ಗೂನಡ್ಕ(ವಿಶ್ವಕನ್ನಡಿಗ ನ್ಯೂಸ್): SSF ಗೂನಡ್ಕ ಯುನಿಟ್ ಇದರ ವತಿಯಿಂದ ತಾಜುಲ್ ಉಲಮಾ ಅನುಸ್ಮರಣೆ ಹಾಗೂ ಉದ್ಯೋಗ ನಿಮಿತ್ತ ವಿದೇಶ ಪ್ರಯಾಣ ಮಾಡುತ್ತಿರುವ SSF ದ.ಕ ಈಸ್ಟ್ ಜಿಲ್ಲಾ ಕೋಶಧಿಕಾರಿ ಯಾಗಿರುವ ಸಿದ್ದೀಕ್ ಗೂನಡ್ಕ ರವರಿಗೆ ಬೀಳ್ಕೊಡುಗೆ ಕಾರ್ಯಕ್ರಮವು ಹಯಾತುಲ್ ಇಸ್ಲಾಂ ಮದರಸ ಗೂನಡ್ಕದಲ್ಲಿ ದಿನಾಂಕ 08-11-2022ರಂದು ಇಶಾ ನಮಾಝಿನ ಬಳಿಕ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು BJM ಗೂನಡ್ಕ ಇದರ ಅಧ್ಯಕ್ಷರಾದ ಅಬ್ದುಲ್ಲಾ ಹಾಜಿ ಕೊಪ್ಪದ ಕಜೆಯವರು ವಹಿಸಿದರು. BJM ಗೂನಡ್ಕ ಸದರ್ ಮುಅಲ್ಲಿಮರಾದ ಹಬೀಬ್ ಹಿಮಮಿ ಉಸ್ತಾದರು ದುಆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. SYS ಗೂನಡ್ಕ ಶಾಖೆ ಅಧ್ಯಕ್ಷರಾದ ಹನೀಫ್ ಝೈನಿ ಉಸ್ತಾದರು ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು. SYS ನಾಯಕರಾದ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ರವರು ಮುನ್ನುಡಿ ಮಾತುಗಳನ್ನಾಡಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮುಖ್ತಾರ್ ಹಿಮಮಿ ಮೇನಾಲರವರು ಕಾರ್ಯಕ್ರಮದ ಅನುಸ್ಮರಣಾ ಭಾಷಣ ಮಾಡಿದರು.ಮುಂದೆ SSF ಗೂನಡ್ಕ ಶಾಖೆಯ ಕಾರ್ಯಕರ್ತರು ಅಧೂರಿಯಾಗಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಹಾಗೂ SYS ಗೂನಡ್ಕ ಬ್ರಾಂಚ್ ವತಿಯಿಂದ ಸನ್ಮಾನಿಲಾಯಿತು, ಹಾಗೂ SSF ಗಾಂಧಿ ನಗರ ಯುನಿಟ್ ವತಿಯಿಂದ ಸಿದ್ದೀಕ್ ಗೂನಡ್ಕರವರನ್ನು ಶಾಲು ಹೊದಿಸಿ SYS ನಾಯಕರಾದ ಸಿದ್ದೀಕ್ ಕಟ್ಟೆಕ್ಕಾರ್ ರವರು ವಿಶೇಷ ಸ್ಮರಣಿಕೆ ನೀಡಿದರು.
ಕಾರ್ಯಕ್ರಮದ ಅತಿಥಿ ಗಳಾಗಿ SYS ನಾಯಕರುಗಳಾದ ಹಮೀದ್ ಬೀಜಕೊಚ್ಚಿ, ಸಿದ್ದೀಕ್ ಕಟ್ಟೆಕ್ಕಾರ್, ಶಮೀರ್ ಮೊಗರ್ಪಣೆ SSF ದ. ಕ ಈಸ್ಟ್ ಜಿಲ್ಲಾ ಕೋಶಾಧಿಕಾರಿ ಸಿದ್ದೀಕ್ ಗೂನಡ್ಕ ಹಾಗೂ ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಷನ್ ಮಾಜಿ ಅಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕ, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಅಬುಶಾಲಿ ಗೂನಡ್ಕ,BJM ಗೂನಡ್ಕ ಮಾಜಿ ಅಧ್ಯಕ್ಷರಾದ ಉಮ್ಮರ್ ಹಾಜಿ ಗೂನಡ್ಕ,BJM ಗೂನಡ್ಕ ಕಾರ್ಯದರ್ಶಿ ಉಮ್ಮರ್ ಪುತ್ರಿ ಗೂನಡ್ಕ,ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ರಾದ ಸಾದಿಕ್ ಕುಂಭಕ್ಕೋಡ್, ಇಲ್ಯಾಸ್ ಹಿಮಮಿ ,SYS ಸುಳ್ಯ ಕಾರ್ಯದರ್ಶಿ ಹಾರಿಸ್ ಸುಳ್ಯ ಹಾಗೂ KCF ನಾಯಕ ರಾದ ಮಜೀದ್ ಝುಹ್ರಿ, ಲತೀಫ್ ಸಲಾಲ, ಇಸ್ಮಾಯಿಲ್ ಮದನಿ , ಹಾಗೂ SSF ಸುಳ್ಯ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಸಾದಿಕ್ ಮಾಸ್ಟರ್,SSF ಸುಳ್ಯ ಡಿವಿಷನ್ ನಾಯಕರಾದ ಶಮೀರ್ DH ಮೊಗರ್ಪಣೆ,SSFಸುಳ್ಯ ಸೆಕ್ಟರ್ ಅಧ್ಯಕ್ಷರಾದ ಜಾಬಿರ್ ಎಂ. ಬಿ ಗೂನಡ್ಕ, ಹಾರಿಸ್ ಝಮ್ ಝಮ್ ಗೂನಡ್ಕ,SSF ಗೂನಡ್ಕ ಯುನಿಟ್ ಅಧ್ಯಕ್ಷರಾದ ಉನೈಸ್ ಪಿ. ಯು, ಹಾಗೂ SSf ಕಲ್ಲುಗುಂಡಿ ಯುನಿಟ್ ಅಧ್ಯಕ್ಷರಾದ ರಮ್ಶಾದ್ ಕಲ್ಲುಗುಂಡಿ, SSF ಗಾಂಧೀನಗರ ಯುನಿಟ್ ಕಾರ್ಯದರ್ಶಿ ಆರಿಫ್,SSF ಏನಾವರ ಯುನಿಟ್ ಅಧ್ಯಕ್ಷರಾಗಿರುವ ಇರ್ಫಾನ್, ಅಝೀಝ್ ಮಾಸ್ಟರ್ ಹಾಗೂ SYS,SSF,SBS ಇದರ ಹೆಚ್ಚಿನ ಕಾರ್ಯಕರ್ತರು, ಜಮಾಅತಿನ ಸದಸ್ಯರು ಭಾಗವಹಿಸಿದ್ದರು.
SSF ಸುಳ್ಯ ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಇಜಾಸ್ ಗೂನಡ್ಕ ರವರು ಸ್ವಾಗತಿಸಿ, SSF ಸುಳ್ಯ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಸಾದಿಕ್ ಮಾಸ್ಟರ್ ಕಲ್ಲುಗುಂಡಿ ರವರು ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.