀವದ ಉಸಿರಾಗಿ ಸ್ವೀಕರಿಸಿಕೊಂಡು ಕಾರ್ಯಕ್ಷಮತೆಯಿಂದ ಅಹರ್ನಿಶಿ ದುಡಿಯುತ್ತಿರುವ ಸಂಸ್ಥೆಯ ಉಸ್ತಾದ್ ಗಳು ಮತ್ತು ಅವರಿಗೆ ಎಲ್ಲಾ ವಿಧವಾಗಿ ಅನನ್ಯ ಸಹಕಾರ ನೀಡುತ್ತಿರುವ ಊರವರು, ಜಮಾಅತ್ ಕಮಿಟಿ, ಆಡಳಿತ ಕಮಿಟಿ ಹಾಗೂ ದೇಶ- ವಿದೇಶಗಳಲ್ಲಿ ಸಂಸ್ಥೆಯ ಸಂಪನ್ಮೂಲರಾಗಿ ಸದಾ ನಿರತರಾಗಿರುವ ನೂರಾರು ದೀನೀ ಪ್ರೇಮಿಗಳ ಇಚ್ಛಾಶಕ್ತಿ, ಅನನ್ಯ ಆತ್ಮಾರ್ಥತೆಯ ಫಲವಾಗಿ ಇಂದು ಮಾಡನ್ನೂರು ದಾರುಲ್ ಹುದಾ ದೇಶದ ಶೈಕ್ಷಣಿಕ ಭೂಪಟದಲ್ಲಿ ಎದ್ದು ಕಾಣುತ್ತಿರುವ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿ ವಿರಾಜಿಸುತ್ತಿದೆ.
ಏರುತಿರಲಿ, ಹಾರುತಿರಲಿ ನೂರುಲ್ ಹುದಾ ಬಾವುಟ ನೂರ್ ಶೋ ಮೆರೆಯುತಿರಲಿ ಬಾನಿನಗಳ ಪಟಪಟ
ಎಲ್ಲರನ್ನೂ ಆಮಂತ್ರಣ ಶುಭಾಶಯಗಳೊಂದಿಗೆ; – ಖಲೀಲ್ ಅರ್ಶದಿ(ಮ್ಯಾನೇಜರ್)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.