ವಿಶ್ವಕನ್ನಡಿಗ ನ್ಯೂಸ್ (ಮಾಲೂರು): ಪಟ್ಟಣ್ಣದ ಸಂತೆ ಮೈದಾನದಲ್ಲಿರುವ ವಿವೇಕಾನಂದ ಬೆಸ್ಟ್ ಕಾನ್ವೆಂಟ್ ನಲ್ಲಿ ಸಂತ, ದಾರ್ಶನಿಕ, ತತ್ವಜ್ಞಾನಿ, ಭಕ್ತ ಕನಕದಾಸರ ಜಯಂತಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ವಿವೇಕಾನಂದ ಬೆಸ್ಟ್ ಕಾನ್ವೆಂಟ್ ನ ಮುಖ್ಯಸ್ಥರಾದ ಶ್ರೀ ಶೈಲೇಶ್ ಕುಮಾರ್ ರವರು ಮಾತನಾಡುತ್ತಾ “ಭಕ್ತ ಕನಕದಾಸರು ದಾಸ ಶ್ರೇಷ್ಠರಲ್ಲಿ ಅತಿ ಹೆಚ್ಚು ಪ್ರಸಿದ್ದಿ ಪಡೆದಿರುವ ಮಹಾನ್ ಸಂತ. ಇವರು 15 ಹಾಗೂ 16 ನೇ ಶತಮಾನದಲ್ಲಿ ಕೀರ್ತನೆಗಳ ಮೂಲಕ ಎಲ್ಲೆಡೆ ಜಾತಿ ವ್ಯವಸ್ಥೆಯ ವಿರುದ್ದ ಸಮರ ಸಾರಿದ ಮಹಾನ್ ತತ್ವಜ್ಞಾನಿ. ಕಾಗಿನೆಲೆಯ ಆದಿಕೇಶವನನ್ನು ಸದಾ ಧ್ಯಾನದ ಮೂಲಕ ಭಕ್ತಿಗೆ ಹೆಸರಾಗಿದ್ದ ಮಹಾನ್ ಕವಿ ಕನಕದಾಸರು. ಇವರ ಆದರ್ಶಗಳನ್ನು ನಾವೆಲ್ಲರೂ ಸಹ ಅಳವಡಿಸಿಕೊಳ್ಳುವ ಮೂಲಕ ಸಾಗೋಣಾ” ಎಂದರು.
ಅತಿಥಿಯಾಗಿ ಭಾಗವಹಿಸಿದ್ದ ವಿವೇಕಾನಂದ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕರಾದ ಸ್ನೇಹಿತ್ ರವರು ಮಾತನಾಡುತ್ತಾ “ಆಧ್ಯಾತ್ಮಿಕತೆಯ ಮಹಾನ್ ಸಂತ, ರಾಮಧಾನ್ಯ ಚರಿತೆಯ ಮೂಲಕ ಜಾತಿವ್ಯವಸ್ಥೆಯ ವಿರುದ್ದ ಸದಾ ಜಾಗೃತಿಯನ್ನು ಮೂಢಿಸುತ್ತಿದ್ದ ಸಂಗೀತಕಾರರಾದ ಭಕ್ತ ಕನಕದಾಸರು ಸದಾ ಭಕ್ತಿಗೆ ಹೆಸರಾಗಿದ್ದವರು. ಶ್ರೀ ಕೃಷ್ಣನ ಪರಮ ಭಕ್ತರು, ಕೀರ್ತನೆಗಳ ಮೂಲಕ ಸಮಾಜದಲ್ಲಿನ ಮೇಲು-ಕೀಳು ಇವುಗಳ ವಿರುದ್ದ ಸಿಡಿದ ಸಂತ ಇವರ ತತ್ವ ಆದರ್ಶಗಳನ್ನು ನಾವೆಲ್ಲರೂ ಪಾಲಿಸುವ ಹಾಗೂ ಮುಂದಿನ ಪೀಳಿಗೆಗೆ ರವಾನಿಸುವ ಕೆಲಸ ಮಾಡಬೇಕಾಗಿದೆ” ಎಂದರು.
ವಿವೇಕಾನಂದ ಬೆಸ್ಟ್ ಕಾನ್ವೆಂಟ್ ನ ವ್ಯವಸ್ಥಾಪಕರಾದ ಶ್ರೀಮತಿ ರಜನಿ ಸ್ನೇಹಿತ್, ಮುಖ್ಯೋಪಾಧ್ಯಾಯರಾದ ಸೈಯದ್ ಈಜಾಜ್ ಉರ್ ರಹೀಮ್, ಶಿಕ್ಷಕರಾದ ಅರಳೇರಿ ಮಂಜುನಾಥ್, ಸರಸ್ವತಿ, ಮುರಳಿ, ಶ್ರೀಮತಿ ಸಬೀನಾ ಖಾನಂ, ಹೇಮಾವತಿ, ಪ್ರಮೀಳಾ, ನಂದಿನಿ, ಹಾಗೂ ವಿವೇಕಾನಂದ ಬೆಸ್ಟ್ ಕಾನ್ವೆಂಟ್ ನ ಎಲ್ಲಾ ಶಿಕ್ಷಕರು, ಸಿಬ್ಬಂದಿ ವರ್ಗ ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.