(www.vknews.in) ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದ.ಕ ಜಿಲ್ಲಾ ಹಿರಿಯ ನಾಯಕ, ಮಂಗಳೂರು, ಕಂದಕ ಬದ್ರಿಯಾ ಹೋಟೇಲಿನ ಮಾಲಕರಾದ ಕಾಟಿಪಳ್ಳ ನಿವಾಸಿ ಅಬ್ದುಲ್ ಖಾದರ್ ಯಾನೆ ಚೈನಾ ಕಾದಿರಾಕ(ಪ್ರಾಯ 80 ವರ್ಷ) ನಗರದ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ (8-11-2022) ನಿಧನರಾದರು .
ಹತ್ತಾರು ವರ್ಷಗಳ ಕಾಲ ಮಂಗಳೂರು ನಗರ ಮುಸ್ಲಿಂಲೀಗಿನ ಕಾರ್ಯಕಲಾಪಗಳಲ್ಲಿ ಸಕ್ರೀಯವಾಗಿದ್ದ ಕಾದಿರಾಕರವರು ಪಕ್ಷದ ಬಲವರ್ಧನೆಗೆ ಶಕ್ತಿ ಮೀರಿ ಶ್ರಮಿಸಿದ್ದರು ಮಾತ್ರವಲ್ಲ ಹತ್ತಾರು ಸಮಾಜ ಸೇವೆಯಲ್ಲೊಯೂ ತನ್ನನ್ನು ತೊಡಗಿಸಿಕೊಂಡಿದ್ದರು. ಖಾದಿರಾಕರ ನಿಧನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಲೀಗ್ ತೀವೃ ಶೋಖ ವ್ಯಕ್ತಪಡಿಸಿದೆ.
ರಾಜ್ಯ ಮುಸ್ಲಿಂ ಲೀಗ್ ಪ್ರಧಾನ ಕಾರ್ಯದರ್ಶಿ ಎ ಇಬ್ರಾಹಿಂ ಅಹಮದ್ ಜೋಕಟ್ಟೆ, ಜಿಲ್ಲಾ ಮುಸ್ಲಿಂ ಲೀಗ್ ಅಧ್ಯಕ್ಷ ಕೆ ಎಂ ಫಯಾಝ್, ಪ್ರಧಾನ ಕಾರ್ಯದರ್ಶಿ ಟಿ ಯು ಇಸ್ಮಾಯಿಲ್, ನ್ಯಾಯವಾದಿ ಎಸ್ ಸುಲೈಮಾನ್ ಮುಂತಾದವರು ಕಾದಿರಾಕರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಮ್ರತರು ಪತ್ನಿ ಮತ್ತು ಐವರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.