ತಾಂಜೇನಿಯಾ (ವಿಶ್ವ ಕನ್ನಡಿಗ ನ್ಯೂಸ್) : ತಾಂಜೇನಿಯಾದಲ್ಲಿ ಭಾನುವಾರ ಪ್ರಯಾಣಿಕರ ವಿಮಾನವೊಂದು ಲ್ಯಾಂಡ್ ಆಗಲು ಪ್ರಯತ್ನಿಸುತ್ತಿದ್ದಾಗ ಸರೋವರಕ್ಕೆ ಅಪ್ಪಳಿಸಿದೆ. ಮುಂಜಾನೆ ಈ ಅಪಘಾತ ಸಂಭವಿಸಿದೆ. ಅಪಘಾತದ ಸಮಯದಲ್ಲಿ ಪೈಲಟ್ ಮತ್ತು ಸಿಬ್ಬಂದಿ ಸೇರಿದಂತೆ 43 ಪ್ರಯಾಣಿಕರು ವಿಮಾನದಲ್ಲಿದ್ದರು. ವರದಿಗಳ ಪ್ರಕಾರ, ಅವರಲ್ಲಿ 26 ಜನರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ.
ದಾರುಸ್ಸಲಾಂನಿಂದ ಟೇಕ್ ಆಫ್ ಆದ ವಿಮಾನವು ಬುಕೋಬಾ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದಾಗ ಸರೋವರಕ್ಕೆ ಅಪ್ಪಳಿಸಿತು. ಅಪಘಾತಕ್ಕೆ ಕೆಟ್ಟ ಹವಾಮಾನ ಕಾರಣ ಎಂದು ಅಂದಾಜಿಸಲಾಗಿದೆ. ತಾಂಜೇನಿಯಾದ ಅತಿದೊಡ್ಡ ಖಾಸಗಿ ವಿಮಾನಯಾನ ಸಂಸ್ಥೆಯಾದ ಪ್ರೆಸಿಷನ್ ಏರ್ ಈ ಅಪಘಾತದಲ್ಲಿ ಭಾಗಿಯಾಗಿತ್ತು. ಸರೋವರದ ಪಕ್ಕದಲ್ಲಿರುವ ಬುಕೋಬಾ ವಿಮಾನ ನಿಲ್ದಾಣದಿಂದ ಕೇವಲ 100 ಮೀಟರ್ ದೂರದಲ್ಲಿ ಈ ಅಪಘಾತ ಸಂಭವಿಸಿದೆ. ಬಹುತೇಕ ನೀರಿನಲ್ಲಿ ಮುಳುಗಿದ್ದ ವಿಮಾನವನ್ನು ದಡಕ್ಕೆ ಎಳೆದು ತರಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.