ವಿ.ಕೆ.ನ್ಯೂಸ್ (ಮಾಲೂರು): ಕೋಲಾರದ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಂಟಿಯಾಗಿ 2022-2023 ನೇ ಸಾಲಿನ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಗಳನ್ನು ಕೋಲಾರ ನಗರದ ಎಂ.ಬಿ. ರಸ್ತೆಯಲ್ಲಿರುವ ಸೇಂಟ್ ಆನ್ಸ್ ಫ್ರೌಡ ಶಾಲೆಯಲ್ಲಿ ಆಯೋಜಿಸಲಾಗಿತ್ತು.
ಈ ಸ್ಪರ್ಧೆಯಲ್ಲಿ ಮಾಲೂರಿನ ಸಂತೆ ಮೈದಾನದ ಸಮೀಪ ಇರುವ ವಿವೇಕಾನಂದ ಬೆಸ್ಟ್ ಕಾನ್ವೆಂಟ್ ನ ವಿದ್ಯಾರ್ಥಿಗಳಾದ ಕು.ವಿವೇಕ್ ಎಂ ಪಾಂಜಾಲ್ ಮಿಮಿಕ್ರಿ ಸ್ಪರ್ಧೆಯಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದರೆ, ಅದೇ ರೀತಿ ಕು.ಲಿಖಿತ ಭರತನಾಟ್ಯ ಕ್ಷೇತ್ರದಲ್ಲಿ ಜಿಲ್ಲೆಗೆ ದ್ವೀತಿಯ ಸ್ಥಾನವನ್ನು ಪಡೆಯುವ ಮೂಲಕ ಜಿಲ್ಲೆಗೆ ಹಾಗೂ ನಮ್ಮ ತಾಲ್ಲೂಕಿಗೆ ವಿವೇಕಾನಂದ ಬೆಸ್ಟ್ ಕಾನ್ವೆಂಟ್ ಗೆ ಉತ್ತಮ ಹೆಸರನ್ನು ತಂದಿದ್ದಾರೆ.
ಇವರ ಜಿಲ್ಲಾ ಮಟ್ಟದ ಉತ್ತಮ ಸಾಧನೆಗೆ ವಿವೇಕಾನಂದ ಬೆಸ್ಟ್ ಕಾನ್ವೆಂಟ್ ನ ವ್ಯವಸ್ಥಾಪಕರಾದ ಶೈಲೇಶ್ ಕುಮಾರ್, ಶ್ರೀಮತಿ ರಜನಿ ಸ್ನೇಹಿತ್, ಮುಖ್ಯೋಪಾಧ್ಯಾಯರಾದ ಸೈಯದ್ ಈಜಾಜ್ ಉರ್ ರಹೀಮ್, ಅರಳೇರಿ ಮಂಜುನಾಥ್, ಹಾಗೂ ಪ್ರಾಥಮಿಕ, ಫ್ರೌಡ ಶಾಲೆಯ ಎಲ್ಲಾ ಶಿಕ್ಷಕ ಸಿಬ್ಬಂದಿ ವರ್ಗ ಅವರಿಗೆ ಅಭಿನಂದನೆ ಅರ್ಪಿಸಿದ್ದಾರೆ.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.