ಬೆಳ್ಳಾರೆ(ವಿಶ್ವಕನ್ನಡಿಗ ನ್ಯೂಸ್): ಸುಳ್ಯ ತಾಲೂಕು , ಬೆಳ್ಳಾರೆ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಧಾರ್ಮಿಕ ಮತ್ತು ಲೌಕಿಕ ಸಮನ್ವಯ ಸಂಸ್ಥೆ ದಾರುಲ್ ಹಿಕ್ಮ ಎಜುಕೇಷನ್ ಸೆಂಟರ್ ಬೆಳ್ಳಾರೆ ಇದರ ದುಬೈ ಹಿತೈಷಿಗಳ ಸಂಗಮ ಬರ್ದುಬೈ KCF ಸೆಂಟರ್ ನಲ್ಲಿ ದಿನಾಂಕ 06-11-2022 ರಂದು ಝೈನುದ್ದೀನ್ ಹಾಜಿ ಬೆಳ್ಳಾರೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಹಮೀದ್ ಸಖಾಫಿ ಬೆಳ್ಳಾರೆ ಇವರ ಸ್ವಾಗತದೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ದಾರುಲ್ ಹಿಕ್ಮ ಬೆಳ್ಳಾರೆ ಇದರ ಹಲವಾರು ಹಿತೈಷಿಗಳು ಪಾಲ್ಗೊಂಡರು. ಸಭೆಯಲ್ಲಿ ದಾರುಲ್ ಹಿಕ್ಮ ಇದರ ಈಗಿನ ಕಾರ್ಯಾಚರಣೆ ಹಾಗೂ ಮುಂದಿನ ಯೋಜನೆಗಳ ಕುರಿತು ಸಂಸ್ಥೆಯ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ದಾವೂದ್ ಸಹದಿ ಬೆಳ್ಳಾರೆ ವಿವರಿಸಿದರು. ಮುಖ್ಯ ಅತಿಥಿಯಾಗಿ ಶಾಹುಲ್ ಹಮೀದ್ ಸಖಾಫಿ ಕೊಡಗು ಭಾಗವಹಿಸಿ ಶುಭ ಹಾರೈಸಿದರು.ದುಬೈ ಭಾಗದಲ್ಲಿ ಸಂಸ್ಥೆಯ ಪ್ರಚಾರ ಮತ್ತು ಸಹಕಾರಕ್ಕಾಗಿ ದಾವೂದ್ ಮಾಸ್ಟರ್ ನೆಕ್ಕಿಲ ಇವರ ನೇತೃತ್ವದಲ್ಲಿ ಹೊಸ ಸಮಿತಿಯನ್ನು ರಚಿಸಲಾಯಿತು. ನಂತರ ದಾರುಲ್ ಹಿಕ್ಮ ಬೆಳ್ಳಾರೆ ಇದರ ಮ್ಯಾನೇಜರ್ ಸತ್ತಾರ್ ಸಖಾಫಿ ಬೆಳ್ಳಾರೆ ಅವರ ದನ್ಯವಾದದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ದಾರುಲ್ ಹಿಕ್ಮ ದುಬೈ ಶಾರ್ಜಾ ಕಮಿಟಿ ಸಲಹಾ ಸಮಿತಿ: ಝೈನುದ್ದೀನ್ ಹಾಜಿ, ದಾವೂದ್ ಮಾಸ್ಟರ್ ಶಾಹುಲ್ ಹಮೀದ್ ಸಖಾಫಿ, ಸುಲೈಮಾನ್ ಮುಕ್ವೆ, ಹಮೀದ್ ಸಖಾಫಿ
ಅದ್ಯಕ್ಷರು: ಅಝೀಝ್ ಅಹ್ಸನಿ ಇಂದ್ರಾಜೆ ಪ್ರ.ಕಾರ್ಯದರ್ಶಿ: ಮುಸ್ತಫ ಪಂಜ ಕೋಶಾಧಿಕಾರಿ: ರಝಾಕ್ ಹಮೈದಿ ಇಂದ್ರಾಜೆ
ಉಪಾಧ್ಯಕ್ಷರು: ಹನೀಫ್ ಕುಳಿಯಾರ್, ಮುಸ್ತಫ ಅಮ್ಚಿನಡ್ಕ, ಶಕೀಲ್ ಬೆಳ್ಳಾರೆ. ಜೊತೆ ಕಾರ್ಯದರ್ಶಿಗಳು ನೌಫಲ್ ಬೆಳ್ಳಾರೆ, ಉಸೈಫ್ ಸಮಾದಿ, ಆಸಿಫ್ ಇಂದ್ರಾಜೆ
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ನಝೀರ್ ಬೆಳ್ಳಾರೆ, ಶಾದುಲಿ ಬೆಳಂದೂರು, ಸೂಫಿ ಎಣ್ಮೂರು, ಲತೀಫ್ ಬಿಸ್ಮಿಲ್ಲ, ಬಶೀರ್ ಕುಳಿಯಾರ್, ಶರೀಫ್ ಡಿಐಪಿ, ಹಮೀದ್ ಕುಳಿಯಾರ್, ರಫೀಕ್ ಮೋಂತಿಮಾರ್, ಕಾದರ್ ಕಯ್ಯೂರು, ರಿಯಾಝ್ ವೆಣೂರು, ರಶೀದ್ ಪಡೀಲ್, ಸಲೀಮ್ ಸಖಾಫಿ, ನಿಯಾಝ್ ಬೆಳ್ಳಾರೆ, ಬದ್ರು ಎಣ್ಮೂರು ಇವರನ್ನು ಆರಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.