ಹುಬ್ಬಳ್ಳಿ (www.vknews.in) : ಮೋದಿಕೇರ್ ಟೀಮ್ ರಾಘವೇಂದ್ರ ಶೆಟ್ಟಿ ತಂಡದ “ಡ್ರೀಮ್ ಮಿಲಿಯನೇರ್ ನತ್ತ, ಡೈಮಂಡ್ ರೋಡ್ ಮ್ಯಾಪ್, ಯಶಸ್ಸಿನ ವರ್ಧನೆಯತ್ತ ಕಾರ್ಯಸೂಚಿಯ ವಿಷನ್ 2025” ಅದ್ದೂರಿ ಕಾರ್ಯಕ್ರಮ ಹುಬ್ಬಳ್ಳಿಯ ಪ್ರತಿಷ್ಠಿತ ರಾಯಲ್ ರಿಡ್ಜ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.
ಹೊಸ ಪರಿಕಲ್ಪನೆಯ”ಕಾರ್ಯಸೂಚಿಯಂತೆ” ಉನ್ನತ ದರ್ಜೆಯ ನಾಯಕತ್ವವನ್ನು ರಚಿಸಿ , ಥೈಲ್ಯಾಂಡ್ ಮತ್ತು ವಿದೇಶಿ ಪ್ರವಾಸದ ಅರ್ಹತೆ ಪಡೆಯುವುದು, ಕಾರ್ ಸಾಧಕರನ್ನು ಸೃಷ್ಟಿಸುವುದು, ಹೊಸ ಮಿಲಿಯನೇರ್ಗಳು ಹುಟ್ಟು ಹಾಕುವುದು, ಡೈಮಂಡ್ ಟೈಟಲ್ ಆಗುವುದರ ಜೊತೆಗೆ ಇನ್ನಷ್ಟು ಹೊಸ ಡೈಮಂಡ್ಸ್ ಟೈಟಲ್ ರಚಿಸಿ ಪರಿಪೂರ್ಣವಾದ ಕಲಿಕೆಯನ್ನು ಅಳವಡಿಸಿ, ಬೆಳೆಸಿಕೊಳ್ಳುವ, ಮೋದಿಕೇರ್ ಸಮಗ್ರ ವ್ಯವಸ್ಥೆಯಲ್ಲಿ ಪರಿಪೂರ್ಣ ಸಂಸ್ಕೃತಿ ನಿರ್ಮಾಣದೊಂದಿಗೆ ದೀರ್ಘಾವಧಿಯ ಹೊಸ ದೃಷ್ಟಿಯಲ್ಲಿ ಹೊಸ ಸೃಷ್ಟಿ ಯ ದೊಡ್ಡ ಕನಸು ನಿರ್ಮಾಣ ಮಾಡುವ ಸದುದ್ದೇಶದ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮೋದಿಕೇರ್ ನ ರಾಯಬಾರಿ, ಉನ್ನತ ಅನುಭವಿ ನಾಯಕ, ಸಂತೋಷ್ ಶೆಟ್ಟಿ ಮಾತನಾಡುತ್ತಾ “ಅರಿವಿನ ವಿಸ್ತಾರಕ್ಕೆ ಕಷ್ಟಗಳೇ ಇಂಧನ. ತೊಂದರೆಗಳನ್ನು ತೆರೆದ ಮನಸ್ಸಿನಿಂದ ಸ್ವಾಗತಿಸಿದರೆ, ಜೀವನದ ಹೊಸ ಅರ್ಥಗಳನ್ನು ಕಂಡುಕೊಳ್ಳಬಹುದು, ಉತ್ತಮ ನಾಯಕನಾದವನು ಹೆಚ್ಚು ನಾಯಕರನ್ನು ಸೃಷ್ಟಿ ಮಾಡುತ್ತಾನೆ ಹೊರತು, ಹಿಂಬಾಲಕರನ್ನಲ್ಲ” ಎಂದರು. ಕಾರ್ಯಗಾರದಲ್ಲಿ ಆಯ್ದ ಸುಮಾರು ಐನೂರು ಮಿಕ್ಕಿ ಮೋದಿಕೇರ್ ಸಲಹೆಗಾರರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಮೋದಿಕೇರ್ ನ ಮಿಂಚಿನ ಸಾಧಕ ಸಂಘಟಕ ರಾಘವೇಂದ್ರ ಶೆಟ್ಟಿಯವರ ನೇತೃತ್ವದಲ್ಲಿ ಹೊಸ ಪರಿಕಲ್ಪನೆಯಲ್ಲಿ ಮೂಡಿ ಬಂತು.
ಇಡೀ ದಿನ ನಡೆದ ಕಾರ್ಯಕ್ರಮವನ್ನು ಯುವ ಉದ್ಯಮಿ ಉದಯ್ ಶೆಟ್ಟಿ ನಿರ್ವಹಿಸಿದರು. ಸಂಸ್ಥೆಯ ಪಾಲುದಾರರಾದ ವೀರೇಂದ್ರ ಪೂಜಾರಿ, ಪವಿತ್ರ ಬಂಗೇರ ಮತ್ತು ಹಿರಿಯ ಅನುಭವಿ ನಾಯಕರು ಕಾರ್ಯಾಗಾರದ ಉಸ್ತುವಾರಿ ವಹಿಸಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.