ಜೆದ್ದಾ(www.vknews.in): ಗಲ್ಫ್ ಗೈಸ್ ಬಡಕಬೈಲ್ ಇದರ 5ನೇ ವಾರ್ಷಿಕ ಮಹಾಸಭೆಯು ದಿನಾಂಕ: 04-11-2022 ಶುಕ್ರವಾರ ಜುಮಾ ಬಳಿಕ ಸಮಯ 2:00 (SAUDI)ಸರಿಯಾಗಿ ಸಮಿತಿ ಅದ್ಯಕ್ಷರಾದ ನಝೀರ್ ಗಾಣೆಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು. ಹೈದರ್ ಹಾಫಿಳ್ ದುಬೈ ದುಆಃ ಮೂಲಕ ಸಭೆಗೆ ಚಾಲನೆ ನೀಡಿದರು, ಪ್ರ,ಕಾರ್ಯದರ್ಶಿ ಖಲೀಲ್ ಗರ್ಗಲ್ ಸಭೆಗೆ ಸ್ವಾಗತ ಕೋರಿದರು. ನೂತನ ಕಮಿಟಿ ಈ ಕೆಳಗಿನಂತೆ ರೂಪೀಕರಿಸಲಾಯಿತು.
2022_2023 ಸಾಲಿನ ನೂತನ ಸಾರಥಿಗಳು
ಗೌರವಾಧ್ಯಕ್ಷರು: ರಹೀಂ ಸಅದಿ ಖತರ್
ಅಧ್ಯಕ್ಷರು : ಅಶ್ರಫ್ ದುಬೈ
ಪ್ರ,ಕಾರ್ಯದರ್ಶಿ: ಅಝ್ವೀರ್ ಗಾಣೆಮಾರ್
ಕೋಶಾಧಿಕಾರಿ: ಖಲೀಲ್ ಗರ್ಗಲ್
ಉಪಾಧ್ಯಕ್ಷರು: ಮುಹಿಯ್ಯದ್ದೀನ್ ದಮ್ಮಾಮ್ ಶೆರೀಫ್ ಗಾಣೆಮಾರ್
ಕಾರ್ಯದರ್ಶಿ: ಇನ್ಹಾಮ್ ಖತರ್
ಚುಣಾವಣಾ ಉಸ್ತುವಾರಿಗಳಾಗಿ ರಹೀಂ ಸಅದಿ ಖತರ್ ಹಾಗು ತೌಹೀದ್ ಗಾಣೆಮಾರ್ ರವರು ಕಾರ್ಯನಿರ್ವಹಿಸಿದರು.
ನೂತನ ಅಧ್ಯಕ್ಷರು ಮಾತನಾಡಿ ಗಲ್ಫ್ ಗೈಸ್ ಬಡಕಬೈಲ್ ಕಮಿಟಿ ರಚನೆಯಾದ ಉಧ್ದೇಶವನ್ನು ವಿವರಿಸಿ ನೂತನ ಸಮಿತಿಯೊಂದಿಗೆ ಪ್ರತೀಯೊಬ್ಬ ಸದಸ್ಯರು ಸಹಕರಿಸಬೇಕೆಂದು ತಿಳಿಸಿ ಸಮಿತಿಯ ಆಯ್ಕೆಯಾದ ಪದಾಧಿಕಾರಿಗಳಿಗೆ ದುಆ ಮಾಡಿದರು.
ನೂತನ ಪ್ರಧಾನ ಕಾರ್ಯದರ್ಶಿ ಅಝ್ವೀರ್ ಗಾಣೆಮಾರ್ ಎಲ್ಲರಿಗು ಧನ್ಯವಾದ ಹೇಳಿ 3 ಸ್ವಲಾತಿನೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.
ಧನ್ಯವಾದಗಳೊಂದಿಗೆ,
DATE : 05 NOVEMBER 2022
ಅಧ್ಯಕ್ಷರು :- ಅಶ್ರಫ್ ದುಬೈ ಪ್ರ,ಕಾರ್ಯದರ್ಶಿ : ಅಝ್ವೀರ್ ಗಾಣೆಮಾರ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.