ಕತರ್ ನಲ್ಲಿ ವಿಶ್ವಕಪ್ ಫುಟ್ಬಾಲ್ ಪಂಧ್ಯಕೂಟದ ಉದ್ಘಾಟನಾ ಸಂಧರ್ಭದಲ್ಲಿ… ಖ್ಯಾತ ಹಾಲಿವುಡ್ ನಟ ಮೋರ್ಗನ್ ಫ್ರೀಮ್ಯಾನ್ ಅವರು ಕತರ್ ನ ಭಿನ್ನ ಸಾಮರ್ಥ್ಯದ ಯುವಕ ಘಾನಿಮ್ ಅವರೊಂದಿಗೆ ನಡೆದ ಸಂಭಾಷಣೆಯಲ್ಲಿ… ಹಲವು ದೇಶಗಳು, ಹಲವು ವರ್ಗಗಳು, ಹಲವು ಭಾಷೆಗಳು ಹಾಗೂ ಹಲವು ಸಂಸೃತಿಗಳು ಇಲ್ಲಿ ಒಂದುಗೂಡುತ್ತವೆ… ಇದನ್ನು ಹೇಗೆ ಸ್ವೀಕರಿಸಬಹುದು….?
ಮೋರ್ಗನ್ ಅವರ ಮಾತಿಗೆ ವಿವಿಧ ಮನರಂಜನೆಗಳೊಂದಿಗೆ, ವಿವಿಧ ಶೈಲಿಯ ಭಾಷೆಯೊಂದಿಗೆ ಒಂದು ಗೂಡಿದ ಒಂದು ಜನಸಮೂಹಕ್ಕೆ ಕತಾರ್ ಕುರಾನಿನ ವಚನದ ಮೂಲಕ ಸಂದೇಶ ನೀಡಿದ್ದು… ಶ್ಲಾಘನೀಯ…
“ಓ ಜನರೇ, ನಾವು ನಿಮ್ಮನ್ನು ಒಬ್ಬ ಪುರುಷ ಮತ್ತು ಒಬ್ಬ ಸ್ತ್ರೀಯಿಂದ ಸೃಷ್ಟಿಸಿದೆವು. ನೀವು ಪರಸ್ಪರ ಗುರುತಿಸಿಕೊಳ್ಳುವ ಸಲುವಾಗಿ ನಾವು ನಿಮ್ಮನ್ನು ವಿವಿಧ ಜನಾಂಗಗಳಾಗಿಯೂ, ವಿವಿಧ ಗೋತ್ರಗಳಾಗಿಯೂ ಮಾಡಿದೆವು. ನಿಮ್ಮ ಪೈಕಿ ಅತ್ಯಂತ ಧರ್ಮನಿಷ್ಠೆಯಿರುವವನೇ ವಾಸ್ತವದಲ್ಲಿ ಅಲ್ಲಾಹನ ಬಳಿ ಅತಿ ಹೆಚ್ಚು ಗೌರವಕ್ಕೆ ಪಾತ್ರನು. ನಿಶ್ಚಯವಾಗಿಯೂ ಅಲ್ಲಾಹು ಸರ್ವಜ್ಞನೂ ಸೂಕ್ಷಜ್ಞನೂ ಆಗಿರುತ್ತಾನೆ….”
ಕತರ್ ಕಾಲ್ಚೆಂಡಿನ ಮೂಲಕ ಪ್ರಪಂಚವನ್ನು ಆಹ್ವಾನಿಸಿದಾಗಲೂ…. ಖುರಾನಿನ ವಚನವನ್ನು ಪಟಿಸಿದ ಆ ಶಬ್ಧವು ಇಂದು ಪ್ರಪಂಚಕ್ಕೆ ಕೇಳಿಸವಂತಾಗಿದೆ…
✍️ಕೆಎಸ್ಎಮ್ ಎಲಿಮಲೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.