ಬುರೈದ(ವಿಶ್ವಕನ್ನಡಿಗ ನ್ಯೂಸ್): ದಾರುಲ್ ಹಿಕ್ಮ ಎಜುಕೇಷನ್ ಸೆಂಟರ್ ಬೆಳ್ಳಾರೆ ಸೌದಿ ರಾಷ್ಟ್ರೀಯ ಸಮಿತಿ ಹಾಗೂ ಅಲ್ ಕಸೀಮ್ ಸಮಿತಿ ವತಿಯಿಂದ ದಾರುಲ್ ಹಿಕ್ಮ ಪ್ರಚಾರ ಸಮಾವೇಶ ಹಾಗೂ ಕಾಜೂರ್ ತಂಗಳ್ ಅವರಿಗೆ ಸನ್ಮಾನ ಕಾರ್ಯಕ್ರಮ ಬುರೈದ ರೌಳ ಆಡಿಟೋರಿಯಂ ನಲ್ಲಿ ನಡೆಯಿತು.
ICF ನೇತಾರರಾದ ಅಸ್ಸಯ್ಯದ್ ಅಬ್ದುಲ್ ಕಬೀರ್ ಜಲಾಲುದ್ದೀನ್ ತಂಗಳ್ ಅವರ ದುಃವಾ ದೊಂದಿಗೆ ಆರಂಭಗೊಂಡ ಸಭೆಯ ಅಧ್ಯಕ್ಷತೆಯನ್ನು ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಜನಾಬ್ ರಶೀದ್ ಹಾಜಿ ಬೆಳ್ಳಾರೆ ವಹಿಸಿದರು.
ಸಭೆಯಲ್ಲಿ ದಾರುಲ್ ಹಿಕ್ಮ ಸೌದಿ ಅರೇಬಿಯಾಕ್ಕೆ ಹೊಸದಾಗಿ ನೇಮಕಗೊಂಡ ಒರ್ಗನೈಸರ್ ಉಬೈದ್ ಮುಸ್ಲಿಯಾರ್ ಇಂದ್ರಾಜೆ ಬುರ್ದಾ ಆಲಾಪನೆ ಮಾಡಿದರು ನಂತರ ಸಾಲಿಹ್ ಬೆಳ್ಳಾರೆ ಸಂಸ್ಥೆಯ ಪರಿಚಯ ದೊಂದಿಗೆ ನೆರೆದವರನ್ನು ಸ್ವಾಗತಿಸಿದರು.
ದಾರುಲ್ ಹಿಕ್ಮ ರಿಯಾದ್ ಸಮಿತಿ ಸ್ಥಾಪಕಾಧ್ಯಕ್ಷರಾದ ಹನೀಫ್ ಬೆಳ್ಳಾರೆ ಕಾರ್ಯಕ್ರಮವನ್ನು ಉದ್ಘಾಟಟಿಸಿದರು. ದಾರುಲ್ ಹಿಕ್ಮ ರಾಷ್ಟ್ರೀಯ ಸಮಿತಿ ವತಿಯಿಂದ ಕಾಜೂರ್ ತಂಗಳ್ ಅವರಿಗೆ ಸನ್ಮಾನವನ್ನು ಮಾಡಲಾಯಿತು.
ಕಾರ್ಯಕ್ರಮದ ಮುಖ್ಯ ಪ್ರಭಾಷಣವನ್ನು ಮಾಡಿದ ಕಾಜೂರ್ ತಂಗಳ್ ಅವರು ಸುನ್ನಿ ಪ್ರಸ್ಥಾನದ ಹಳೆಯ ಘಟನೆಗಳನ್ನು ನೆನಪಿಸುತ್ತಾ ಅದಕ್ಕಾಗಿ ಉಳ್ಳಾಲ ತಂಗಳ್ ಹಾಗೂ MA ಉಸ್ತಾದರು ಮಾಡಿದ ತ್ಯಾಗ ಹಾಗೂ ಈಗ ನಮಗೆ ನೇತೃತ್ವ ನೀಡುತ್ತಿರುವ ಸುಲ್ತಾನುಲ್ ಉಲಮಾ AP ಉಸ್ತಾದರು ಶಿಕ್ಷಣದ ಮುಕಾಂತರ ಸಮುದಾಯಕ್ಕೆ ಸಲ್ಲಿಸುತ್ತಿರುವ ಸೇವೆಯನ್ನು ಸ್ಮರಿಸಿರಿದರು ಇವರ ನೇತೃತ್ವ ಹಾಗೂ ಮಾರ್ಗದರ್ಶನ ದಲ್ಲಿ ಪ್ರೇರೇಪಣೆಗೊಂಡು ನಮ್ಮ ಊರಿನಲ್ಲಿರುವ ಎಲ್ಲಾ ಸಂಸ್ಥೆಗಳು ಸ್ಥಾಪಿತಗೊಂಡಿರುವುದು. ಬೆಳ್ಳಾರೆ ದಾರುಲ್ ಹಿಕ್ಮ ಸಂಸ್ಥೆಯ ಕಾರ್ಯಾಚರಣೆ ಹಾಗೂ ಮುಂದಿನ ಪದ್ದತಿಗಳ ಕುರಿತು ಸಭೆಯಲ್ಲಿ ವಿವರಿಸಿದರು.
ಸಂಸ್ಥೆಯ ಉನ್ನತಿಗಾಗಿ ಕಳೆದ ಎಂಟು ವರ್ಷಗಳಿಂದ ಸೌದಿ ರಿಯಾದಿನಲ್ಲಿ ದಾರುಲ್ ಹಿಕ್ಮ ಕಮಿಟಿ ಸಕ್ರಿಯವಾಗಿ ಕಾರ್ಯಾಚರಿಸುತ್ತಿದೆ. ಈಗ ಅಲ್ ಕಸೀಮ್ , ಅಲ್ ಕೊಬಾರ್, ಜಿದ್ದಾ ದಲ್ಲಿ ಕಮಿಟಿಗಳಿವೆ ಇದುವರೆಗೆ ಅನೇಕ ಸಹಾಯ ಸಹಕಾರವನ್ನು ನೀಡಿದನ್ನು ನೆನಪಿಸಿದರು. ಕಾರ್ಯಕ್ರಮದಲ್ಲಿ ದಾರುಲ್ ಹಿಕ್ಮ ಸೌದಿ ರಾಷ್ಟ್ರೀಯ ಸಮಿತಿ ಹೊರತಂದ 2023 ಸಾಲಿನ ಕ್ಯಾಲೆಂಡರ್ ಬಿಡುಗಡೆ ಗೊಳಿಸಲಾಯಿತು. ನಂತರ ದಾರುಲ್ ಹಿಕ್ಮ ಅಲ್ ಕಸೀಮ್ ಸಮಿತಿಯನ್ನು ಪುನರಚಿಸಲಾಯಿತು. ಸಭೆಯಲ್ಲಿ ದಾರುಲ್ ಹಿಕ್ಮ ಸೌದಿ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಝಕರಿಯ ನೆಕ್ಕಿಲ , ಕೋಶಾಧಿಕಾರಿ ಅಝೀಜ್ ನೆಕ್ಕಿಲ, ದಾರುಲ್ ಹಿಕ್ಮ ಹಿತೈಷಿಗಳು KCF , ICF ನೇತಾರರು , ಕಾರ್ಯಕರ್ತರು ಭಾಗವಹಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.