ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಅಕ್ರಮವಾಗಿ ಸಾಗಿಸಲು ಯತ್ನಿಸಿದ 2 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ವಶಪಡಿಸಿಕೊಂಡಿದ್ದಾರೆ. ಕಾಸರಗೋಡು ಮೂಲದ ಮೂವರನ್ನು ಬಂಧಿಸಲಾಗಿದೆ.
ಕಾಸರಗೋಡು ನೆಲ್ಲಿಕುನ್ನ ಬಣಕಾರಕುನ್ನ ಅಬ್ದುಲ್ಲಾ ಫರ್ಹಾನ್, ತೆಕಿಲ್ ಫೆರಿಯ ಹಾಶಿಂ ಮುಬಾಶಿರ್ ಮತ್ತು ಬಂಕಾರಕುನ್ನ ಮುಹಮ್ಮದಲಿ ಎಂಬುವರಿಂದ ಅಕ್ರಮ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ವಿಮಾನ ನಿಲ್ದಾಣದಲ್ಲಿ ಕೈಬಿಟ್ಟಿದ್ದ ಬ್ಯಾಗ್ನಲ್ಲಿ 760 ಗ್ರಾಂ ಚಿನ್ನ ಕೂಡ ಪತ್ತೆಯಾಗಿದೆ. ಅಬ್ದುಲ್ಲಾ ಫರ್ಹಾನ್ ನಿಂದ 33,60,500 ರೂ.ಮೌಲ್ಯದ 650 ಗ್ರಾಂ ಚಿನ್ನಾಭರಣ, ಹಾಶಿಮ್ ಮುಬಾಶಿರ್ ನಿಂದ 42,18,720 ರೂ.ಮೌಲ್ಯದ 816 ಗ್ರಾಂ ಚಿನ್ನ ಮತ್ತು ಮುಹಮ್ಮದಲಿಯಿಂದ 44,97,900 ರೂ.ಮೌಲ್ಯದ 870 ಗ್ರಾಂ ಚಿನ್ನವನ್ನು ಕಸ್ಟಮ್ ವಶಪಡಿಸಿಕೊಂಡಿದೆ.
ದುಬೈನಿಂದ ಮಂಗಳೂರಿಗೆ ಬಂದಾಗ ತಪಾಸಣೆ ನಡೆಸಿದಾಗ ಇಷ್ಟು ಮೊತ್ತದ ಚಿನ್ನ ಪತ್ತೆಯಾಗಿದೆ. ಚಿನ್ನವನ್ನು ತೆಳುವಾದ ತಂತಿಗೆ ರೋಢಿಯಮ್ ಲೇಪಿಸಿ ಟ್ರಾಲಿ ಬ್ಯಾಗ್ನಲ್ಲಿ ಬಚ್ಚಿಟ್ಟು ಕಳ್ಳಸಾಗಣೆ ಮಾಡಲು ಯತ್ನಿಸಿದ್ದಾರೆ. ನಾಲ್ವರು ಇದೇ ಕೇಂದ್ರದಿಂದ ಇದೇ ರೀತಿಯಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡಲು ಯೋಜಿಸಿದ್ದರು ಎಂದು ಕಸ್ಟಮ್ಸ್ ಶಂಕೆ ವ್ಯಕ್ತಪಡಿಸಿದೆ. ಕೈಬಿಟ್ಟ ಬ್ಯಾಗ್ ನಲ್ಲಿದ್ದ 39,29,200 ರೂ ಮೌಲ್ಯದ 760 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.