ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ಇತ್ತೀಚೆಗೆ ದಿನಾಂಕ 13.11.2022ರಂದು ಕಾಣಿಯೂರಿನಲ್ಲಿ ವಿಶ್ವ ಹಿಂದೂ ಪರಿಷತ್, ಭಜರಂಗ ದಳ, ಮಾತೃವಾಹಿನಿ ಹಾಗೂ ಹಿಂದೂ ಜಾಗರಣ ವೇದಿಕೆ ಎಂಬ ಹೆಸರಿನ ಸಂಘಟನೆಗಳು ಏರ್ಪಡಿಸಿದ್ದ ಹಿಂದೂ ಬೃಹತ್ ಜಾಗೃತಿ ಸಮಾವೇಷದಲ್ಲಿ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ, ಮುರಲೀಕೃಷ್ಣ ಹಸಂತಡ್ಕ , ಚಿನ್ಮಯ ರೈ ಈಶ್ವರಮಂಗಲ, ಹಾಗೂ ರಘು ಸಕಲೇಶಪುರ ಎಂಬವರು ಅನ್ಯ ಧರ್ಮಗಳನ್ನು ಹೀಯ್ಯಾಳಿಸಿ ಅವರನ್ನು ದ್ವೇಷಿಸುವಂತೆ ಸ್ವಧರ್ಮೀಯರನ್ನು ಪ್ರೇರೇಪಿಸುವ ಮತ್ತು ಕಾನೂನನ್ನು ಕೈಗೆತ್ತಿಕೊಂಡು ಹಿಂಸಾಚಾರ ಎಸಗುವಂತೆ ಜನರನ್ನು ಉದ್ರೇಕಿಸುವ ದ್ವೇಷ ಭಾಷಣವನ್ನು ಮಾಡಿರುತ್ತಾರೆ.
ಈ ದ್ವೇಷ ಭಾಷಣ ನಡೆದು ಇಂದಿಗೆ 8 ದಿನಗಳು ಆಗಿಹೋದರೂ ತಮ್ಮ ಪೊಲೀಸ್ ಇಲಾಖೆಯಿಂದ ಯಾವುದೇ ಕ್ರಮ ಕೈಗೊಳ್ಳದಿರುವುದು ಅತ್ಯಂತ ಆತಂಕಕಾರಿಯಾಗಿದೆ.ಇಲಾಖೆಯು ಈ ಪ್ರಕರಣದಲ್ಲಿ ಕೇಸು ದಾಖಲಿಸದೇ ಸುಮ್ಮನಿರುವುದು ಸುಪ್ರೀಂ ಕೋರ್ಟ್ ನ ಆದೇಶದ ಸ್ಪಷ್ಟ ಉಲ್ಲಂಘನೆ ಆಗಿರುತ್ತದೆ ಈ ಪ್ರಕರಣ ನಡೆದಿರುವುದು ದ ಕ ಜಿಲ್ಲೆಯ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಾಗಿರುತ್ತದೆ ,ಕಾಣಿಯೂರು ನಲ್ಲಿ ನಡೆದ ಈ ಸಭೆಗೆ ಬೆಳ್ಳಾರೆ ಪೊಲೀಸರು ಬಂದೋ ಬಸ್ತ್ ಮಾಡಿರುತ್ತಾರೆ ಮತ್ತು ಈ ಸಭೆಯ ಭಾಷಣವನ್ನು ವಿಡಿಯೋ ರೆಕಾರ್ಡ್ ಮಾಡಿರುತ್ತಾರೆ,
ಈ ಹಿಂದೆ ಇದೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಸೂದ್ ಹಾಗೂ ಪ್ರವೀಣ್ ನೆಟ್ಟಾರ್ ಎಂಬ ಯುವಕರ ಹತ್ಯೆ ನಡೆಡಿದ್ದು, ಇದರ ಮಾರನೇ ದಿನವೇ ಮಂಗಳೂರು ನಲ್ಲಿ ಫಾಝಿಲ್ ಎಂಬ ಯುವಕನ ಹತ್ಯೆ ನಡೆದಿರುವುದು ಪರಸ್ಪರ ಕೋಮು ದ್ವೇಷದಿಂದಾಗಿರುತ್ತದೆ ಸಂದರ್ಭದಲ್ಲಿ ಜಿಲ್ಲೆಯುಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣ ಆಗಿರುವುದು ಪೊಲೀಸ್ ಇಲಾಖೆಗೆ ಗೊತ್ತಿರುವ ವಿಷಯವಾಗಿರುತ್ತದೆ. ಈಗ ಶಾಂತಿ ನೆಮ್ಮದಿ ನೆಲೆಸಿರುವ ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕೋಮು ಸಂಘರ್ಷ ಉಂಟಾಗಿ ಇನ್ನು ಹಲವು ಹತ್ಯೆಗಳು ನಡೆಯಲಿ ಎಂಬ ದುರುದ್ದೇಶ ಇಟ್ಟುಕೊಂಡು ಈ ಮೇಲಿನ ವ್ಯಕ್ತಿಗಳು ಕಾಣಿಯೂರು ಎಂಬಲ್ಲಿ ಸಭೆ ನಡೆಸಿ,ಜನರನ್ನು ಉದ್ರೇಕಿಸುವ ರೀತಿಯಲ್ಲಿ ದ್ವೇಷ ಬಾಷಣ ಮಾಡಿರುತ್ತಾರೆ, ಯಾವುದೇ ವ್ಯಕ್ತಿ ಹಾಗೂ ಧರ್ಮಗಳ ವಿರುದ್ಧ ದ್ವೇಷ ಮಾಡುವುದನ್ನು ಕಾಂಗ್ರೆಸ್ ಪಕ್ಷ ಸಹಿಸುವುದಿಲ್ಲ,
ಆದ್ದರಿಂದ ತಾವು ಸುಪ್ರೀಂ ಕೋರ್ಟ್ ನ ಆದೇಶದಂತೆ ಈ ಪ್ರಕರಣದಲ್ಲಿ ದ್ವೇಷ ಬಾಷಣ ಮಾಡಿರುವ ಆರೋಪಿಗಳ ವಿರುದ್ದ ಕೇಸು ದಾಖಲಿಸಿ ,ಜಿಲ್ಲೆಯ ಕೋಮು ಸಾಮಾರಸ್ಯವನ್ನು ಕಾಪಾಡುವಂತೆ ವಿನಂತಿಸಿಕೊಂಡಿದ್ದೇವೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.