ದುಬೈ(ವಿಶ್ವಕನ್ನಡಿಗ ನ್ಯೂಸ್): ಕೆಸಿಎಫ್ ದುಬೈ ನೋರ್ತ್ ಝೋನ್ ವತಿಯಿಂದ ಪೇರೆಂಟಿಂಗ್ ಕಾರ್ಯಾಗಾರ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ಜೆರಾಸೋ ಎಜುಕೇಶನ್ ಸೆಂಟರ್ ಕಿಸೈಸ್ ದುಬೈಯಲ್ಲಿ ಕೆಸಿಎಫ್ ನಾಯಕರದ ಖಾಸಿಂಮದನಿ ಉಸ್ತಾದರ ದುವಾದೊಂದಿಗೆ ಕಾರ್ಯಕ್ರಮ ನಡೆಯಿತು. ಕೆಸಿಎಫ್ ದುಬೈ ನಾರ್ತ್ ಝೋನ್ ಅಧ್ಯಕ್ಷರಾದ ಇಸ್ಮಾಯಿಲ್ ಮದನಿ ನಗರ ರವರ ಅಧ್ಯಕ್ಷತೆ ವಹಿಸಿದ್ದರು .
ಕೆಸಿಎಫ್ ಅಂತರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಝಕರಿಯಾ ಆನೆಕಲ್ ಕುವೈತ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಮೊದಲ ತರಗತಿಯನ್ನು ನುಫೈಲ್ ಬೆಂಗಳೂರು ಪೇರಿಂಟಿಂಗ್ ಬಗ್ಗೆ ತರಗತಿ ನಡೆಸಿದರು. ಎರಡನೇ ತರಗತಿಯನ್ನು ಡಾಕ್ಟರ್ ಸಯ್ಯದ್ ಸೈಫುದ್ದೀನ್ ಹೆಲ್ತ್ ಬಗ್ಗೆ ತರಗತಿ ನಡೆಸಿದರು.
ದುಬೈ ಗ್ರಾಂಡ್ ಮೀಲಾದ್ ಪ್ರಯುಕ್ತ ಮಕ್ಕಳ ಆನ್ಲೈನ್ ಮಿಲಾದ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕೆಸಿಎಫ್ ಅಂತರಾಷ್ಟ್ರೀಯ ಇಹ್ಸಾನ್ ವಿಭಾಗದ ಕನ್ವೀನರ್ ಇಕ್ಬಾಲ್ ಕಾಜೂರು, ಝೋನ್ ಪ್ರಧಾನ ಕಾರ್ಯದರ್ಶಿ ನಿಯಾಝ್ ಬಸರ,ಝೋನ್ ಪಬ್ಲಿಕೇಶನ್ ವಿಭಾಗದ ಕಾರ್ಯದರ್ಶಿ ಝುಬೈರ್, ನಕೀಲ್ ಸೆಕ್ಟರ್ ಕಾರ್ಯದರ್ಶಿ ಸಿದ್ದೀಖ್ ಮುಡಿಪು,ಝೋನ್ ಹಾಗೂ ಸೆಕ್ಟರ್ ನಾಯಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮುಸ್ತಫ ಮಾಸ್ಟರ್ ಸ್ವಾಗತಿಸಿದರು ಹಾಗೂ ಕಾರ್ಯಕ್ರಮವನ್ನು ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.