ಕಾಜೂರು(ವಿಶ್ವಕನ್ನಡಿಗ ನ್ಯೂಸ್): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮಾಜ ಸೇವೆಯಲ್ಲಿ ಕಾರ್ಯಚರಿಸುತ್ತಿರುವ ಅಲ್ ಉಮ್ಮಾ ಹೆಲ್ಪ್ ಲೈನ್ ಸಂಸ್ಥೆಯೂ ನೂರಾರು ಬಡ ಕುಟುಂಬಗಳಿಗೆ ಆಸ್ಪತ್ರೆಗೆ ಆಗುವ ವೆಚ್ಚವನ್ನು ಬರಿಸಲು ಕ್ರೌಡ್ ಫಂಡಿಗ್ ಮೂಲಕ ಮತ್ತು ಅಹಾರ ಕಿಟ್ , ಆರ್ಥಿಕ ನೆರವು , ಮನೆ ನಿರ್ಮಾಣ ಹಾಗೂ ಮದುವೆಗೆ ಸಹಾಯಸ್ತವನ್ನು ಚಾಚುತ್ತ ಬಂದಿದೆ.
ಇದೀಗ ಅಲ್ ಉಮ್ಮಾ ಹೆಲ್ಪ್ ಲೈನ್ ಸಂಸ್ಥೆಯೂ ಮರ್ಹೂಮ್ ಮೊಹಮ್ಮದ್ ರಫಾನ್ ರವರ ಹೆಸರಿನಲ್ಲಿ ಸಾರ್ವಜನಿಕರ ಸೇವೆಗಾಗಿ ಜಿಲ್ಲೆಗೆ ಅಂಬ್ಯುಲೆನ್ಸ್ ಸೇವೆಯನ್ನು ಹಲವಾರು ಉಲಮಾ , ಉಮರಾಗಳು , ಗಣ್ಯ ಅಥಿತಿಗಳು ಮತ್ತು ಪೋಲಿಸ್ ಅಧಿಕಾರಿಗಳು , ಸಂಘ ಸಂಸ್ಥೆಗಳು , ಸಂಘಟನೆಗಳ ನಾಯಕರು ಹಾಗೂ ರಾಜಕೀಯ ನೇತಾರರು , ಮಸೀದಿ ಆಡಳಿತ ಮಂಡಳಿಗಳ ಎಲ್ಲಾ ಮುಖ್ಯ ಅಥಿತಿಗಳ ಉಪಸ್ಥಿತಿಯಲ್ಲಿ ಅಕ್ಟೋಬರ್ 30 ರಂದು ಕಾಜೂರು ದರ್ಗಾ ಶರೀಫ್ ವಠಾರದಲ್ಲಿ ಉದ್ಘಾಟನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ಮತ್ತು ಸೌಹಾರ್ದತ ಸಮ್ಮೇಳನ ಮತ್ತು ಧಾರ್ಮಿಕ ಪ್ರವಚನ ಕಾರ್ಯಕ್ರಮವು ನಡೆಯಿತು. ಈ ಒಂದು ಕಾರ್ಯಕ್ರಮಕ್ಕೆ ಬಂದು ಸಹಕರಿಸಿದ ಎಲ್ಲಾ ಅಥಿತಿಗಳಿಗೂ ಮತ್ತು ಊರಿನ ಎಲ್ಲಾ ಜನತೆಗೂ ಮತ್ತು ಕಾರ್ಯಕ್ರಮದ ವೇದಿಕೆಯಲ್ಲಿದ್ದ ಎಲ್ಲಾ ಧರ್ಮದ ಧರ್ಮ ಗುರುಗಳು , ಧಾರ್ಮಿಕ ಮುಖಂಡರು , ರಾಜಕೀಯ ನಾಯಕರು , ಸಮಾಜ ಸೇವಕರು ಹಣ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೂ ಧನ್ಯವಾದಗಳು ಎಂದು ಸಂಘಟಕರು ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.