ಪುತ್ತೂರು (www.vknews.in) : ಕಾವು ಸಮೀಪದ ವಿಶ್ವವಿಖ್ಯಾತ ಸಮನ್ವಯ ಕೇಂದ್ರ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಇದರ ವತಿಯಿಂದ ನಡೆಸಲ್ಪಡುವ ಕರ್ನಾಟಕದ ಬೃಹತ್ ಆಧ್ಯಾತ್ಮಿಕ ಮಹಾಸಂಗಮ ನಾಳೆ ಸಂಜೆ ಆರು ಮೂವತ್ತಕ್ಕೆ ಸರಿಯಾಗಿ ಶಹೀದಿಯ್ಯ ನಗರದಲ್ಲಿ ಬೃಹತ್ ವೇದಿಕೆಯಲ್ಲಿ ಸಹಸ್ರಾರು ಸತ್ಯ ವಿಶ್ವಾಸಿಗಳನ್ನು ಸಾಕ್ಷಿಯಾಗಿಸಿ, ನಡೆಯಲಿರುವುದು.
ಖ್ಯಾತ ಅಂತರಾಷ್ಟ್ರೀಯ ಪ್ರಭಾಷಣಗಾರ ಕೀಚೇರಿ ಅಬ್ದುಲ್ ಗಫೂರ್ ಮೌಲವಿ ಪ್ರಭಾಷಣ ಗೈಯ್ಯಲಿದ್ದಾರೆ. ಸಮಸ್ತ ಮುಶಾವರ ಸದಸ್ಯರಾದ ಶೈಖುನಾ ಉಸ್ಮಾನುಲ್ ಫೈಝಿ ತೋಡಾರ್ ಉದ್ಘಾಟನೆಗೈಯುತ್ತಿರುವ ಕಾರ್ಯಕ್ರಮದಲ್ಲಿ, ಪ್ರಮುಖ ಸೂಫಿವರ್ಯರಾದ ಶೈಖುನಾ ಪಾತೂರ್ ಉಸ್ತಾದ್ ದುಆ ನೆರವೇರಿಸಲಿರುವರು. ಸ್ತ್ರೀಯರಿಗೆ ಪ್ರತ್ಯೇಕವಾದ ಸ್ಥಳಾವಕಾಶವನ್ನು ನೀಡಲಾಗಿದೆ ಅಲ್ಲದೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಮತ್ತು ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನವು ಕೂಡ ಇರುವುದು.
ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಶಹೀದಿಯ್ಯ ನಗರ ಮಾಡನ್ನೂರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.