(www.vknews.in) ಮಂಗಳೂರಿನ ರಿಕ್ಷಾದಲ್ಲಿ ನಡೆದ ಸ್ಪೋಟ ಪ್ರಕರಣವು ಉಗ್ರಚಟುವಟಿಕೆ ಮತ್ತೆ ಗರಿಗೆದರಿದೆಯಾ? ಎಂಬ ಸಂಶಯವನ್ನು ಹುಟ್ಟು ಹಾಕಿದೆ.
ವಿಮಾನ ನಿಲ್ದಾಣ ಸ್ಪೋಟಿಸಲು ಈ ಹಿಂದೆ ಸಂಚು ಹೂಡಿದ ಆದಿತ್ಯರಾವ್ ಎಂಬಾತನನ್ನು ಬಂದಿಸಲಾಗಿತ್ತು. ಹಾಗೇ ನೋಡಿದರೆ ದೇಶದಲ್ಲಿ ನಡೆದ ಹಲವಾರು ಬಾಂಬ್ ಸ್ಪೋಟ ಪ್ರಕರಣಗಳಲ್ಲಿ ಹಿಂದೂ, ಮುಸ್ಲಿಂ ನಾಮಧಾರಿಗಳನ್ನು ಬಂದಿಸಲಾಗಿತ್ತು.ಆ ಮೂಲಕ ಭಯೋತ್ಪಾದಕರಿಗೆ ಧರ್ಮ ಜಾತಿ ಇಲ್ಲ ಎಂಬ ಅಂಶವನ್ನು ಅವರೇ ನಿರೂಪಿಸಿದ್ದರು. ಇದೀಗ ಮಂಗಳೂರಲ್ಲಿ ನಡೆದ ಸ್ಪೋಟ ಪ್ರಕರಣವೂ ಹಲವಾರು ಸಂಶಯಗಳಿಗೆ ಎಡೆಮಾಡಿ ಕೊಟ್ಟಿದೆ. ಎಲ್ಲಾ ಆಯಾಮಗಳಲ್ಲೂ ಇದನ್ನು ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಜನರ ಮುಂದಿಡ ಬೇಕಾದ ಕೆಲಸ ಆಗ ಬೇಕಿದೆ.ಇದು ಉಗ್ರಚಟುವಟಿಕೆಯೇ ಆಗಿದ್ದರೆ ಮುಖ ಹೆಸರು ನೋಡದೇ ಅವರ ಹೆಡೆ ಮುರಿ ಕಟ್ಟುವ ಕೆಲಸ ಆಗಲೇ ಬೇಕು.ಧರ್ಮ, ಜಾತಿಯ ಬೇಧವಿಲ್ಲದೇ ದೇಶದ ಪ್ರಜೆಗಳು ಬೀದಿಗಿಳಿದು ಇದರ ವಿರುದ್ದ ಖಂಡನೆ ವ್ಯಕ್ತಪಡಿಸುವ ಮೂಲಕ ಉಗ್ರರ ವಿರುದ್ದ ದೇಶದ ಜನರು ಇದ್ದಾರೆ ಎಂದು ತೋರಿಸಿ ಕೊಡಬೇಕಾದ ಜರೂರತ್ತೂ ಇದೆ. ಭಯೋತ್ಪಾದಕ ಚಟುವಟಿಕೆಗಳು ಯಾವುದಾದರೂ ಒಂದು ಧರ್ಮ ದೇಶದ ವಿರುದ್ದ ಮಾತ್ರ ಆಗಿರುವುದಿಲ್ಲ.ಒಟ್ಟಾರೆ ಅದು ಮಾನವರ ವಿರುದ್ದವಾಗಿದೆ. ಆದರೆ ಉಗ್ರ ಚಟುವಟಿಕೆಯನ್ನು ಖಂಡಿಸುವ ಮುಂಚೆ ಅಗ ಬೇಕಾದ ಕೆಲಸವೇನೆಂದರೆ ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಹೊಡಿ ಬಡಿ ಕಡಿ ಸಂಸ್ಕೃತಿ ಯ ಉದ್ರೇಕ ಬಾಷಣಗಳಿಂದಾಗಿ ಹಾಗೆಯೇ ಅಧಿಕಾರಸ್ಥರ ತಾರತಮ್ಯ ನೀತಿಯಿಂದಾಗಿ ಜನರೆಡೆಯಲ್ಲಿ ಉಂಟಾಗುವ ಅರಾಜಕತಾ ಮನೋಭಾವಕ್ಕೆ ಸೂಕ್ತ ಚಿಕಿತ್ಸೆ ನೀಡಬೇಕಾಗಿದೆ. ಇದು ಕಾನೂನು ವ್ಯವಸ್ಥೆ ಭದ್ರವಾಗಿದ್ದು ನಿಕ್ಷಪಕ್ಷಪಾತವಾಗಿ ಗಟ್ಟಿಯಾದರೆ ಮಾತ್ರ ಸಾಧ್ಯ. ಉಗ್ರ ಭಾಷಣಗಾರರ ವಿರುದ್ದ ಮರ್ಜಿಗೆ ಒಳಗಾಗದೇ ಕ್ರಮ ಕೈಗೊಳ್ಳುವ ತಾಕತ್ತು ಅಧಿಕಾರಿಗಿಳಿಗೆ ಇರಬೇಕು. ಅದೇ ರೀತಿ ಪ್ರಗತಿಯ ಆಧಾರದಲ್ಲಿ ರಾಜಕಾರಣ ಮಾಡದೇ ಬರೀ ಭಾವನಾತ್ಮಕ ವಿಚಾರಗಳ ಹಿಂದೆ ದುಂಬಾಲು ಬಿದ್ದು ಮತ ಯಾಚಿಸುವವರನ್ನು ಮನೆಗೆ ಕಳುಹಿಸುವ ಕೆಲಸವನ್ನೂ ಜನರು ಮಾಡ ಬೇಕಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.