ಉತ್ತರಪ್ರದೇಶ (ವಿಶ್ವ ಕನ್ನಡಿಗ ನ್ಯೂಸ್) : ಬಿರಿಯಾನಿ ಅನೇಕ ಜನರ ನೆಚ್ಚಿನ ಭಕ್ಷ್ಯವಾಗಿದೆ. ಬಿರಿಯಾನಿ ಅಚ್ಚುಮೆಚ್ಚಿನ ಖಾದ್ಯ ಎಂಬ ಕಾರಣಕ್ಕಾಗಿ ನಾವು ಆಗಾಗ್ಗೆ ವಾದ ವಿವಾದಗಳನ್ನು ನೋಡುತ್ತೇವೆ. ಆದರೆ ಇದು ವಿವಾದಗಳನ್ನು ಮೀರಿ ಪೂರ್ಣ ಪ್ರಮಾಣದ ಜಟಾಪಟಿ, ಹಲ್ಲೆ ಮತ್ತು ಕೊಲೆಗಳತ್ತ ಸಾಗುತ್ತಿರುವ ದೃಶ್ಯವು ಸಂಪೂರ್ಣ ಖಿನ್ನತೆಯನ್ನುಂಟುಮಾಡುತ್ತದೆ.
ಇಂತಹ ದುರಂತ ಘಟನೆಯೊಂದು ಮಹತ್ವದ ರೀತಿಯಲ್ಲಿ ಸುದ್ದಿಯ ಗಮನ ಸೆಳೆದಿದೆ. ಚೆನ್ನೈನಲ್ಲಿ ಬಿರಿಯಾನಿ ಹಂಚುವ ವಿಚಾರವಾಗಿ ನಡೆದ ಜಗಳದಲ್ಲಿ ಪತಿ-ಪತ್ನಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿತ್ತು. 74 ವರ್ಷದ ಪತಿ ತನ್ನ ಪತ್ನಿಗೆ ಬಿರಿಯಾನಿ ನೀಡದೆ ಮನೆಗೆ ತಂದಾಗ ಜಗಳ ಶುರುವಾಗಿದೆ. ತನಗೆ ಬಿರಿಯಾನಿ ಕೊಡುವಂತೆ ಪತ್ನಿ ಜಗಳ ಆರಂಭಿಸಿದ್ದು, ಬಳಿಕ ಅದು ಗಂಭೀರ ಸ್ವರೂಪಕ್ಕೆ ತಿರುಗಿತ್ತು. ಇದರೊಂದಿಗೆ ಪತಿ ಪತ್ನಿಗೆ ಬೆಂಕಿ ಹಚ್ಚಿದ್ದಾನೆ. ನಂತರ ಪತಿಯನ್ನು ಅಪ್ಪಿಕೊಂಡು ಇಬ್ಬರೂ ಸಾವನ್ನಪ್ಪಿದ್ದಾರೆ.
ಈ ದಾರುಣ ಘಟನೆಯ ನಂತರ ಬಿರಿಯಾನಿ ಹೆಸರಿನಲ್ಲಿ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಮೂರು ದಿನಗಳ ಹಿಂದೆ ನಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೀಡಿಯೊದಲ್ಲಿ, ಗ್ರೇಟರ್ ನೋಯ್ಡಾದ ಅನ್ಸಲ್ ಪ್ಸಾಜಾದಲ್ಲಿ ರೆಸ್ಟೋರೆಂಟ್ ಉದ್ಯೋಗಿಯನ್ನು ತಾನು ಆರ್ಡರ್ ಮಾಡಿದ ಬಿರಿಯಾನಿಯನ್ನು ತಡಮಾಡಿದ್ದಕ್ಕಾಗಿ ಮೂವರು ವ್ಯಕ್ತಿಗಳು ಥಳಿಸಿದ್ದಾರೆ.
ಮೊದಲಿಗೆ ಮೂವರೂ ಊಟಕ್ಕಾಗಿ ಕಾದು ಕುಳಿತಿದ್ದರು. ಅಷ್ಟರಲ್ಲಿ ಒಬ್ಬನೇ ಎದ್ದು ನೌಕರನಿಗೆ ಥಳಿಸಿದ. ಬಳಿಕ ಮತ್ತಿಬ್ಬರು ಸೇರಿಕೊಂಡು ಥಳಿಸಿದ್ದಾರೆ. ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಘಟನೆಯಲ್ಲಿ ಪ್ರವೇಶ್, ಮನೋಜ್ ಮತ್ತು ಕ್ರೆಸ್ ಆರೋಪಿಗಳಾಗಿದ್ದು, ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೂವರೂ ಚಿಕನ್ ಬಿರಿಯಾನಿ ಆರ್ಡರ್ ಮಾಡಿದರು. ಆದರೆ ಬಿರಿಯಾನಿ ಬರಲು ಸಮಯ ತೆಗೆದುಕೊಂಡಿದ್ದರಿಂದ ತಾಳ್ಮೆ ಕಳೆದುಕೊಂಡ ಪ್ರವೇಶ್ ನೌಕರನಿಗೆ ಥಳಿಸಿದ್ದಾರೆ. ಇದಾದ ಬಳಿಕ ಮತ್ತಿಬ್ಬರು ಥಳಿತದಲ್ಲಿ ಪಾಲ್ಗೊಂಡಿದ್ದರು. ಅಲ್ತಾಫ್ ಎಂಬ ಯುವಕನಿಗೆ ಥಳಿಸಲಾಗಿದೆ.
#WATCH | Greater Noida, UP: The staff of a private restaurant in Ansal mall was thrashed for a delay in their order. All three accused, residents of Dadri were arrested & were sent to jail: ADCP Vishal Pandey (10.11) pic.twitter.com/Uxn6igGQUQ — ANI UP/Uttarakhand (@ANINewsUP) November 11, 2022
#WATCH | Greater Noida, UP: The staff of a private restaurant in Ansal mall was thrashed for a delay in their order. All three accused, residents of Dadri were arrested & were sent to jail: ADCP Vishal Pandey (10.11) pic.twitter.com/Uxn6igGQUQ
— ANI UP/Uttarakhand (@ANINewsUP) November 11, 2022
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.