(www.vknews.in) ನವಂಬರ್14 ಭಾರತದ ಮೊದಲ ಪ್ರಧಾನಿ ಚಾಚ ಜವಹಾರ ಲಾಲ್ ನೆಹರು ರವರ ಜನ್ಮದಿನ, ನೆಹರು ರವರಿಗೆ ಮಕ್ಕಳೆಂದರೆ ತುಂಬಾ ಅಚ್ಚು-ಮೆಚ್ಚು. ಭಾರತದಾದ್ಯಂತ ನವಂಬರ್ ೧೪ ರಂದು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತದೆ.ನಾಡಿನ ಸಮಸ್ತ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯ ತಿಳಿಸುತ್ತಾ,
*ಇಂದಿನ ಮಕ್ಕಳೇ ನಾಳಿನ ಪ್ರಜೆಗಳು* ಕೂಸು ಇದ್ದ ಮನಿಗೆ ಬೀಸಣಿಕೆ ಯಾತಕ? ಕೂಸು ಕಂದಯ್ಯ ಒಳ ಹೊರಗೆ ಆಡಿದರೆ, ಬೀಸಣಿಕೆ ಗಾಳಿ ಸುಳಿದಾವ ಎಂಬ ಜನಪದದಂತೆ,ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂಬಂತೆ, ಮಕ್ಕಳಿರುವ ಮನೆಯಲ್ಲಿ ಸಡಗರ-ಸಂಭ್ರಮಕ್ಕೆ ಬರವಿಲ್ಲ, ಎಷ್ಟೇ ಒತ್ತಡ,ನೋವುಗಳಿದ್ದರೂ ಮಕ್ಕಳು ತಮ್ಮತುಂಟಾಟ, ಚೇಷ್ಟೆಗಳಿಂದ ಎಲ್ಲವನ್ನು ಮರೆಸುತ್ತಾರೆ.
” ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ,ತಾಯಿಯೇ ಮೊದಲ ಗುರುವಾಗಿರುವುದರಿಂದ,ತೊದಲ ನುಡಿಯಿಂದ ಪ್ರಾರಂಭವಾಗುವ ಮಗುವಿನ ಎಲ್ಲಾ ಚಟುವಟಿಕೆಗಳನ್ನು ಅಮ್ಮ ಗ್ರಹಿಸಿ ತಿದ್ದುತ್ತಾ ಸಾಗುತ್ತಾಳೆ.”
ಮಕ್ಕಳು ಶೈಕ್ಷಣಿಕವಾಗಿ ಶಾಲೆಯಲ್ಲಿ ಎಷ್ಟೇ ಕಲಿತರೂ ಸಹ, ಮನೆಯಲ್ಲಿ ಮಕ್ಕಳಿಗೆ ಪಠ್ಯದ ವಿಷಯದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳ ಬಗ್ಗೆ ವಿಶೇಷ ಆಸಕ್ತಿ-ಕಾಳಜಿ ಮೂಡಿಸುವಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದೆ. ಮಕ್ಕಳು ಪಠ್ಯಕ್ಕೆ ಸೀಮಿತ ವಾಗದಂತೆ,ಮಕ್ಕಳ ವಿದ್ಯಾಭ್ಯಾಸದ ಮಟ್ಟ ಗ್ರಹಿಸಿ,ಅವರಲ್ಲಿ ಸಮಯ ಪ್ರಜ್ಞೆ ಮೂಡಿಸಿ,ಕಲಿಕೆಗೆ ಸೂಕ್ತ ವಾತಾವರಣ ಕಲ್ಪಿಸಿ,ಮಕ್ಕಳ ಕಲಿಕೆಗೆ ಅನುಗುಣವಾಗಿ ಉತ್ತಮ ಸಲಹೆ,ಪ್ರೋತ್ಸಾಹ, ಮಾರ್ಗದರ್ಶನದೊಂದಿಗೆ, ಮಕ್ಕಳೊಂದಿಗೆ ಸ್ನೇಹಿತರಂತೆ ಬೆರೆತು, ಭವಿಷ್ಯದ ಉತ್ತಮ ಪ್ರಜೆಯನ್ನಾಗಿಸಲು,ಉತ್ತಮ ಸಂಸ್ಕಾರ ಕಲಿಸಿ,ಮೌಲ್ಯಗಳನ್ನು ಬೆಳಸಿ,ಮಕ್ಕಳಿಗೂ ಪ್ರಶ್ನಿಸುವ, ಸ್ವಇಚ್ಛೆಯಿಂದ ಕಲಿಯಲು ಬಯಸುವ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿ ಮತ್ತು ನಾಯಕತ್ವದ ಗುಣ ಬೆಳೆಯಲು,ಮಕ್ಕಳಲ್ಲಿನ ಭಯ-ಆತಂಕ ದೂರಮಾಡಿ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಪೋಷಕರ ಸಮಯ ಮಕ್ಕಳಿಗೆ ಅತ್ಯಮೂಲ್ಯವಾಗಿದೆ.
ಇಂದಿನ ಯಾಂತ್ರಿಕ ಯುಗದಲ್ಲಿ ಮಾನವ ಬಿಡುವಿಲ್ಲದೇ ತನ್ನ ಕುಟುಂಬವನ್ನು ಅಡೆ-ತಡೆಯಿಲ್ಲದೇ ಮುನ್ನೆಡೆಸಲು,ತನ್ನ ಮಕ್ಕಳ ಉನ್ನತ ಭವಿಷ್ಯಕ್ಕಾಗಿ ಹಗಲಿರುಳು ದುಡಿಯುತ್ತಿದ್ದಾನೆ,ಮಕ್ಕಳು ಸಹ ಇದನ್ನ ಅರಿತು ನಡೆದರೆ ಪೋಷಕರು ಮಕ್ಕಳನ್ನೇ ಆಸ್ತಿ ಮಾಡುವುದರಲ್ಲಿ ಸಂಶಯ ಇಲ್ಲ.
ಸಿ.ಎಚ್.ನಾಗೇಂದ್ರಪ್ಪ. ಭದ್ರಾವತಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.