ಪಣಜಿ (ವಿಶ್ವ ಕನ್ನಡಿಗ ನ್ಯೂಸ್) : ಗೋವಾದ ಮಾಪುಸಾದಲ್ಲಿ ಬೈಕ್ ರೇಸ್ ವೇಳೆ ಸಂಭವಿಸಿದ ಅಪಘಾತದಲ್ಲಿ ಸವಾರನೊಬ್ಬ ಮೃತಪಟ್ಟಿದ್ದಾನೆ. ಮಡಗಾಂವ್ ನಿವಾಸಿ ಅಫ್ತಾಬ್ ಶೇಖ್ (20) ಮೃತ ದುರ್ದೈವಿ. ಇತರ ಬೈಕುಗಳು ಅಫ್ತಾಬ್ ಅವರ ಬೈಕಿಗೆ ಡಿಕ್ಕಿ ಹೊಡೆದಾಗ ಈ ಅಪಘಾತ ಸಂಭವಿಸಿದೆ.
ಭಾನುವಾರ ಬೆಳಿಗ್ಗೆ ೧೧.೩೦ ಕ್ಕೆ ರೇಸ್ ಪ್ರಾರಂಭವಾಯಿತು. ಅಫ್ತಾಬ್ 4 ನೇ ಲೈನ್ ನಲ್ಲಿ ಸ್ಪರ್ಧಿಸಿದ್ದರು. ಮೊಗ್ರಿಪ್ ರಾಷ್ಟ್ರೀಯ ಸೂಪರ್ ಕ್ರಾಸ್ ಚಾಂಪಿಯನ್ ಶಿಪ್ ನ ಭಾಗವಾಗಿ ಈ ಓಟವನ್ನು ಆಯೋಜಿಸಲಾಗಿತ್ತು. ಟ್ರ್ಯಾಕ್ ಮೇಲೆ ಬಿದ್ದ ನಂತರ ಯುವಕನ ಕುತ್ತಿಗೆ ಮತ್ತು ಎದೆಗೆ ಗಾಯಗಳಾಗಿವೆ. ಹಿಂದಿನಿಂದ ರೇಸರ್ ನ ಬೈಕ್ ಕೂಡ ಅಫ್ತಾಬ್ ಮೇಲೆ ಬಿತ್ತು.
ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರ ಗಾಯಗಳು ಗಂಭೀರವಾಗಿರುವುದರಿಂದ ಅವರನ್ನು ತಕ್ಷಣವೇ ಗೋವಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಚಿಕಿತ್ಸೆಯ ಸಮಯದಲ್ಲಿ ಅವರ ಸಾವು ದೃಢಪಟ್ಟಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.