(www.vknews.in) ಮಂಗಳೂರು : ಫೈವ್ ಸ್ಟಾರ್ ಯಂಗ್ ಬಾಯ್ಸ್ (ರಿ) ಅಡ್ಡೂರು ಹಾಗೂ ಯೆನೆಪೋಯ ವಿಶ್ವವಿದ್ಯಾನಿಲಯ ಮೆಡಿಕಲ್ ಕಾಲೇಜು ದೇರಳಕಟ್ಟೆ ಇವರ ಸಂಯುಕ್ತ ಸಹಯೋಗದಲ್ಲಿ
ಮರ್ಹೂಂ ಜನಾಬ್ ಹಾಜಿ A.N ಇಬ್ರಾಹಿಂ ಗರಡಿ ಮತ್ತು ಮರ್ಹೂಂ ಜನಾಬ್ T. ಸೈಯದ್ ತೋಕೂರು ಇವರ ಸ್ಮರಣಾರ್ಥಕ ವಾಗಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ದಂತ ಚಿಕಿತ್ಸಾ ಶಿಬಿರ ಆದಿತ್ಯವಾರ ಬದ್ರಿಯಾ ಮದರಸದಲ್ಲಿ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಬದ್ರಿಯಾ ಜುಮ್ಮಾ ಮಸೀದಿ ಅಡ್ಡೂರು ಇದರ ಖತೀಬರಾದ ಸದಕತ್ತುಲ್ಲಾ ಫೈಝಿ ದುವಾ ಆಶೀರ್ವಾದದೊಂದಿಗೆ ಉದ್ಘಾಟಿಸಿದರು, ಸಭೆಯ ಅಧ್ಯಕ್ಷ ಸ್ಥಾನವನ್ನು ಹಬೀಬ್ ಕಟ್ಟ ಪುಣಿ ಆಲಂಕರಿಸಿದರು, ಕಾರ್ಯಕ್ರಮದಲ್ಲಿ ಬದ್ರಿಯಾ ಜುಮ್ಮಾ ಮಸೀದಿ ಅಡ್ಡೂರು ಇದರ ಅಧ್ಯಕ್ಷರಾದ ಅಹ್ಮದ್ ಬಾವ ಅಂಗಡಿ ಮನೆ, ಮಾಜಿ ಶಾಸಕರಾದ ಮೊಯಿದಿನ್ ಬಾವ, ನಿಕಟಪೂರ್ವ ಜಿಲ್ಲಾ ಪಂಚಾಯತ್ ಸದಸ್ಯ U.P ಇಬ್ರಾಹಿಂ , ಗುರುಪುರ ಗ್ರಾಮ ಪಂಚಾಯತ್ ಸದಸ್ಯರಾದ ಆಶ್ರಫ್ ನಡುಗುಡ್ಡೆ, ಮನ್ಸೂರ್ ಟಿಬೆಟ್, ಸಾಹಿಕ್ ಪಾಂಡೆಲ್, A.K ಆಶ್ರಫ್, ಸಾಮಾಜಿಕ ಕಾರ್ಯಕರ್ತರಾದ ಅಬ್ದುಲ್ ರೆಹಮಾನ್ ಬಂಡ ಸಾಲೆ, ಬದ್ರಿಯಾ ಜುಮ್ಮಾ ಮಸೀದಿ ಅಡ್ಡೂರು ಇದರ ಉಪಾಧ್ಯಕ್ಷರಾದ ಝನುದ್ದೀನ್ ದೆಲ್ಮಾ, ಬದ್ರಿಯಾ ಮದರಸದ ಸಂಚಾಲಕರಾದ D.S ರಫೀಕ್, ಖ್ಯಾತಉದ್ಯಮಿ ಇನಾಯತ್ ಆಲಿ,D.R E.K ಸಿದ್ದೀಕ್, ಕರಾವಳಿ ಟೆಕ್ಸ್ ಟೈಲ್ಸ್ ಮತ್ತು ಫುಟ್ ವೇರ್ ಇದರ ಅಧ್ಯಕ್ಷರಾದ ಸಂತೋಷ್ ಕಾಮತ್,D.R ಜುನೈದ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಶಿಬಿರದಲ್ಲಿ 312 ಜನರು ಸದುಪಯೋಗ ಪಡೆದರು. ಕಾರ್ಯಕ್ರಮವನ್ನು ಸಂಸ್ಥೆಯ ಸದಸ್ಯರಾದ ಜಮಾಲ್ ರವರು ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.