ದುಬೈ (ವಿಶ್ವ ಕನ್ನಡಿಗ ನ್ಯೂಸ್) : ಪಾಸ್ಪೋರ್ಟ್ನಲ್ಲಿ ಒಂದೇ ಹೆಸರಿರುವವರಿಗೆ ಯುಎಇ ಪ್ರವೇಶಿಸುವ ವಿಚಾರವನ್ನು ಏರ್ ಇಂಡಿಯಾ ಸ್ಪಷ್ಟಪಡಿಸಿದೆ. ತಮ್ಮ ಪಾಸ್ಪೋರ್ಟ್ನಲ್ಲಿ ಕೇವಲ ಒಂದು ಹೆಸರನ್ನು (ಒಂದೇ ಹೆಸರು) ನಮೂದಿಸಿರುವ ಸಂದರ್ಶಕ ವೀಸಾದಾರರಿಗೆ ಯುಎಇಗೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ ಎಂದು ಏರ್ ಇಂಡಿಯಾ ಎಕ್ಸ್ಪ್ರೆಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇದು ನಿವಾಸಿ ವೀಸಾದಲ್ಲಿರುವ ನಿವಾಸಿಗಳಿಗೆ ಅನ್ವಯಿಸುವುದಿಲ್ಲ. ಇದನ್ನು ಏರ್ ಇಂಡಿಯಾ ಉದಾಹರಣೆಯೊಂದಿಗೆ ಸ್ಪಷ್ಟಪಡಿಸಿದೆ. ಪಾಸ್ಪೋರ್ಟ್ನಲ್ಲಿ ಸರ್ ನೇಮ್ ಮತ್ತು ಗಿವ್ ನೇಮ್ ಅಡಿಯಲ್ಲಿ ಪ್ರವೀಣ್ ಮಾತ್ರ ನಮೂದಿಸಿದರೆ ಅವರು ಪ್ರಯಾಣಿಸಲು ಅನುಮತಿ ಪಡೆಯುವುದಿಲ್ಲ. ಪ್ರವೀಣ್ ಎಂದು ಗಿವ್ ನೇಮ್ ಮತ್ತು ಸರ್ ನೇಮ್ ಕುಮಾರ್ ಎಂದು ಸೇರಿಸಿದರೆ ಪ್ರಯಾಣ ಅನುಮತಿ ಸಿಗುತ್ತದೆ. ಅದೇ ರೀತಿ ಸರ್ ನೇಮ್ ಮತ್ತು ಗಿವ್ ನೇಮ್ ನಲ್ಲಿ ಎಲ್ಲೋ ಒಂದು ಕಡೆ ಪ್ರವೀಣ್ ಕುಮಾರ್ ಎಂದು ಸೇರಿಸಿದರೂ ಈ ಪಾಸ್ ಪೋರ್ಟ್ ಹೊಂದಿರುವವರಿಗೆ ಯುಎಇ ಪ್ರವೇಶಿಸಲು ಅವಕಾಶ ಇದೆ.
ಪಾಸ್ಪೋರ್ಟ್ನಲ್ಲಿ ಒಂದೇ ಹೆಸರಿನ ಪ್ರಯಾಣಿಕರಿಗೆ ಯುಎಇ ಪ್ರವೇಶ ಅನುಮತಿ ನಿರಾಕರಿಸಿದೆ. ತಮ್ಮ ಪಾಸ್ಪೋರ್ಟ್ನಲ್ಲಿ ಒಂದೇ ಹೆಸರನ್ನು ಹೊಂದಿರುವವರಿಗೆ ಯುಎಇಯಲ್ಲಿ ಸಂದರ್ಶಕ-ಪ್ರವಾಸಿ ವೀಸಾವನ್ನು ನೀಡಲಾಗುವುದಿಲ್ಲ ಎಂದು ಯುಎಇ ರಾಷ್ಟ್ರೀಯ ಮುಂಗಡ ಮಾಹಿತಿ ಕೇಂದ್ರ (ಎನ್ಎಐಸಿ) ತಿಳಿಸಿದೆ. ಪಾಸ್ಪೋರ್ಟ್ನಲ್ಲಿ ಹೆಸರು ಅಥವಾ ಸರ್ ನೇಮ್ ಮಾತ್ರ ನೀಡಿದವರಿಗೆ ಇದು ತೊಂದರೆಯಾಗಲಿದೆ.
UAE ಯಲ್ಲಿನ ಟ್ರಾವೆಲ್ ಏಜೆಂಟ್ಗಳಿಗೆ ಏರ್ ಇಂಡಿಯಾ ಎಕ್ಸ್ಪ್ರೆಸ್ ಹೊರಡಿಸಿದ ಸೂಚನೆಯು UAE ಗೆ ಮತ್ತು ಅಲ್ಲಿಂದ ಪ್ರಯಾಣಿಸುವ ಸಂದರ್ಶಕ ಮತ್ತು ಪ್ರವಾಸಿ ವೀಸಾದಲ್ಲಿರುವವರು ತಮ್ಮ ಪಾಸ್ಪೋರ್ಟ್ಗಳಲ್ಲಿ ಮೊದಲ ಹೆಸರು ಮತ್ತು ಸರ್ ನೇಮ್ ಅನ್ನು ಹೊಂದಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಹೇಳುತ್ತದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.