ಮೈಸೂರು (ವಿಶ್ವ ಕನ್ನಡಿಗ ನ್ಯೂಸ್) : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟ್ ಆಫ್ ಇಂಡಿಯಾ ವಿರುದ್ಧ ಅವಹೇಳನಕಾರಿ ಸುದ್ದಿ ಬಿತ್ತರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನುಮಕ್ಕನವರ್ ಅವರಿಗೆ ಮೈಸೂರಿನ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.
ಎಸ್ಡಿಪಿಐ ಮತ್ತು ಪಿಎಫ್ಐ ಕಚೇರಿ ಹಾಗು ನಾಯಕರ ಮೇಲೆ ಇತ್ತೀಚೆಗೆ ಎನ್ಐಎ ದಾಳಿ ಮಾಡಿತ್ತು. ಈ ಸಂದರ್ಭದಲ್ಲಿ ಎಸ್ಡಿಪಿಐ ವಿರುದ್ಧ ಸುವರ್ಣ ನ್ಯೂಸ್ ಅಪಪ್ರಚಾರ ಮಾಡಿದೆ ಎಂದು ಸುವರ್ಣ ನ್ಯೂಸ್ನ ಪ್ರಧಾನ ಸಂಪಾದಕ ರವಿ ಹೆಗ್ಡೆ ಮತ್ತು ಅಜಿತ್ ಹನುಮಕ್ಕನವರ್ ವಿರುದ್ಧ ಮೈಸೂರಿನಲ್ಲಿ ಎಸ್ಡಿಪಿಐ ಮುಖಂಡ ಫಿರ್ದೌಸ್ ದೂರು ದಾಖಲಿಸಿದ್ದರು.
ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಅಜಿತ್ ಹನುಮಕ್ಕನವರ್ ಹಾಜರಾಗದ ಹಿನ್ನೆಲೆಯಲ್ಲಿ ಅವರ ವಿರುದ್ಧ ಮೈಸೂರಿನ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ. ಪ್ರಕರಣದ ಸಂಬಂಧ ಮುಂದಿನ ವಿಚಾರಣೆಯು ಡಿಸೆ೦ಬರ್ 8ರಂದು ನಡೆಯಲಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.