ದೆಹಲಿ (ವಿಶ್ವ ಕನ್ನಡಿಗ ನ್ಯೂಸ್) : ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಡಿ ಕಂಪನಿ ಇನ್ನೂ ಸಕ್ರಿಯವಾಗಿದೆ ಎಂದು ಎನ್ ಐಎ ಸ್ಪಷ್ಟಪಡಿಸಿದೆ. ಪ್ರಕರಣದಲ್ಲಿ ಬಂಧಿತ ಆರೋಪಿಗಳಿಗೆ ಡಿ ಕಂಪನಿ ಹವಾಲಾ ಮೂಲಕ ಅಪಾರ ಪ್ರಮಾಣದ ಹಣವನ್ನು ರವಾನಿಸಿದ್ದು, ಮುಂಬೈ ಮತ್ತು ಭಾರತದ ಇತರ ಭಾಗಗಳಲ್ಲಿ ಭಯೋತ್ಪಾದಕ ದಾಳಿ ನಡೆಸಲು ಈ ಗ್ಯಾಂಗ್ ಯೋಜನೆ ರೂಪಿಸಿತ್ತು ಎಂದು ಎನ್ ಐಎ ಹೇಳಿದೆ.
ರಾಜಕೀಯ ಮುಖಂಡರು, ಉದ್ಯಮಿಗಳು ಸೇರಿದಂತೆ ಪ್ರಮುಖರ ಮೇಲೆ ದಾಳಿ ನಡೆಸುವ ಮೂಲಕ ದೇಶದ ಜನರಲ್ಲಿ ಭಯ ಮೂಡಿಸಲು ಡಿ ಕಂಪನಿ ವಿಶೇಷ ಘಟಕವನ್ನು ರಚಿಸಿದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಎನ್ಐಎ ಹೇಳಿದೆ. ದಾವೂದ್ ಇಬ್ರಾಹಿಂ ಕಳೆದ ನಾಲ್ಕು ವರ್ಷಗಳಲ್ಲಿ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗಾಗಿ 13 ಕೋಟಿ ರೂ.ಗಳನ್ನು ಕಳುಹಿಸಿದ್ದು, ಈ ವರ್ಷವೇ ಹವಾಲಾ ಮೂಲಕ ಭಾರತಕ್ಕೆ 25 ಲಕ್ಷ ರೂ ಕಳಿಸಿದೆ.
ಪ್ರಕರಣದ ಸಾಕ್ಷಿಯಾಗಿರುವ ಸೂರತ್ ಮೂಲದ ಹವಾಲಾ ಡೀಲರ್ ಮೂಲಕ ಹಣ ರವಾನೆಯಾಗಿದೆ. ಇದರಲ್ಲಿ ಆರೀಫ್ ಮನೆಯಿಂದ ಎನ್ ಐಎಗೆ 5 ಲಕ್ಷ ರೂ. ಪ್ರಕರಣದಲ್ಲಿ ಆರಿಫ್ ಭಾಯಿಜಾನ್ ಅಲಿಯಾಸ್ ಆರಿಫ್ ಅಬೂಬಕರ್ ಶೇಖ್ ಮತ್ತು ಶಬೀರ್ ಅಬೂಬಕರ್ ಶೇಖ್ ಅವರನ್ನು ಎನ್ಐಎ ಮೊದಲು ಬಂಧಿಸಿತ್ತು. ಇದರ ಬೆನ್ನಲ್ಲೇ ದಾವೂದ್ ಸಹಾಯಕ ಛೋಟಾ ಶಕೀಲ್ ಸಂಬಂಧಿ ಮುಹಮ್ಮದ್ ಸಲೀಂ ಖುರೇಷಿ ಅಲಿಯಾಸ್ ಸಲೀಂ ಫ್ರೂಟ್ ನನ್ನು ಬಂಧಿಸಲಾಗಿತ್ತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.