ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್) ; 7 ಕೋಟಿ ಮೌಲ್ಯದ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿದ್ದ ಟ್ಯಾಟೂ ಕಲಾವಿದರಾದ ಕೇರಳದ ದಂಪತಿ ಜಾಮೀನಿನ ಮೇಲೆ ಹೊರಬಂದು ಮತ್ತೆ ಡ್ರಗ್ಸ್ ಮಾರಾಟ ಮಾಡಿದ್ದಾರೆ. ಕೊಟ್ಟಾಯಂ ಮೂಲದ ಸಿಗಿಲ್ ವರ್ಗೀಸ್ ಮಂಬರಂಪಿಲ್ (32) ಮತ್ತು ಕೊಯಮತ್ತೂರಿನ ವಿಷ್ಣು ಪ್ರಿಯಾ (22) ಅವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.
ಕಳೆದ ಮಾರ್ಚ್ನಲ್ಲಿ 7 ಕೋಟಿ ರೂಪಾಯಿ ಮೌಲ್ಯದ 12 ಕೆಜಿ ಹಶಿಶ್ ಎಣ್ಣೆಯೊಂದಿಗೆ ಅವರನ್ನು ಬಂಧಿಸಲಾಗಿತ್ತು. ಜಾಮೀನಿನ ಮೇಲೆ ಹೊರಬಂದ ನಂತರವೂ ಮಾದಕ ವಸ್ತು ಮಾರಾಟವನ್ನು ಮುಂದುವರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಉತ್ತರ ಬೆಂಗಳೂರಿನ ಕೊತ್ತನೂರಿನಲ್ಲಿ ವಾಸಿಸುತ್ತಿದ್ದರು. ಪರಪ್ಪನ ಅಗ್ರಹಾರದಲ್ಲಿ ಮಾದಕ ವಸ್ತು ದಂಧೆ ನಡೆಸುತ್ತಿದ್ದ ಅವರನ್ನು ಸೋಮವಾರ ಬಂಧಿಸಲಾಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಈ ಗ್ಯಾಂಗ್ ಡ್ರಗ್ಸ್ ತಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದಾಗ ಸಿಗಿಲ್, ವಿಷ್ಣು ಪ್ರಿಯಾ ಮತ್ತು ಸಹಾಯಕ ವಿಕ್ರಮ್ ಎಂಬುವರನ್ನು ಬಂಧಿಸಲಾಗಿದೆ. ಕಳೆದ ಮಾರ್ಚ್ನಲ್ಲಿ ಬಿಟಿಎಂ ಲೇಔಟ್ನಲ್ಲಿ ವಿಕ್ರಮ್ 80 ಗ್ರಾಂ ಹಶಿಶ್ ಆಯಿಲ್ನೊಂದಿಗೆ ಸಿಕ್ಕಿಬಿದ್ದಾಗ ಪೊಲೀಸರಿಗೆ ಡ್ರಗ್ಸ್ ಜಾಲದ ಬಗ್ಗೆ ಮಾಹಿತಿ ಸಿಕ್ಕಿತು. ಈತನ ಹೇಳಿಕೆ ಮೇರೆಗೆ ವಿಷ್ಣುಪ್ರಿಯಾ ಹಾಗೂ ಸಿಗಿಲ್ ಎಂಬುವರ ಮನೆಯನ್ನು ಶೋಧಿಸಿದ ಪೊಲೀಸರು 7 ಕೋಟಿ ಮೌಲ್ಯದ 12 ಕೆ.ಜಿ ಡ್ರಗ್ಸ್ ಗಳನ್ನೂ ವಶಪಡಿಸಿಕೊಳ್ಳಲಾಗಿತ್ತು..
ವಿಷ್ಣುಪ್ರಿಯಾ ಮತ್ತು ಸಿಗಿಲ್ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಒಟ್ಟಿಗೆ ಓದುತ್ತಿದ್ದರು. ಬಳಿಕ ಬಾಡಿಗೆ ಮನೆ ಪಡೆದು ಟ್ಯಾಟೂ ಕಲಾವಿದನಾಗಿ ಕೆಲಸ ಮಾಡುತ್ತಿದ್ದರು. ಪೊಲೀಸರ ಪ್ರಕಾರ, ಅವರು 2020 ರಿಂದ ಡ್ರಗ್ ದಂಧೆಗೆ ತಿರುಗಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.