ಎಂಪಿಎಂ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ – 2022 ಕಾರ್ಕಳ ನ 17: ಎಂ. ಪಿ. ಎಂ.ಸರಕಾರಿ ಪ್ರಥಮ ದರ್ಜೆ ಕಾಲೇಜು ಇಲ್ಲಿನ ಐಕ್ಯುಎಸಿ , ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಆಯೋಜಿಸಿದ ರಾಜಾರಾಂ ಮೋಹನ್ ರಾಯ್ ರವರ 250ನೇ ಜನ್ಮ ದಿನಾಚಣೆಯ ಹಾಗೂ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ – 2022 ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾಲೇಜಿನ ಗ್ರಂಥ ಪಾಲಕರಾದ ವೆಂಕಟೇಶರವರು ಮಹಿಳಾ ಸಬಲೀಕರಣಕ್ಕೆ, ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದವರು ರಾಜಾರಾಂ ಮೋಹನ್ ರಾಯ್.ಇವರ ಈ ಚಿಂತನೆಯಿಂದಾಗಿ ಎಂದು ಭಾರತದಲ್ಲಿ ಮೂಲೆ ಮೂಲೆಗಳಲ್ಲಿ ಗ್ರಂಥಾಲಯಗಳು ನಿರ್ಮಾಣವಾಗಿದೆ.ಉಚಿತವಾಗಿ,ಸುಲಭವಾಗಿ ಪುಸ್ತಕಗಳು ದೊರೆಯುತ್ತಿದೆ ಎಂಬ ಪ್ರಸ್ತಾವಿಕ ನುಡಿಗಳನ್ನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಕಿರಣ್ ಎಂ ಇವರು ಸಮಾಜ ಸುಧಾರಣೆಯನ್ನು ಭಾರತದಲ್ಲಿ ತಂದವರಲ್ಲಿ ರಾಜಾರಾಂ ಮೊದಲಿಗರು. ಬೇರೆ ದೇಶಗಳಲ್ಲಿ ವೈಚಾರಿಕತೆಯ ಆಧಾರದ ಮೇಲೆ ಸುಧಾರಣೆಯನ್ನು ತಂದರು ಆದರೆ ರಾಜಾರಾಂ ಸತಿಸಹಗಮನ ಪದ್ಧತಿಯನ್ನು ವೈಚಾರಿಕತೆಯ ಬದಲು ಧರ್ಮಶಾಸ್ತ್ರವನ್ನು ಬಳಸಿದರು ಎಂದು ಮಾತನಾಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ ಪ್ರಬಂಧ ಸ್ಪರ್ಧೆಗೆ ಬಹುಮಾನವನ್ನು ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಸುಚಿತ್ರಾ ನಿರೂಪಿಸಿ,ಉಪನ್ಯಾಸಕಿ ಸುಷ್ಮಾ ರಾವ್ ವಂದಿಸಿದರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.